Editor

9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕಾರ| ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಬಿ.ವಿ ನಾಗರತ್ನ|

ನವದೆಹಲಿ: ಇತ್ತೀಚೆಗಷ್ಟೇ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದ ಕರ್ನಾಟಕದ ನ್ಯಾಯಮೂರ್ತಿ ನಾಗರತ್ನ ಬಿ.ವಿ ಸೇರಿದಂತೆ ದೇಶದ 9 ನ್ಯಾಯಾಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದವರಾದ, ರಾಜ್ಯ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದ ನಾಗರತ್ನ ಬಿ.ವಿ ಸೇರಿ ಮೂವರು ಮಹಿಳಾ ನ್ಯಾಯಮೂರ್ತಿಗಳೂ ಒಳಗೊಂಡಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ನಾಗರತ್ನಿ ಬಿವಿ ಅವರೊಂದಿಗೇ ನ್ಯಾಯಮೂರ್ತಿ ಎ.ಎಸ್. ಓಕಾ, ನ್ಯಾಯಮೂರ್ತಿ, ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, […]

9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕಾರ| ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಬಿ.ವಿ ನಾಗರತ್ನ| Read More »

ಶ್ರಿಲಂಕಾ ಉಗ್ರರ ಕರಿನೆರಳು| ಕೇರಳ, ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್

ಮಂಗಳೂರು: ಕೇರಳ ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಶ್ರೀಲಂಕಾ ಉಗ್ರರು ನುಸಿಳಿರೋ ಸುಳಿವನ್ನು, ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಕೇರಳದ ಕರಾವಳಿ ಪ್ರದೇಶಕ್ಕೆ 12 ಶ್ರೀಲಂಕಾ ಮೂಲಕ ಉಗ್ರರು 2 ಯಾಂತ್ರಿಕ ದೋಣಿಗಳಲ್ಲಿ ಬಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹದ್ದಿನ ಕಣ್ಣು ನೆಟ್ಟಿದ್ದಾರೆ. ಕೇರಳ ಅಥವಾ ಕರ್ನಾಟಕದಿಂದ ಪಾಕಿಸ್ತಾನಕ್ಕೆ ತೆರಳುವ ಯೋಜನೆಯಿಂದ ಉಗ್ರರು ಬಂದಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ

ಶ್ರಿಲಂಕಾ ಉಗ್ರರ ಕರಿನೆರಳು| ಕೇರಳ, ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್ Read More »

OLX ನಲ್ಲಿ ಅತ್ಯಾಚಾರ ಆರೋಪಿಯನ್ನು ಹಿಡಿದ ಪೊಲೀಸರು| ಪುತ್ತೂರು ಮೂಲದ ಆರೋಪಿ ಕೊಚ್ಚಿಯಲ್ಲಿ ಪತ್ತೆಯಾಗಿದ್ದು ಹೇಗೆ?

ಕೊಚ್ಚಿ: ಎರಡೂವರೆ ವರ್ಷದ ಹಿಂದಿನ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು ಒ ಎಲ್ ಎಕ್ಸ್ ಸಹಾಯದಿಂದ ಹಿಡಿದಿರುವ ಅಚ್ಚರಿಯ ಘಟನೆ ನಡೆದಿದೆ. ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಎಷ್ಟೇ ಬಲೆ ಬೀಸಿದ್ದರೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರಿಗೆ ಸಹಾಯ ಮಾಡಿದ್ದು ಒ ಎಲ್ ಎಕ್ಸ್ ಜಾಲತಾಣ. 30ರ ಹರೆಯದ ಆರೋಪಿ ಪ್ರವೀಣ್ ದಕ್ಷಿಣ ಕನ್ನಡದ ಪುತ್ತೂರಿನ ನಿವಾಸಿ. 2019ರಲ್ಲಿ ಆತ

OLX ನಲ್ಲಿ ಅತ್ಯಾಚಾರ ಆರೋಪಿಯನ್ನು ಹಿಡಿದ ಪೊಲೀಸರು| ಪುತ್ತೂರು ಮೂಲದ ಆರೋಪಿ ಕೊಚ್ಚಿಯಲ್ಲಿ ಪತ್ತೆಯಾಗಿದ್ದು ಹೇಗೆ? Read More »

