Editor

ಸ್ಕೂಟಿಯಿಂದ ಜಾರಿಬಿದ್ದು ಮಹಿಳೆ ಸಾವು

ಕಾರವಾರ: ಸೊಸೆಯ ಜೊತೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಅತ್ತೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಆರ್ಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ‌ನಡೆದಿದ್ದು ಅತ್ತೆ-ಸೊಸೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ನಗರದ ಬಾಡಾದ ನಂದನಗದ್ದಾ ನಿವಾಸಿ ಶಾಲಿನಿ ನಾಯ್ಕ ಮೃತಪಟ್ಟ ಮಹಿಳೆ. 73 ವರ್ಷದ ಈಕೆ ತನ್ನ ಸೊಸೆ ವೈಶಾಲಿ ನಾಯ್ಕ ಜೊತೆ ಸ್ಕೂಟಿ ಹಿಂಬದಿ ಕುಳಿತು ಅರ್ಗಾದ ನೌಕಾನೆಲೆ ಬಳಿ ಕೆಲ ಸಾಮಗ್ರಿ ತರಲು ತೆರಳಿದ್ದರು ಎನ್ನಲಾಗಿದೆ. ಅಂಗಡಿಯಿಂದ ಸಾಮಗ್ರಿ […]

ಸ್ಕೂಟಿಯಿಂದ ಜಾರಿಬಿದ್ದು ಮಹಿಳೆ ಸಾವು Read More »

ಅಡುಗೆ ಮನೆಗೆ ಮತ್ತೆ ಗ್ಯಾಸ್ ಬೆಲೆ ಏರಿಕೆ ಬಿಸಿ| ಸಿಲಿಂಡರ್ ಬೆಲೆ 25 ರೂ. ಹೆಚ್ಚಳ

ಬೆಂಗಳೂರು: ಪೆಟ್ರೋಲಿಯಂ ಕಂಪೆನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದು, ಸಾಮಾನ್ಯ ಜನರಿಗೆ ಕೊರೊನಾ ಸಂದರ್ಭದಲ್ಲಿ ಮತ್ತೊ ಹೊಡೆತ ನೀಡಿದೆ.ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜೆ ತೂಕದ ಸಿಲೆಂಡರ್ ಗೆ 884 ರೂ. 50 ಪೈಸೆಯಾಗಿದೆ. ಹೊಸ ದರ ಇಂದೇ ಜಾರಿಗೆ ಬರಲಿದೆ. ಇನ್ನು 19 ಕೆಜಿ ಕಮರ್ಷಿಯಲ್ ಸಿಲೆಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿದ್ದು ಅದಕ್ಕೆ ಗ್ರಾಹಕರು ಸಾವಿರದ 693 ರೂಪಾಯಿಯಷ್ಟು ದೆಹಲಿಯಲ್ಲಿ ದರವಿದೆ.ಕಳೆದ 15

ಅಡುಗೆ ಮನೆಗೆ ಮತ್ತೆ ಗ್ಯಾಸ್ ಬೆಲೆ ಏರಿಕೆ ಬಿಸಿ| ಸಿಲಿಂಡರ್ ಬೆಲೆ 25 ರೂ. ಹೆಚ್ಚಳ Read More »

ಬೆಳ್ತಂಗಡಿ : ಹಾವು ಕಡಿತದಿಂದ ಯುವಕ ಸಾವು

ಬೆಳ್ತಂಗಡಿ: ವಿಷಕಾರಿ ಹಾವಿನ ಕಡಿತಕ್ಕೊಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಇಂದು ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಸಂಭವಿಸಿದೆ. ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್( 26) ಮೃತಪಟ್ಟವರು. ಆಸಿದ್ ಅವರು ಕೂಲಿ ಕಾರ್ಮಿಕರಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆ ಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರು ಉಸ್ಮಾನ್ ಅವರ ಮೂವರು ಪುತ್ರರಲ್ಲಿ ಕೊನೆಯವರಾಗಿದ್ದು ಅವಿವಾಹಿತರಾಗಿದ್ದರು.

