Editor

‘ಬಸವನಾಡಲ್ಲಿ ಭ್ರಷ್ಟರಿಗಿಲ್ಲ ಅವಕಾಶ’ – ಸಚಿವೆ ಶಶಿಕಲಾ ಜೊಲ್ಲೆಗೆ ಘೇರಾವ್ ಕೂಗಿದ ವಿಜಯಪುರ ಜನತೆ

ವಿಜಯಪುರ: ಧ್ವಜಾರೋಹಣ ಮಾಡದಂತೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯೂ ಆಗಿರುವ ಶಶಿಕಲಾ ಜೊಲ್ಲೆ ಅವರಿಗೆ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ. ಇಂದು 75 ನೇ ಸ್ವಾತಂತ್ರೋತ್ಸವ ಹಿನ್ನೆಲೆ ನಗರದ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣಕ್ಕ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯನ್ನು ತಡೆದ ಮಹಿಳೆಯರು, ಭ್ರಷ್ಟಾಚಾರ ಆರೋಪ ಹೊತ್ತಿರುವ ನೀವು ಧ್ವಜಾರೋಹಣ ಮಾಡದಂತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಚಿವೆ ಬರುತ್ತಿದ್ದಂತೆ ಭ್ರಷ್ಟರಿಗೆ ಬಸವ ನಾಡಿನಲ್ಲಿ ಅವಕಾಶ […]

‘ಬಸವನಾಡಲ್ಲಿ ಭ್ರಷ್ಟರಿಗಿಲ್ಲ ಅವಕಾಶ’ – ಸಚಿವೆ ಶಶಿಕಲಾ ಜೊಲ್ಲೆಗೆ ಘೇರಾವ್ ಕೂಗಿದ ವಿಜಯಪುರ ಜನತೆ Read More »

ಕಬಕ: ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್ ಡಿ‌ಪಿಐ ಕಾರ್ಯಕರ್ತರು| ಸಾವರ್ಕರ್- ಟಿಪ್ಪು ಹೆಸರಿನಲ್ಲಿ ತಗಾದೆ…!

ಪುತ್ತೂರು : ಸ್ವಾತಂತ್ರ್ಯ ರಥದಲ್ಲಿ ವೀರ ಸಾವರ್ಕರ್ ಫೋಟೊದ ಬದಲು ಟಿಪ್ಪು ಸುಲ್ತಾನ್ ಫೋಟೊ ಅಳವಡಿಸುವಂತೆ ಆಗ್ರಹಿಸಿ ಎಸ್ ಡಿಪಿಐ ಸಂಘಟನೆಯ ಕಾರ್ಯಕರ್ತರ ತಂಡ ರಥಕ್ಕೆ ತಡೆಒಡ್ಡಿದ ಘಟನೆ ಆ.15ರಂದು ಪುತ್ತೂರಿನ ಹೊರವಲಯ ಕಬಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬಳಿಕ ಪುತ್ತೂರು ನಗರ ಠಾಣೆ ಪೊಲೀಸರ ಸಕಾಲಿಕ ಕ್ರಮದಿಂದ ಸಂಭಾವ್ಯ ಸಂಘರ್ಷ ತಪ್ಪಿದೆ. ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದ ದಿನ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ಎಸ್ ಡಿ.ಪಿ.ಐ ಕಾರ್ಯರ್ತರು ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ತಡೆ

ಕಬಕ: ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್ ಡಿ‌ಪಿಐ ಕಾರ್ಯಕರ್ತರು| ಸಾವರ್ಕರ್- ಟಿಪ್ಪು ಹೆಸರಿನಲ್ಲಿ ತಗಾದೆ…! Read More »

