Editor

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರನ್ನು ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ […]

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ Read More »

ಮಾತು ಕೊಟ್ಟಂತೆ ನಡೆದುಕೊಂಡ ಪ್ರಧಾನಿ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಆ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟವನ್ನು ಮೋದಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಇದೇ ವೇಳೆ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ

ಮಾತು ಕೊಟ್ಟಂತೆ ನಡೆದುಕೊಂಡ ಪ್ರಧಾನಿ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ Read More »

ಜೀವ ರಕ್ಷಣೆಗೆ ತಾಯ್ನಾಡು ತೊರೆಯುತ್ತಿರುವ ಅಪ್ಘನ್ನರು| ಬಸ್ ಏರಿದಂತೆ ವಿಮಾನ ಏರುತ್ತಿರುವ ಜನ| ಟಯರ್ ಹಿಡಿದು ಪ್ರಯಾಣ ಮಾಡಿದ ಮೂರು ಜನ ಸಾವು

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ನೂರಾರು ನಿವಾಸಿಗಳ ತಾಯ್ನಾಡಾದ ಅಫ್ಘಾನಿಸ್ತಾನವನ್ನು ತೊರೆಯಲು ಆರಂಭಿಸಿದ್ದಾರೆ, ಇದೇ ವೇಳೆ ವಿಮಾನಕ್ಕೆ ಏರುತ್ತಿದ್ದಂತೆ ಮೂರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ. ಸುರಕ್ಷಿತ ಸ್ಥಳ ತಲುಪಲು ವಿಮಾನ

ಜೀವ ರಕ್ಷಣೆಗೆ ತಾಯ್ನಾಡು ತೊರೆಯುತ್ತಿರುವ ಅಪ್ಘನ್ನರು| ಬಸ್ ಏರಿದಂತೆ ವಿಮಾನ ಏರುತ್ತಿರುವ ಜನ| ಟಯರ್ ಹಿಡಿದು ಪ್ರಯಾಣ ಮಾಡಿದ ಮೂರು ಜನ ಸಾವು Read More »

ಸಚಿವರ ಮೆರವಣಿಗೆ ವೇಳೆ ಪೊಲೀಸರ ಕಾಲಿನ ಮೇಲೆ ಹರಿದ ಜೀಪ್

ಬೆಂಗಳೂರು: ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ವೇಳೆ ಅವಘಡವೊಂದು ಸಂಭವಿಸಿದ್ದು, ಪೊಲೀಸರ ಕಾಲಿನ ಮೇಲೆಯೇ ಜೀಪಿನ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸ್ವಾಗತಿಸುವ ಕಾರ್ಯಕ್ರಮದ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಸಚಿವ ನಾರಾಯಣಸ್ವಾಮಿ ಮೆರವಣಿಗೆ ನಡೆಸುತ್ತಿದ್ದ ಜೀಪ್ ನ ಚಕ್ರ ಪೊಲೀಸ್ ಸಿಬ್ಬಂದಿ ಕಾಲಿನ ಮೇಲೆ ಹರಿದಿದೆ. ಇಂದು ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ದೆಹಲಿಯಿಂದ, ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಚಿವರು

ಸಚಿವರ ಮೆರವಣಿಗೆ ವೇಳೆ ಪೊಲೀಸರ ಕಾಲಿನ ಮೇಲೆ ಹರಿದ ಜೀಪ್ Read More »

‘ರಾಷ್ಟ್ರಗೀತೆ ಬಗ್ಗೆ ಕಾಮನ್​ ಸೆನ್ಸ್​ ಇಲ್ವಾ?’| ಸುದೀಪ್ ಗೆ ಖಾರವಾಗಿ ಪ್ರತಿಕ್ರಿಯಿಸಿದ ಅಭಿಮಾನಿ| ತಪ್ಪೊಪ್ಪಿಕೊಂಡ ಕಿಚ್ಚ.

ಆ.15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ಸಿಹಿ ಹಂಚುವ ಮೂಲಕ ಆಚರಣೆ ಜೋರಾಗಿತ್ತು. ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್​ ಅವರು ರಾಷ್ಟ್ರಗೀತೆ ಹಾಡಿ, ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡರು. ಅದಕ್ಕೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸುದೀಪ್​ ಅವರು ಭಕ್ತಿ-ಭಾವದಿಂದ ಹಾಡಿದ ಪರಿ ಕಂಡು ಅಭಿಮಾನಿಗಳು ಕೂಡ ಸೆಲ್ಯೂಟ್​ ಮಾಡಿದರು. ಆದರೆ ಕೆಲವರಿಗೆ ಅದರಲ್ಲೊಂದು ತಪ್ಪು ಕಾಣಿಸಿತು! ರಾಷ್ಟ್ರಗೀತೆಯನ್ನು 48ರಿಂದ 52 ಸೆಕೆಂಡ್​ ಒಳಗೆ