ಬೆಳ್ತಂಗಡಿ : ಹಾವು ಕಡಿತದಿಂದ ಯುವಕ ಸಾವು Read More »

ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್|

ಚಿಕ್ಕಬಳ್ಳಾಪುರ: ನಾಟಿ ಕೋಳಿಯೊಂದನ್ನು ಹಿಡಿದು ಕೆಎಸ್​ಆರ್​ಟಿಸಿ ಬಸ್​ ಹತ್ತಿದ ಪ್ರಯಾಣಿಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅರೆ! ಅದರಲ್ಲೇನು ವಿಶೇಷ ಅಂತೀರಾ? ಚಿಕ್ಕಬಳ್ಳಾಪುರ ತಾಲೂಕಿನ ಸೋಮೇಶ್ವರದ ವ್ಯಕ್ತಿಯೊಬ್ಬ ಶ್ರಾವಣ ಮಾಸದ ಪ್ರಯುಕ್ತ ಪೆರೇಸಂದ್ರದಲ್ಲಿ ನಾಟಿ ಕೋಳಿಯೊಂದನ್ನು ಖರೀದಿಸಿ ವಾಪಸ್​ ಮನೆಗೆ ಹೋಗಲೆಂದು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದರು. ಸೋಮೇಶ್ವರಕ್ಕೆ ಒಂದು ಟಿಕೆಟ್​ ಕೊಡಿ ಎಂದು ಪ್ರಯಾಣಿಕ ಕೇಳಿದ್ರೆ, ಬಸ್‌ ಕಂಡಕ್ಟರ್ ಕೊಟ್ಟದ್ದು ಒಂದೂವರೆ ಟಿಕೆಟ್​! ಪ್ರಯಾಣಿಕನಿಗೆ ಒಂದು ಟಿಕೆಟ್(10 ರೂ.), ಅವರ ಜತೆ ಇದ್ದ ನಾಟಿಕೋಳಿಗೂ

ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್| Read More »

ಪೊಲೀಸ್ ಠಾಣೆಯಲ್ಲಿ ‘ಸೆಕ್ಸ್’ ನಡೆಸಲು ಒತ್ತಾಯ| ಗಂಭೀರ ಆರೋಪ ಮಾಡಿದ ಅಪಹರಣ ಪ್ರಕರಣದ ಆರೋಪಿಗಳು|

ಜಮ್ ಶೆಡ್ ಪುರ : ಜಾರ್ಖಂಡ್ ನ ಜಮ್ ಶೆಡ್ ಪುರದ ಇಬ್ಬರು ಪುರುಷರನ್ನು ನಗರ ಪೊಲೀಸ್ ಠಾಣೆಯಲ್ಲಿ ‘ಬೆತ್ತಲೆಗೊಳಿಸಲಾಗಿದೆ’ ಮತ್ತು ಪೊಲೀಸರು ಪರಸ್ಪರ ಲೈಂಗಿಕ ಸಂಭೋಗ ನಡೆಸುವಂತೆ ಕೇಳಿದ್ದಾರೆ ಮತ್ತು ಅವರು ನಿರಾಕರಿಸಿದಾಗ, ಅವರನ್ನು ಹೊಡೆದು ಆಫ್ಘಾನಿಸ್ತಾನಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ’ ಎಂದು ಆರೋಪಿಸಲಾದ ಘಟನೆ ಇಲ್ಲಿ ನಡೆದಿದೆ. ಎರಡು ದಿನಗಳ ಮೊದಲು ದಾಖಲಾದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 26 ರಂದು ವಿಚಾರಣೆ ಯ ಸಮಯದಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಅರ್ಜೂ ಮತ್ತು

ಪೊಲೀಸ್ ಠಾಣೆಯಲ್ಲಿ ‘ಸೆಕ್ಸ್’ ನಡೆಸಲು ಒತ್ತಾಯ| ಗಂಭೀರ ಆರೋಪ ಮಾಡಿದ ಅಪಹರಣ ಪ್ರಕರಣದ ಆರೋಪಿಗಳು| Read More »

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ

ಮಂಗಳೂರು: ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲೆಯ ವಿದ್ಯಮಾನಗಳನ್ನು ಗಮನಿಸಿ, ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ, ಚಾಲ್ತಿಯಲ್ಲಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಗಳಿಗೆ ಹಾಜರಾಗಲು

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ Read More »

