Editor

ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಪ್ರಾತ್ಯಕ್ಷಿಕೆ – ಸಚಿವರು ಭಾಗಿ

ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಯನ್ನು ಸೆ. 3ರ ಶುಕ್ರವಾರದಂದು ಅಳಿವೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಮೀನುಗಾರಿಕೆ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. ಸಚಿವರು ಈ ಸಂದರ್ಭದಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಾಂತ್ರಿಕತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನೀರು ಕುಡಿದು ಸಂಭ್ರಮಿಸಿದರು.

ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಪ್ರಾತ್ಯಕ್ಷಿಕೆ – ಸಚಿವರು ಭಾಗಿ Read More »

ದ.ಕದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲು ಶಾಸಕ ಕಾಮತ್, ಸಚಿವ ಕೋಟರಿಂದ ಸಿಎಂಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಮಂಗಳೂರು ನಗರವು ವಾಣಿಜ್ಯ ವಹಿವಾಟುಗಳ ಕೇಂದ್ರ ಸ್ಥಾನವಾಗಿದೆ. ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವುದರಿಂದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ನಡೆಸಲು ಸಹಕಾರಿಯಾಗಲಿದೆ. ಕೈಗಾರಿಕೋದ್ಯಮ, ವೃತ್ತಿಪರ ನೌಕರರು, ದಿನಕೂಲಿ ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಬಸ್ ನೌಕರರು, ಸಣ್ಣಪುಟ್ಟ ಉದ್ಯಮ ಸೇರಿದಂತೆ ಇನ್ನಿತರ ವರ್ಗದ ಜನರು ಕೆಲಸ

ದ.ಕದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲು ಶಾಸಕ ಕಾಮತ್, ಸಚಿವ ಕೋಟರಿಂದ ಸಿಎಂಗೆ ಮನವಿ Read More »

ಸುಳ್ಯ| ಮಕ್ಕಳೊಂದಿಗೆ ಯುವಕನ ಜೊತೆ ಮಹಿಳೆ ಪರಾರಿ

ಸುಳ್ಯ. ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಪರಿಚಿತ ಯುವಕನೊಬ್ಬನೊಂದಿಗೆ ಪರಾರಿಯಾಗಿರುವ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ. ಜಯನಗರದ ಕೊಯಿಂಗೋಡಿ ಸಮೀಪದ ವಿವಾಹಿತ ಮಹಿಳೆಯೋರ್ವಳು ಆಕೆಯ ಮನೆಗೆ ಆಗಾಗ ಬರುತ್ತಿದ್ದ ಪುತ್ತೂರು ಮೂಲದ ಪ್ರದೀಪ್ ಎಂಬ ಯುವಕನೊಂದಿಗೆ ತೆರಳಿರುವುದಾಗಿ ಹೇಳಲಾಗಿದೆ. ಈ ಕುರಿತಂತೆ ಪತಿ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ನಡುವೆ ನಾಪತ್ತೆಯಾಗಿರುವ ಮಹಿಳೆ ಸ್ಥಳಿಯ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದು, ಸಂಘದಿಂದ ಸುಮಾರು 1 ಲಕ್ಷ ರೂ.ಗಳಷ್ಟು ಸಾಲ ತೆಗೆದಿದ್ದು, ಆಕೆ ಪರಾರಿಯಾಗಿರುವ

ಸುಳ್ಯ| ಮಕ್ಕಳೊಂದಿಗೆ ಯುವಕನ ಜೊತೆ ಮಹಿಳೆ ಪರಾರಿ Read More »

ಮೊಬೈಲ್ ಕೊಡಿಸಲಿಲ್ಲವೆಂದು ತಂದೆಯನ್ನೇ ಕೊಂದ ಭೂಪ

ತಂದೆ ಮೊಬೈಲ್ ನೀಡಲಿಲ್ಲ ಎಂಬ ಕಾರಣಕ್ಕೆ ಮಗ, ತಂದೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ ಸಂಬಂಧಿಸಿದ ಆಘಾತಕಾರಿ ಘಟನೆ ನಡೆದಿದೆ. ಅರ್ಜುನ್ ಸರ್ಕಾರ್ ಎಂಬಾತ ತನ್ನ ಪತ್ನಿ ಹಾಗೂ ಮಗನ ಜೊತೆ ಇಚ್ಚಾಪೂರ್ ನಲ್ಲಿ ವಾಸವಾಗಿದ್ದ. ಕೆಲಸದ ಮೇಲೆ ಹೊರಗೆ ಹೋಗಿದ್ದ ಅರ್ಜುನ್ ಪತ್ನಿ ಡಾಲಿ, ಮನೆಗೆ ಬಂದಾಗ ಅರ್ಜುನ್ ಪ್ರಜ್ಞೆ ತಪ್ಪಿ ಬಿದ್ದಿರುವ ಸ್ಥಿತಿಯಲ್ಲಿದ್ದ ಎನ್ನಲಾಗಿದೆ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ವೈದ್ಯರು, ಅರ್ಜುನ್ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ.