‘ರಾಷ್ಟ್ರಗೀತೆ ಬಗ್ಗೆ ಕಾಮನ್​ ಸೆನ್ಸ್​ ಇಲ್ವಾ?’| ಸುದೀಪ್ ಗೆ ಖಾರವಾಗಿ ಪ್ರತಿಕ್ರಿಯಿಸಿದ ಅಭಿಮಾನಿ| ತಪ್ಪೊಪ್ಪಿಕೊಂಡ ಕಿಚ್ಚ. Read More »

ಸಿಎಂ ಗೆ ಸೆಲ್ಪಿ ಕಿರಿಕ್| ನನ್ನ ಭೇಟಿ ಮಾಡುವವ್ರು ಮೊಬೈಲ್ ತರಬೇಡಿ- ಖಡಕ್ ಆದೇಶ ಹೊರಡಿಸಿದ ಬೊಮ್ಮಾಯಿ

ಬೆಂಗಳೂರು : ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ‌ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶವನ್ನು ಸಿಎಂ ಹೊರಡಿಸಿದ್ದಾರೆ. ಆರ್.ಟಿ.ನಗರದಲ್ಲಿರುವ ಬಸವರಾಜ್ ಬೊಮ್ಮಾಯಿ‌ಖಾಸಗಿ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ನಿವಾಸದ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ‌ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶದಿಂದ ಕಾರ್ಯಕರ್ತರು ಹಾಗೂ ಸಿಎಂ ಭೇಟಿಗೆ ಬಂದವರು

ಸಿಎಂ ಗೆ ಸೆಲ್ಪಿ ಕಿರಿಕ್| ನನ್ನ ಭೇಟಿ ಮಾಡುವವ್ರು ಮೊಬೈಲ್ ತರಬೇಡಿ- ಖಡಕ್ ಆದೇಶ ಹೊರಡಿಸಿದ ಬೊಮ್ಮಾಯಿ Read More »

ಗದ್ದೆಗಿಳಿದು ನಾಟಿ ಮಾಡಿದ ಶೋಭಾ ಕರಂದ್ಲಾಜೆ

ಮಂಡ್ಯ ತಾಲೂಕಿನ ಸಾತನೂರು ಬಳಿ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಗದ್ದೆಯಲ್ಲಿ ನಾಟಿ ಮಾಡಿ ಗಮನ ಸೆಳೆದಿದ್ದಾರೆ. ಕೃಷಿ ಸಚಿವರಾಗಿ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಅವರು ಜನಾಶೀರ್ವಾದಕ್ಕೆ ಚಾಲನೆ ನೀಡಿ ನಂತರ ಸಾತನೂರಿನ ಕೃಷಿ ಜಮೀನೊಂದರಲ್ಲಿ ರೈತ ಮಹಿಳೆಯರೊಂದಿಗೆ ಗದ್ದೆಗಿಳಿದ ಸಚಿವೆ ಭತ್ತದ ಪೈರು ಹಿಡಿದು ನಾಟಿ ಮಾಡಿದರು. ಕೃಷಿಕ ಮಹಿಳೆಯರಂತೆ ನಾಟಿ ಮಾಡಿದ್ದು ವಿಶೇಷವಾಗಿತ್ತು. ನಂತರ ಆಲೆಮನೆಗೆ ಭೇಟಿ ನೀಡಿ ಬೆಲ್ಲ ತಯಾರಿಕೆಯ ಬಗ್ಗೆ ಮಾಹಿತಿ ಪಡೆದರು. ಜನರನ್ನು

ಗದ್ದೆಗಿಳಿದು ನಾಟಿ ಮಾಡಿದ ಶೋಭಾ ಕರಂದ್ಲಾಜೆ Read More »