ಉಡುಪಿ| ಪ್ರೇಯಸಿಯ ಇರಿದು ಕೊಂದ ಪ್ರೇಮಿಯೂ ಸಾವು| ಸಾವಲ್ಲಿ ಕೊನೆಯಾಯ್ತು ಭಗ್ನ ಪ್ರೇಮ

ಉಡುಪಿ: ಪ್ರೇಯಸಿಗೆ ಚೂರಿಯಿಂದ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಪ್ರಿಯಕರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಪ್ರೀತಿ ಸಾವಲ್ಲಿ ಅಂತ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಪ್ರೇಯಸಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಳು. ಉಡುಪಿಯ ಸಂತೆಕಟ್ಟೆ ಸಮೀಪದ ಬ್ಯಾಂಕ್ ಉದ್ಯೋಗಿಯಾಗಿದ್ದ ಸೌಮ್ಯಶ್ರೀ ಹಾಗೂ ಮೆಡಿಕಲ್ ಉದ್ಯೋಗಿಯಾಗಿದ್ದ ಸಂದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೌಮ್ಯಶ್ರೀಗೆ ವಾರದ ಹಿಂದಷ್ಟೇ‌ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಇದರಿಂದ ಸಂದೇಶ ಕುಲಾಲ್ ಕುಪಿತಗೊಂಡಿದ್ದ, ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಹೀಗಿರುವಾಗ

ಉಡುಪಿ| ಪ್ರೇಯಸಿಯ ಇರಿದು ಕೊಂದ ಪ್ರೇಮಿಯೂ ಸಾವು| ಸಾವಲ್ಲಿ ಕೊನೆಯಾಯ್ತು ಭಗ್ನ ಪ್ರೇಮ Read More »

ಪ್ಯಾರಾಲಂಪಿಕ್ಸ್ ನಲ್ಲಿ ಮತ್ತೆರಡು ಪದಕ ಬಾಚಿದ ಭಾರತ

ಟೋಕಿಯೊ : ಇಲ್ಲಿ ನಡೆಯುತ್ತಿರುವಂತ ಪ್ಯಾರಾಲಿಂಪಿಕ್ಸ್ ನಲ್ಲಿ ಮಂಗಳವಾರ ನಡೆದ ಪುರುಷರ ಹೈಜಂಪ್ – ಟಿ63 ಫೈನಲ್ ನಲ್ಲಿ ಭಾರತದ ಥಂಗಾವೇಲು ಮರಿಯಪ್ಪನ್ ಮತ್ತು ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಯುಎಸ್‌ಎಯ ಸ್ಯಾಮ್ ಗ್ರೂ ತನ್ನ ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ 1.88 ಮೀ ಎತ್ತರವನ್ನು ಜಿಗಿಯುವ ಮೂಲಕ ಚಿನ್ನವನ್ನು ಗೆದ್ದಿದ್ದಾರೆ. ಭಾರತದ ಮರಿಯಪ್ಪನ್ ಎತ್ತರವನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆಳ್ಳಿ ಪದಕವನ್ನು ಪಡೆದರು. ಇದು 2016ರ ರಿಯೋ ಒಲಿಂಪಿಕ್ಸ್ ನಲ್ಲಿ

ಪ್ಯಾರಾಲಂಪಿಕ್ಸ್ ನಲ್ಲಿ ಮತ್ತೆರಡು ಪದಕ ಬಾಚಿದ ಭಾರತ Read More »

ಮಂಗಳೂರು: ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಕೋರ್ಟಿಗೆ ಹಾಜರುಪಡಿಸಿದ ವೇಳೆ ನಗರದ ನ್ಯಾಯಾಲಯ ಸಂಕೀರ್ಣದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ತಲಪಾಡಿ ಕಿನ್ಯ ನಿವಾಸಿ ರವಿರಾಜ್ (32) ಕೋರ್ಟ್ ಮಹಡಿಯಿಂದ ಹಾರಿ ಸಾವು ಕಂಡವರು. ರವಿರಾಜ್ ಅವರನ್ನು ಸೋಮವಾರ ತೊಕ್ಕೊಟ್ಟಿನ ಸೆಬಾಸ್ಟಿಯನ್ ಕಾಲೇಜು ಬಳಿ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಇಂದು ಉಳ್ಳಾಲ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ

ಮಂಗಳೂರು: ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ Read More »

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಗಳೂರು : ಕಾರಿನ ನಂಬರ್ ಪ್ಲೇಟ್‌ ಬಳಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಪೊಲೀಸ್‌ ಸಿಬ್ಬಂದಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ ಬಳಿ ಇಂದು ನಡೆದಿದೆ. ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮಾರುತಿ 800 ವಾಹನದಲ್ಲಿ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು. ಆ ಭಾವಚಿತ್ರ ತೆಗೆಯುವಂತೆ ಪೊಲೀಸ್‌ ಸಿಬ್ಬಂದಿ ಸೂಚಿಸಿದ್ದು, ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ Read More »