ಸಮಗ್ರ ನ್ಯೂಸ್: ನೂತನ ಆರೋಗ್ಯ ಸಚಿವ ಯುಟಿ ಖಾದರ್ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆರೋಗ್ಯ ಸಚಿವರಾದ ಬಳಿಕ ಇದೇ ಮೊದಲಬಾರಿಗೆ ಆಗಮಿಸಿದ ಖಾದರ್‌ಗೆ ದೇವಸ್ಥಾನದ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಬೆಳಿಗ್ಗೆ ನಗರಕ್ಕೆ ಬಂದ ಅವರಿಗೆ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ನೇರ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ತೆರಳಿದ ಖಾದರ್, ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್‌ಗೆ ಭೇಟಿ ನೀಡಿದರು. ನಂತರ ಉಳ್ಳಾಲದ ಭಗವತಿ ಕ್ಷೇತ್ರ, ತೊಕ್ಕೊಟ್ಟು ಸೇಂಟ್ ಸೆಬಾಸ್ಟಿಯನ್ ಚರ್ಚ್‌ಗೆ ತೆರಳಿದರು. ಮಧ್ಯಾಹ್ನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಅವರಿಗೆ ಕ್ಷೇತ್ರದ ಆಡಳಿತ ಮಂಡಳಿಯವರು ಸ್ವಾಗತ ಕೋರಿ ಸನ್ಮಾನಿಸಿದರು. ಸಚಿವರು ಕುದ್ರೋಳಿ ಶ್ರೀ ಗೋಕರ್ಣನಾಥ, ಪರಿವಾರ ದೇವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಅದನ್ನು ಮುಖ್ಯಮಂತ್ರಿ ಬಳಿ ಮಾತನಾಡಿದ ನಂತರ ತಿಳಿಸುವೆ. ಕೋಲಾರ, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವನಾಗಿ ಈ ಹಿಂದೆ ಕೆಲಸ ಮಾಡಿದ್ದು, ಈಗಲೂ ನನಗೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿದರೆ ಅಲ್ಲಿಯ ಸಂಸ್ಕೃತಿಯ ಅರಿಯಲು ಅನುಕೂಲವಾಗುತ್ತದೆ’ ಎಂದರು.
[6/9, 5:26 PM] +91 84314 91115: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ| ಸ್ಯಾಂಡಲ್ ವುಡ್ ನಟನಟಿಯರಿಗೆ ಶಾಕ್
ಸಮಗ್ರ ನ್ಯೂಸ್: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಕೆಲವು ನಟ-ನಟಿಯರಿಗೆ ಈ ಇಡಿ ಸಂಕಷ್ಟ ಎದುರಾಗಿದೆ.
ಶಿವಂ ಅಸೋಸಿಯೇಟ್ಸ್ ಮಾಲಿಕ ಶಿವಾನಂದ ನೀಲಣ್ಣವರ್ ಸಾರ್ವಜನಿಕರ ಹೂಡಿಕೆ ಹಣ ದುರ್ಬಳಕೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ.
ಶಿವಾನಂದ ತಮ್ಮ ಪ್ರಚಾರಕ್ಕಾಗಿ ಹೂಡಿಕೆದಾರರ ಹಣ ಬಳಸಿ ಸ್ಯಾಂಡಲ್ ವುಡ್ ತಾರೆಯರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಆರೋಪವಿದೆ.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರಾದ ನೀನಾಸಂ ಸತೀಶ್, ವಸಿಷ್ಠ ಸಿಂಹ, ಸಪ್ತಮಿ ಗೌಡ, ಡಾಲಿ ಧನಂಜಯ, ರಾಗಿಣಿ ದ್ವಿವೇದಿ ಸೇರಿದಂತೆ ಹಲವು ನಟ ನಟಿಯರು ಬಂದು ಮನರಂಜನೆ ನೀಡಿದ್ದರು. ಆದರೆ ಇದೇ ಈ ನಟರಿಗೆ ಈಗ ಕುತ್ತಾಗಿದೆ.
ಶಿವಾನಂದ ಪ್ರಕರಣದ ವಿಚಾರಣೆ ಸದ್ಯಕ್ಕೆ ಸಿಐಡಿ ನಡೆಸುತ್ತಿದೆ. ಆದರೆ ಹಣಕಾಸಿನ ವಂಚನೆ ಪ್ರಕರಣವಾಗಿರುವುದರಿಂದ ಇಡಿ ಎಂಟ್ರಿಯಾಗಲಿದೆ. ಹೀಗಾಗಿ ಈಗ ಈ ಸ್ಟಾರ್ ನಟರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆಯಿದೆ.