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ…

ನವದೆಹಲಿ: ಅಫ್ಘಾನಿಸ್ತಾನದ ಯುವಕ ಹಾಗೂ ಫ್ರಾನ್ಸ್​ನ ಯುವತಿ ನಡುವೆ ಭಾರತದಲ್ಲಿ ಪ್ರೀತಿ ಚಿಗುರಿ ಕೊನೆಗೆ ಇಲ್ಲಿಯೇ ಹೈಕೋರ್ಟ್​ನಿಂದ ಇವರ ಲವ್​ ಸ್ಟೋರಿ ಸುಖಾಂತ್ಯಗೊಂಡಿರುವ ಘಟನೆ ನಡೆದಿದೆ. ಇವರಿಬ್ಬರೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಇಬ್ಬರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಮಾತಿಗೆ ಮಾತು ಬೆಳೆದು, ಸಲುಗೆಯಾಗಿ, ಅದು ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದಿದ್ದಾರೆ. ನಂತರ ದೆಹಲಿಯ ಮಸೀದಿಯೊಂದರಲ್ಲಿ ವಿವಾಹವಾಗಿದ್ದರು. ಆದರ ದುರದೃಷ್ಟವಶಾತ್​ ಇವರು ವಾಪಸ್​ ಹೋಗಲು ಆಗಲಿಲ್ಲ. ಇದಕ್ಕೆ ಕಾನೂನು ಅಡಚಣೆ ಉಂಟಾಯಿತು. ಏಕೆಂದರೆ ಈ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ… Read More »

ಇಂದಿನಿಂದಲೇ ನವಕರ್ನಾಟಕ ನಿರ್ಮಾಣದತ್ತ ಹೆಜ್ಜೆ – ನೂತನ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದ್ದು ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಯನ್ನು ಉದ್ದೇಶಿಸಿ‌ ಮಾತನಾಡಿದರು. ಪ್ರಜಾಪ್ರಬುತ್ವ ಯಶಸ್ವಿಯಾಗಲು ಸಂವಿಧಾನ ಮೂಲ ಕಾರಣವಾಗಿದೆ.ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆರಂಭವಾಗುತ್ತದೆ. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ, ಮಾನವ ಸಂಪನ್ಮೂಲ ಬಳಸಿಕೊಂಡು ಹೊಸ ತಂತ್ರಜ್ಞಾನ ಬಳಕೆ ಮಾಡಿ, ವೈಜ್ಞಾನಿಕವಾಗಿ ಕೃಷಿ, ಸೇವಾ ವಲಯವನ್ನ

ಇಂದಿನಿಂದಲೇ ನವಕರ್ನಾಟಕ ನಿರ್ಮಾಣದತ್ತ ಹೆಜ್ಜೆ – ನೂತನ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ Read More »

ಮಧ್ಯರಾತ್ರಿ ಸಿಕ್ಕಿದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕಿದೆ – ಸ್ವಾತಂತ್ರ್ಯ ಧ್ವಜಾರೋಹಣ ಬಳಿಕ ಸಿಎಂ ಬೊಮ್ಮಾಯಿ ಕರೆ

ಬೆಂಗಳೂರು : ‘ದೇಶಕ್ಕೆ ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕು. ಅಂತಹ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ’ ಎಂದು ನಾಡಿನ ಜನತೆಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. 1947 ರಲ್ಲಿ ಬಂದ ಸ್ವಾತಂತ್ರ್ಯ ಸಾತ್ವಿಕ ಹೋರಾಟದಿಂದ ಬಂದಿದೆ. ನಾವೆಲ್ಲ 75 ವರ್ಷ ಪೂರೈಸಿದ್ದೇವೆ, ಸಿಕ್ಕಿದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಜನತೆ ಚಿಂತಿಸಬೇಕು ಎಂದವರು ತಿಳಿಸಿದರು. ಪ್ರಜಾಪ್ರಭುತ್ವದ ಬುನಾದಿಯ ಮೇಲೆ ಮುನ್ನಡೆಯಬೇಕಾಗಿದೆ. ಅಮೃತ ಮಹೋತ್ಸವವನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕರೆ ನೀಡಿದರು. ಸ್ವಾತಂರ್ತ್ಯ ದಿವಸವನ್ನು ಅರ್ಥಪೂರ್ಣವಾಗಿ ಹಾಗೂ