ಪ್ಯಾರಾಲಂಪಿಕ್| ಮತ್ತೊಂದು ಪದಕದ ಭೇಟೆಯಾಡಿದ ಭಾರತ

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಇಂದು ಪುರುಷರ 10 ಮೀಟರ್ ಏರ್ ಪಿಸ್ತೂಲ್‌ಎಸ್​ಹೆಚ್​1 ಸ್ಪರ್ಧೆಯಲ್ಲಿ ಭಾರತದ ಸಿಂಗರಾಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಫೈನಲ್​ನಲ್ಲಿ 216.8 ಅಂಕ ಸಂಪಾದಿಸಿ ಮೂರನೇ ಸ್ಥಾನ ಪಡೆದುಕೊಂಡು ಸಿಂಗರಾಜ್ ಅವರ ಕಂಚಿನ ಪದಕ ಗೆದ್ದರು. ಭಾರತದ ಇನ್ನೋರ್ವ ಶೂಟರ್ ಮನೀಶ್ 7ನೇ ಸ್ಥಾನ ಪಡೆದರು. ಫೈನಲ್ ನಲ್ಲಿ ಒಟ್ಟು 216.8 ಅಂಕಗಳನ್ನು ಗಳಿಸಿದ ಸಿಂಗ್ ರಾಜ್ ಮೂರನೇ ಸ್ಥಾನ ಪಡೆದರೆ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದ ಭಾರತದ ಇನ್ನೋರ್ವ

ಪ್ಯಾರಾಲಂಪಿಕ್| ಮತ್ತೊಂದು ಪದಕದ ಭೇಟೆಯಾಡಿದ ಭಾರತ Read More »

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ.

ಮಡಿಕೇರಿ: ಕೊಡಗಿನ ಮದೆನಾಡು ಗ್ರಾಮದ ಬಾರಿಯಂಡ ದೀಪಕ್ ಜೋಯಪ್ಪ ಅವರು ಸಂಶೋಧಸಿದ ’ಇಂಗ್ಲಿಷ್ ಮತ್ತು ಕನ್ನಡ ನ್ಯೂಸ್ ವೆಬ್‌ಸೈಟ್ಸ್: ಸ್ಟಡಿ ಆನ್ ದೇರ್ ಪೊಟೆನ್‌ಷ್ಯಾಲಿಟಿ ಆಂಡ್ ಸಸ್ಟೈನೇಬಿಲಿಟಿ’ ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಮಾಹೆ) ಸಂಸ್ಥೆಯು ಡಾಕ್ಟರೇಟ್ ನೀಡಿದೆ. ದೀಪಕ್ ಅವರು ಈ ಸಂಸ್ಥೆಯು ಕೊಡುವ ಪ್ರತಿಷ್ಠಿತ ’ಡಾ. ಟಿಎಂಎ ಪೈ’ ವಿದ್ಯಾರ್ಥಿ ವೇತನದಲ್ಲಿ ಸಂಶೋಧನೆ ನಡೆಸಿದ್ದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯ ಪ್ರೊಫೆಸರ್ ಮತ್ತು ನಿರ್ದೇಶಕರಾದ ಡಾ. ಪದ್ಮ ರಾಣಿ ಅವರ

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ. Read More »

ಕೋಣವನ್ನು ಸುಪಾರಿ ಪಡೆದು ಕೊಂದ ಪಾತಕಿಗಳು ಕಂಬಿ ಹಿಂದೆ| ಮನುಷ್ಯತ್ವ ಮರೆತ ನರರಾಕ್ಷಸರು..!