ಮೊಬೈಲ್ ಕೊಡಿಸಲಿಲ್ಲವೆಂದು ತಂದೆಯನ್ನೇ ಕೊಂದ ಭೂಪ Read More »

ಇಡಾ ಚಂಡಮಾರುತಕ್ಕೆ ಅಮೇರಿಕಾ ತತ್ತರ| 41 ಮಂದಿ ಬಲಿ

ಇಡಾ ಚಂಡಮಾರುತವು ಉಂಟು ಮಾಡಿದ ಪ್ರವಾಹ ಪರಿಸ್ಥಿತಿಯಲ್ಲಿ ನ್ಯೂಯಾರ್ಕ್​ನಲ್ಲಿ ರಾತ್ರೋರಾತ್ರಿ ಕನಿಷ್ಟ 41 ಮಂದಿಯನ್ನು ಬಲಿ ಪಡೆದಿದೆ. ಹ್ಯುರಿಕೇನ್​ ಇಡಾ ಚಂಡಮಾರುತದ ಬಳಿಕ ನ್ಯೂಯಾರ್ಕ್​ನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯೂಯಾರ್ಕ್​ನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಿದೆ. ನ್ಯೂಯಾರ್ಕ್​ ನಗರದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು ಕಟ್ಟಡಗಳು, ಎಲೆಕ್ಟ್ರಿಕ್​ ಕಂಬಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ

ಇಡಾ ಚಂಡಮಾರುತಕ್ಕೆ ಅಮೇರಿಕಾ ತತ್ತರ| 41 ಮಂದಿ ಬಲಿ Read More »

ಬಂಟ್ವಾಳ : ಸ್ಕೂಟರ್,ಜೀಪ್ ಢಿಕ್ಕಿ- ಸವಾರ ಸಾವು

ಬಂಟ್ವಾಳ: ಜೀಪ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಮೃತ ಪಟ್ಟ ಘಟನೆ ನಾವೂರದಲ್ಲಿ ನಡೆದಿದೆ.ನಾವೂರ ನಿವಾಸಿ ಅಬ್ಬಾಸ್ (60) ಮೃತಪಟ್ಟ ವ್ಯಕ್ತಿ. ತಾಲೂಕಿನ ಮಣಿಹಳ್ಳ ಸಮೀಪದ ನಾವೂರ ಮಸೀದಿ ಎದುರಿನಲ್ಲಿ ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯವಾಗಿದ್ದ ಸ್ಕೂಟರ್ ಸವಾರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಸವಾರ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ : ಸ್ಕೂಟರ್,ಜೀಪ್ ಢಿಕ್ಕಿ- ಸವಾರ ಸಾವು Read More »

ಹೆಡ್ ಕಾನ್‍ಸ್ಟೇಬಲ್ ಸರಕ್ಕೆ ಕನ್ನ ಹಾಕಿದ ಖದೀಮರು

ಮೈಸೂರು: ಹೆಡ್ ಕಾನ್‍ಸ್ಟೇಬಲ್ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಸಂತ ಫಿಲೋಮಿನಾ ಚರ್ಚ್ ಬಳಿ ಗುರುವಾರ ರಾತ್ರಿ ನಡೆದಿದೆ. ಇಲಿಯಾಸ್ ಸರ ಕಳೆದುಕೊಂಡ ಹೆಡ್ ಕಾನ್‍ಸ್ಟೇಬಲ್. ಇವರು ಮಫ್ತಿಯಲ್ಲಿದ್ದಾಗ ಕಳ್ಳರು ಸರವನ್ನು ಕದ್ದು ಪರಾರಿಯಾಗಿದ್ದರು. 32 ಗ್ರಾಂ. ಚಿನ್ನದ ಸರ ಕಸಿದ ಕಳ್ಳರು, ನಂತರ ಓಡಲಾಗದೆ ಮಿಲಾದ್ ಪಾರ್ಕ್‍ನಲ್ಲಿ ಇಬ್ಬರು ಕಳ್ಳರು ಅಡಗಿದ್ದರು. ತಕ್ಷಣ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಸರ ಸಮೇತ ಪೆÇಲೀಸರ ವಶಕ್ಕೆ ನೀಡಿದ್ದಾರೆ.ಲಷ್ಕರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೆÇಲೀಸರು

ಹೆಡ್ ಕಾನ್‍ಸ್ಟೇಬಲ್ ಸರಕ್ಕೆ ಕನ್ನ ಹಾಕಿದ ಖದೀಮರು Read More »

ಅಕ್ರಮವಾಗಿ ರಸಗೊಬ್ಬರ ದಾಸ್ತಾನು:47 ಕೆ.ಜಿ.ಯೂರಿಯಾ ಚೀಲ ವಶಕ್ಕೆ

ಹಾಸನ: ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ 47 ಕೆ.ಜಿ. ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲೆಯ ಅರಸೀಕೆರೆ ತಾಲೂಕಿನ ಅಣ್ಣಾಯಕನಹಳ್ಳಿ, ಕೆಳಗಲಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಜಯಶಂಕರ್ ಅವರ ಮನೆಯ ಮುಂಭಾಗ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ರೈತರಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಈ ಖಚಿತ ಮಾಹಿತಿ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ಅಶೋಕ್, ರಸಗೊಬ್ಬರ ನಿರೀಕ್ಷಕ ಪ್ರಭಾವತಿ ಮತ್ತು ಪೆÇಲೀಸರ ತಂಡ

ಅಕ್ರಮವಾಗಿ ರಸಗೊಬ್ಬರ ದಾಸ್ತಾನು:47 ಕೆ.ಜಿ.ಯೂರಿಯಾ ಚೀಲ ವಶಕ್ಕೆ Read More »

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಚೂರಿ ಇರಿತ

ಮಂಗಳೂರು: ವಕ್ತಿಯೊಬ್ಬನಿಗೆ ತಂಡವೊಂದು ಚೂರಿ ಇರಿದ ಘಟನೆ ಮಂಗಳೂರು ಹೊರವಲಯದ ಎದುರುಪದವು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಇರಿತಕ್ಕೊಳಗಾದವರನ್ನು ಬಾಗಲಕೋಟೆ ಮೂಲದ ನಿಂಗಣ್ಣ ಎಂದು ಗುರುತಿಸಲಾಗಿದೆ. ಚೂರಿ ಎದುರುಪದವು ನಿವಾಸಿ ದಿವಾಕರ್ ಯಾನೆ ದೀವ ತಂಡದಿಂದ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಮದ್ಯಪಾನದ ಅಮಲಿನಲ್ಲಿ ನಿಂಗಣ್ಣ ಹಾಗೂ ತಂಡದೊಂದಿಗೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿ ಕೊನೆಗೆ ಚೂರಿ ಇರಿಯುವ ಹಂತಕ್ಕೆ ಹೋಗಿದೆ.ಚೂರಿ ಇರಿತದ ಪರಿಣಾಮ ನಿಂಗಣ್ಣ ತಲೆಗೆ ಗಂಭೀರ ಗಾಯವಾಗಿದ್ದು

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಚೂರಿ ಇರಿತ Read More »

ಪ್ಯಾರಾಲಂಪಿಕ್: ಹೈಜಂಪ್ ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್

ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಹೈ ಜಂಪ್ ನಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ T64 ಈವೆಂಟ್ ನಲ್ಲಿ ಭಾರತದ ಪ್ರವೀಣ್ ಕುಮಾರ್ 2.07 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ 2ನೇ ಸ್ಥಾನಕ್ಕೇರಿದರು.ಆ ಮೂಲಕ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು. ಇದೇ ಪಂದ್ಯದಲ್ಲಿ ಬ್ರಿಟನ್ ನ ಜೋನಾಥನ್ ಬ್ರೂಮ್ ಎಡ್ವರ್ಡ್ಸ್ ಅವರು 2.10 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಚಿನ್ನದ ಪದಕ ಗೆದ್ದರೆ,

ಪ್ಯಾರಾಲಂಪಿಕ್: ಹೈಜಂಪ್ ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ Read More »