ಸಿಲಿಂಡರ್ ಸ್ಫೋಟ: ಓರ್ವ ಸಾವು, ಚಿಂತಾಜನಕ ಸ್ಥಿಯಲ್ಲಿ ಒಂದು ವರ್ಷದ ಮಗು

ಹುಬ್ಬಳ್ಳಿ: ಇಲ್ಲಿನ ಕಲಘಟಗಿ ಎಂಬಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದ ತಮ್ಮಣ್ಣವರ ಮನೆಯಲ್ಲಿ ಘಟನೆ ನಡೆದಿದೆ. ಸ್ಫೋಟದ ತೀವ್ರತೆಯಿಂದ ಯಲ್ಲಪ್ಪ(35) ಎಂಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಂದು ವರ್ಷದ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವಂತಾಗಿದೆ. ಇದೀಗ ಗಾಯಾಳು ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಿಲಿಂಡರ್ ಸ್ಫೋಟದ ತ್ರೀವತ್ರೆಗೆ ಮನೆಯ ಮೇಲ್ಛಾವಣಿ ಸಹ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಉಳಿದವರು ಬಚಾವ್ ಆಗಿದ್ದಾರೆ. ಘಟನೆಯ ಕುರಿತು

ಸಿಲಿಂಡರ್ ಸ್ಫೋಟ: ಓರ್ವ ಸಾವು, ಚಿಂತಾಜನಕ ಸ್ಥಿಯಲ್ಲಿ ಒಂದು ವರ್ಷದ ಮಗು Read More »

ಅಕ್ಕನ ಜೊತೆ ಜಗಳವಾಡಿದ ಬಾವನ ಕೈ ಕತ್ತರಿಸಿದ ಬಾಮೈದ

ಮೈಸೂರು: ಗಂಡ ಹೆಂಡತಿ ನಡುವೆ ಗಲಾಟೆಯಾಗಿದ್ದ ಬಾಮೈದ ಬಾವನನ್ನೇ ಕೊಂದು ಹಾಕಿದ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ. ಮಹಮದ್ ಸರಾನ್ (27) ಕೊಲೆಯಾದವನು. ಕಳೆದ ಐದು ತಿಂಗಳ ಹಿಂದಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಎಂಬುವರನ್ನ ಮದುವೆಯಾಗಿದ್ದರು. ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ಜಗಳದಲ್ಲಿ ಪತ್ನಿ ಕಡೆಯ ಸಂಬಂಧಿಕರು ಮಧ್ಯೆ ಪ್ರವೇಶಿಸಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿದ್ದು ಪತ್ನಿಯ ಸಂಬಂಧಿಕರು ಪತಿ ಮಹಮದ್ ಸರಾನ್​ನ್ನು ಹತ್ಯೆಗೈದಿದ್ದಾರೆ. ಅಲ್ಲದೇ ಮಹಮದ್ ಸರಾನ್​ನ ಬಾಮೈದ ಕದೀರ್ ತನ್ನ ಬಾವನ ಕೈ

ಅಕ್ಕನ ಜೊತೆ ಜಗಳವಾಡಿದ ಬಾವನ ಕೈ ಕತ್ತರಿಸಿದ ಬಾಮೈದ Read More »

ಕುವೈಟ್ : ಬಹುಪತ್ನಿ ವಲ್ಲಭನ ಮದುವೆಯಾಗಿ ಮೋಸ ಹೋದ ಮಂಗಳೂರಿನ ಮಹಿಳೆ| ನ್ಯಾಯಕ್ಕಾಗಿ ತಾಯ್ನಾಡಿಗೆ ಮೊರೆ|

ಕುವೈಟ್: ಮಂಗಳೂರು ಮೂಲದ ಮಹಿಳೆಯೊಬ್ಬಳನ್ನು ಬಹುಪತ್ನಿ ವಲ್ಲಭನೋರ್ವ ಮೋಸದಿಂದ ಮದುವೆಯಾಗಿ ಕುವೈಟ್‌ನಲ್ಲಿ 6 ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಈಗ ನ್ಯಾಯಕ್ಕಾಗಿ ತಾಯ್ನಾಡಿನ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಎರಡು ವಿವಾಹವಾಗಿ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳಿ ಮೂರನೇ ವಿವಾಹವಾಗಿ, ಇಬ್ಬರು ಪತ್ನಿಯರ ಜತೆ ಕುವೈಟ್‌ನಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆತ ಮೊದಲ ಪತ್ನಿ ಮತ್ತು ಪುತ್ರನ ಜತೆ ಕುವೈಟ್‌ಗೆ ಮತ್ತೆ ತೆರಳಲು ಸಿದ್ಧತೆ ನಡೆಸಿರುವಂತೆಯೇ ಮಂಗಳೂರು ಮೂಲದ

ಕುವೈಟ್ : ಬಹುಪತ್ನಿ ವಲ್ಲಭನ ಮದುವೆಯಾಗಿ ಮೋಸ ಹೋದ ಮಂಗಳೂರಿನ ಮಹಿಳೆ| ನ್ಯಾಯಕ್ಕಾಗಿ ತಾಯ್ನಾಡಿಗೆ ಮೊರೆ| Read More »