Ad Widget

ಸುಳ್ಯ: ವೈರಲ್ ಆಯ್ತು ಮಹಿಳೆಯ ಧ್ವಜವಂದನೆ| ಇದು ನಿಜವಾದ ದೇಶಭಕ್ತಿ


ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ-ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈ ಕಾರ್ಯಕ್ರಮದ ಬಳಿಕ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಧ್ವಜವಂದನೆ ಮಾಡಿದ್ದು , ಈ ಫೋಟೋ ವೈರಲ್‌ ಆಗಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಗಾಂಧಿ ವಿಚಾರ ವೇದಿಕೆ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖರು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ಅತಿಥಿಗಳು ತೆರಳಿದ್ದರು.

Ad Widget . Ad Widget . Ad Widget .

ಕಾರ್ಯಕ್ರಮ ಸಂಘಟಿಸಿದ ಕೆಲ ಮಂದಿ ಸ್ಥಳದಲ್ಲಿ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭ ಕೆಲಸದ ಕತ್ತಿ ಸಹಿತವಾಗಿಯೇ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಪರಮೇಶ್ವರಿ ಅವರು ನೇರವಾಗಿ ಆಗಮಿಸಿ ಚಪ್ಪಲಿ ತೆಗೆದು ಧ್ವಜವಂದನೆ ಮಾಡಿ ತೆರಳಿದರು. ಈ ಫೋಟೊವನ್ನು ದೂರದಿಂದ ಗಾಂಧಿ ವಿಚಾರ ವೇದಿಕೆಯ ತಾಲೂಕು ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಅವರು ಕ್ಲಿಕ್ಕಿಸಿದ್ದರು, ಬಳಿಕ ತಮ್ಮ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀಶ ಗಬ್ಲಡ್ಕ, ” ಇದು ಗ್ರಾಮೀಣ ಭಾರತ” ಎಂದು ವ್ಯಾಖ್ಯಾನಿಸಿದರು.

ಧ್ವಜಾರೋಹಣದ ನಂತರ ಗ್ರಾಮ ಪಂಚಾಯತ್ ಸದಸ್ಯರುಗಳು ಕೂಡಾ ಆಗಮಿಸಿ ಧ್ವಜ ವಂದನೆ ಸಲ್ಲಿಸಿ ತೆರಳಿದ್ದರು.

Leave a Comment

Your email address will not be published. Required fields are marked *