ನವದೆಹಲಿ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಆ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟವನ್ನು ಮೋದಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಇದೇ ವೇಳೆ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.

ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿ ಫೋಟೋಗೆ ಫೋಲಿಸ್ ನೀಡಿದ್ದಾರೆ. ಮೋದಿ ವಿಶೇಷವಾಗಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೆಚ್ಚಿನ ಚೂರ್ಮಾ ಮಾಡಿಸಿ ಊಟ ಬಡಿಸಿದ್ದಾರೆ. ಭಾರತದ ಕುಸ್ತಿಪಟುಗಳ ಮತ್ತು ಹಾಕಿ ತಂಡದ ಎಲ್ಲ ಆಟಗಾರರೊಂದಿಗೂ ಕೂಡ ಮೋದಿ ಕುಶಲೋಪರಿ ವಿಚಾರಿಸಿ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.




