ಮಂಗಳೂರು: ಮಳೆಗಾಲದಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ತಿನ್ನುತ್ತಾ, ದಷ್ಟಪುಷ್ಟವಾಗಿ ಬೆಳೆದ ಬಿಡಾಡಿ ಕೋಣವದು. ಕೋಣದ ಯಜಮಾನ ಕೋಣವನ್ನು ಹಟ್ಟಿಗೆ ಸೇರಿಸದೇ ಬಿಟ್ಟು ಬಿಟ್ಟಿದ್ದ. ಕೋಣ ಊರಿನಲ್ಲೇ ಹುಲ್ಲಿದ್ದ ಜಾಗದಲ್ಲಿ ಮೇದು ಅಲ್ಲೇ ಮಲಗಿ ದಿನ ಕಳೆಯುತಿತ್ತು. ಆಹಾರ ಅರಸುತ್ತಾ, ಹುಲ್ಲು ಜಾಸ್ತಿ ಬೆಳೆದ ತೋಟಕ್ಕೆ ಕೋಣ ನುಗ್ಗಿದ್ದೇ ತಪ್ಪಾಗಿತ್ತು. ತೋಟದ ಮಾಲೀಕನ ಕೆಂಗಣ್ಣಿಗೆ ಕೋಣ ಅನಾಯಾಸವಾಗಿ ಬಿದ್ದಿತ್ತು. ಕೋಣವನ್ನು ತೋಟದಿಂದ ಓಡಿಸಲು ನಾನಾ ಪ್ರಯತ್ನ ಪಟ್ಟರೂ ಕೋಣ ಮಾತ್ರ ಜಪ್ಪಯ್ಯ ಅಂದ್ರೂ ತೋಟ ಬಿಡಲಿಲ್ಲ. ಅಂತಿಮವಾಗಿ ಮಾಲೀಕ

ಕೋಣವನ್ನು ಸುಪಾರಿ ಪಡೆದು ಕೊಂದ ಪಾತಕಿಗಳು ಕಂಬಿ ಹಿಂದೆ| ಮನುಷ್ಯತ್ವ ಮರೆತ ನರರಾಕ್ಷಸರು..! Read More »

ಕೋರಮಂಗಲದಲ್ಲಿ ಐಷಾರಾಮಿ ಆಡಿ ಕ್ಯೂ3 ಕಾರು ಪುಟ್ ಪಾತ್ ಕಂಬಕ್ಕಿ ಢಿಕ್ಕಿ|ಭೀಕರ ಅಪಘಾತದಲ್ಲಿ 7 ಮಂದಿ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಐಷಾರಾಮಿ ಆಡಿ ಕ್ಯೂ 3 ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು ಪುರುಷರು ಸಾವಿಗೀಡಾಗಿದ್ದಾರೆ.ನಗರದ ಕೋರಮಂಗಲದಲ್ಲಿ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಐಷಾರಾಮಿ ಕಾರು ಫುಟ್​ಪಾತ್​ ಮೇಲಿನ ಕಂಬಕ್ಕೆ ಡಿಕ್ಕಿಯಾಗಿ 7 ಜನರ ದುರ್ಮರಣಕ್ಕೀಡಾಗಿದ್ದಾರೆ. ಮಂಗಳ ಕಲ್ಯಾಣ ಮಂಟಪದ ಬಳಿ ಈ ಭೀಕರ ದುರಂತ ಘಟಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಐಷಾರಾಮಿ ಆಡಿ ಕ್ಯೂ3 ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು

ಕೋರಮಂಗಲದಲ್ಲಿ ಐಷಾರಾಮಿ ಆಡಿ ಕ್ಯೂ3 ಕಾರು ಪುಟ್ ಪಾತ್ ಕಂಬಕ್ಕಿ ಢಿಕ್ಕಿ|ಭೀಕರ ಅಪಘಾತದಲ್ಲಿ 7 ಮಂದಿ ದುರ್ಮರಣ Read More »

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಚಿನ್ನ| ಮೂರು ಬಾರಿ ವಿಶ್ವದಾಖಲೆ ಮುರಿದ ಸುಮಿತ್

ಟೋಕಿಯೊ : ಇಲ್ಲಿ ನಡೆಯುತ್ತಿರುವಂತ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಪುರುಷರ ಜಾವೆಲಿನ್ (ಎಫ್ 64)ನಲ್ಲಿ ಭಾರತದ ಸುಮಿತ್ ಆಂಟಿಲ್ 68.55 ಮೀ. ಹೊಸ ವಿಶ್ವ ದಾಖಲೆಯ ಎಸೆತದೊಂದಿಗೆ ಚಿನ್ನ ಗೆದ್ದರು. ಟೋಕಿಯೊದಲ್ಲಿ ನಡೆದ ಫೈನಲ್ ನಲ್ಲಿ ಸುಮಿತ್ ಆಂಟಿಲ್ ಒಮ್ಮೆಯಲ್ಲ, ಎರಡು ಬಾರಿಯಲ್ಲ ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದರು. ಅವರು ತಮ್ಮ ಎರಡನೇ ಎಸೆತದಿಂದ ಅದನ್ನು ಉತ್ತಮಗೊಳಿಸುವ ಮೊದಲು, ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ತಮ್ಮ ಮೊದಲ ಪ್ರಯತ್ನದಲ್ಲಿ 66.95 ಎಸೆದರು. ನಂತರ ತಮ್ಮ ಐದನೇ