ಮಧ್ಯರಾತ್ರಿ ಸಿಕ್ಕಿದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕಿದೆ – ಸ್ವಾತಂತ್ರ್ಯ ಧ್ವಜಾರೋಹಣ ಬಳಿಕ ಸಿಎಂ ಬೊಮ್ಮಾಯಿ ಕರೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ವಾರಭವಿಷ್ಯ ಆ.15ರಿಂದ 21ರವರೆಗೆ ಮೇಷ ಮೇಷ ರಾಶಿಯಲ್ಲಿ ಜನಿಸಿದವರಿಗೆ ದ್ವಿತೀಯ ರಾಹುವಿರುವುದರಿಂದ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣವಿದೆ. ಏಕಾದಶ ದಲ್ಲಿರುವ ಗುರುವು ಪಾಪಗಳ ಭಾರವನ್ನು ಎಷ್ಟು ಹೊರಲು ಸಾಧ್ಯವೆಂದು ನಿರ್ಣಯಿಸುತ್ತಾನೆೆ. ಜಾಗರೂಕರಾಗಿರಿ. ಖಿನ್ನತೆಗೆ ಒಳಗಾಗದಿರಿ. ಅನಂತವಾಗಿ ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ. ವೃಷಭ ಲಗ್ನದಲ್ಲಿ ರಾಹುವಿರುವುದರಿಂದ ಪೆದ್ದುತನ ತೋರಿಸಿಕೊಳ್ಳಬೇಡಿ. ಮುಖದ ಕಾಂತಿಗೆ ಪೇಚಿಗೆ ಸಿಲುಕುವುದೂ ಬೇಡ. ವಿಷಯ ವಿಮಶಿಸಿ ಅರ್ಥ ಮಾಡಿಕೊಂಡು ನಡೆದರೆ ಶುಭ. ನಿಮ್ಮ ಧರ್ಮದ ಧನವು ಬರಬೇಕಾದರೆ, ‘ದುಂ ದುರ್ಗಾಯೈ ನಮಃ’ ಮಂತ್ರ

ದ್ವಾದಶ ರಾಶಿಗಳ ವಾರಭವಿಷ್ಯ Read More »

ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟಪತಿ ಪದಕ| 19 ಪೊಲೀಸರಿಗೆ ಸೇವಾ ಪದಕ ಗೌರವ|

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯಂದು ಉತ್ತಮ ಸೇವೆಗೈದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವಂತೆ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಪದಕದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ 1,380 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಸಂದಿದ್ದರೆ, 19 ಪೊಲೀಸರಿಗೆ ಪೊಲೀಸ್ ಸೇವಾ ಪದಕ ಪ್ರಶಸ್ತಿ ಬಂದಿದೆ. ಈ ಕುರಿತಂತೆ ಕೇಂದ್ರ ಗೃಹ ಇಲಾಖೆಯಿಂದ ಪಟ್ಟಿಯನ್ನು ರಿಲೀಸ್ ಮಾಡಲಾಗಿದ್ದು, ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಬಾರಿಯ ರಾಷ್ಟ್ರಪತಿ ಪದಕ

ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟಪತಿ ಪದಕ| 19 ಪೊಲೀಸರಿಗೆ ಸೇವಾ ಪದಕ ಗೌರವ| Read More »

ದೇಶಾದ್ಯಂತ 75 ನೇ ಸ್ವಾತಂತ್ರ್ಯದಿನ ಸಂಭ್ರಮ| ಕೆಂಪುಕೋಟೆಯಲ್ಲಿ ಮೇಳೈಸಿದ ತ್ರಿವರ್ಣ ರಂಗು|

ನವದೆಹಲಿ : ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ತ್ರಿವರ್ಣ ರಂಗು ಕಂಗೊಳಿಸುತ್ತಿದೆ. ದೇಶದ ಶಕ್ತಿಕೇಂದ್ರ ಕೆಂಪುಕೋಟೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.30ಕ್ಕೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 8ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಐತಿಹಾಸಿಕ ಸ್ಮಾರಕ ರೆಡ್ ಫೋರ್ಟ್ನಲ್ಲಿ 8 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ

ದೇಶಾದ್ಯಂತ 75 ನೇ ಸ್ವಾತಂತ್ರ್ಯದಿನ ಸಂಭ್ರಮ| ಕೆಂಪುಕೋಟೆಯಲ್ಲಿ ಮೇಳೈಸಿದ ತ್ರಿವರ್ಣ ರಂಗು| Read More »

ಸುವರ್ಣ ಸ್ವಾತಂತ್ರ್ಯವಿದು, ನಾವು ನಿಜವಾಗಿಯೂ ಅನುಭವಿಸಿದ್ದೇವಾ? ಇದೇನಾ ಸ್ವಾತಂತ್ರ್ಯ?

ನಮ್ಮೆಲ್ಲಾ ಸಮಸ್ತ ಓದುಗರಿಗೆ ಸುವರ್ಣ ಸ್ವಾತಂತ್ರ್ಯ ದಿನದ ಶುಭಾಶಯಗಳು ಪ್ರೀತಿಯ ಭಾರತೀಯ ಬಂಧುಗಳೇ…. ಸ್ವಾತಂತ್ರ್ಯ ನಮಗೆಲ್ಲರಿಗೂ ಹೆಮ್ಮೆಯ ದಿನ. ಬ್ರಿಟೀಷರ ಸೊಕ್ಕನ್ನು ಮುರಿಯಲು ಮತ್ತು ನಮ್ಮ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ನಿಜವಾದ ಹೀರೋಗಳನ್ನು ನೆನೆದು ಭಾವುಕರಾಗುವ ಕ್ಷಣ ಈ ದಿನ. ಪ್ರತೀ ವರ್ಷ ನಾವು ಇದನ್ನೇ ಮಾಡುತ್ತಿದ್ದೇವೆಯೇ ಹೊರತು ಮುಂದಿನದ್ದನ್ನು ಯೋಚಿಸಲು ಹೋಗಲಾರೆವು. ಯಾಕೆಂದರೆ ನಮಗೆ ಗೊತ್ತಿರುವುದೇ ಇಷ್ಟು. ಅವರು ಅಷ್ಟೆಲ್ಲ ಕಷ್ಟಪಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರೆ ನಾವು, ನೀವು ಮಾಡುತ್ತಿರುವುದು ಏನು?

ಸುವರ್ಣ ಸ್ವಾತಂತ್ರ್ಯವಿದು, ನಾವು ನಿಜವಾಗಿಯೂ ಅನುಭವಿಸಿದ್ದೇವಾ? ಇದೇನಾ ಸ್ವಾತಂತ್ರ್ಯ? Read More »

ಕೆಂಪುಕೋಟೆ‌ ಧ್ವಜಾರೋಹಣಕ್ಕೆ ಈ ಬಾರಿ ಹೊಸ‌ ಮೆರುಗು| ಯಾರು ಗೊತ್ತಾ ಮುಖ್ಯ ಅತಿಥಿ?

ನವದೆಹಲಿ, ಆ. 14: ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳಾದ ಹಿನ್ನಲೆಯಲ್ಲಿ ಈ ವರ್ಷ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವ ಎಂದಿನಂತೆ ದೇಶಾದ್ಯಂತ ಸಡಗರ ಸಂಭ್ರಮದಿಂದ ಜರುಗುತ್ತದೆಯಾದರೂ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮ ಇನ್ನೊಂದು ಬಗೆಯ ಸಂಭ್ರಮದ್ದು. ಈ ಬಾರಿ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿ ಶತಮಾನದ ಬಳಿಕ ಒಲಂಪಿಕ್ಸ್ ಆಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದ ನೀರಜ್ ಚೋಪ್ರಾ. ಕೆಂಪು ಕೋಟೆಯಲ್ಲಿ

ಕೆಂಪುಕೋಟೆ‌ ಧ್ವಜಾರೋಹಣಕ್ಕೆ ಈ ಬಾರಿ ಹೊಸ‌ ಮೆರುಗು| ಯಾರು ಗೊತ್ತಾ ಮುಖ್ಯ ಅತಿಥಿ? Read More »