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಚಿನ್ನ| ಮೂರು ಬಾರಿ ವಿಶ್ವದಾಖಲೆ ಮುರಿದ ಸುಮಿತ್ Read More »

ರಿಕ್ಷಾ- ಕಾರು ಮುಖಾಮುಖಿ ಡಿಕ್ಕಿ: ರಿಕ್ಷಾ ಚಾಲಕ ಸ್ಪಾಟ್ ಔಟ್

ಕಾರ್ಕಳ: ವಿರುದ್ದ ದಿಕ್ಕಿನಲ್ಲಿ ಕಾರು ಚಾಲಕ ಅತೀವೇಗವಾಗಿ ಟವೇರಾ ಕಾರನ್ನು ಚಲಾಯಿಸಿಕೊಂಡು ಬಂದು ರಿಕ್ಷಾಗೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಅಜೆಕಾರು ಬಳಿ ನಡೆದಿದೆ. ಕಾರ್ಕಳ ತಾಲೂಕಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸೋಮವಾರ ಸಂಜೆ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ ರಿಕ್ಷಾ ಚಾಲಕ ಅಂಡಾರು ಗ್ರಾಮದ ಬಾಳ್ಜೆ ನಿವಾಸಿ ಶೇಖರ ಮೂಲ್ಯ(58) ಎಂದು ಗುರುತಿಸಲಾಗಿದೆ. ಶೇಖರ ಮೂಲ್ಯ ಕಾಡುಹೊಳೆ ಎಂಬಲ್ಲಿಂದ ಪ್ರಯಾಣಿಕರೊಬ್ಬರನ್ನು ಅಜೆಕಾರಿಗೆ ಬಿಟ್ಟು

ರಿಕ್ಷಾ- ಕಾರು ಮುಖಾಮುಖಿ ಡಿಕ್ಕಿ: ರಿಕ್ಷಾ ಚಾಲಕ ಸ್ಪಾಟ್ ಔಟ್ Read More »

ಉಡುಪಿ| ಚೂರಿ‌ ಇರಿತಕ್ಕೊಳಗಾದ ಯುವತಿ‌ ಸಾವು| ಜೀವನ್ಮರಣ ಸ್ಥಿತಿಯಲ್ಲಿ ಭಗ್ನ ಪ್ರೇಮಿ| ಘಟನೆ ನಡೆದಿದ್ದು ಯಾಕೆ? ಇಲ್ಲಿದೆ ಫುಲ್ ಡೀಟೈಲ್

ಉಡುಪಿ: ನಗರದ ಸಂತೆಕಟ್ಟೆ ಸಮೀಪದ ರೋಬೊ ಸಾಪ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೋರ್ವ ಯುವತಿಗೆ ಚೂರಿ ಇರಿತವನ್ನು ಮಾಡಿದ್ದು ಬಳಿಕ ತಾನು ಕೂಡ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಯುವತಿ ಮೃತಪಟ್ಟಿದ್ದಾಳೆ. ಯುವತಿಯನ್ನು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ‌ ನಡೆಸುತ್ತಿದ್ದಾನೆ. ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26)

ಉಡುಪಿ| ಚೂರಿ‌ ಇರಿತಕ್ಕೊಳಗಾದ ಯುವತಿ‌ ಸಾವು| ಜೀವನ್ಮರಣ ಸ್ಥಿತಿಯಲ್ಲಿ ಭಗ್ನ ಪ್ರೇಮಿ| ಘಟನೆ ನಡೆದಿದ್ದು ಯಾಕೆ? ಇಲ್ಲಿದೆ ಫುಲ್ ಡೀಟೈಲ್ Read More »