Editor

ಗಣಪತಿ ಮೂರ್ತಿ ಧ್ವಂಸ ಮಾಡಿದ ಕಿಡಿಗೇಡಿಗಳು ಗ್ರಾಮಸ್ಥರಿಂದ ಹೆಚ್ಚಿದ ಆಕ್ರೋಶ

ಚಿತ್ರದುರ್ಗ: ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕರು ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದರು. ಆದರೆ ತಡರಾತ್ರಿ ಗಣಪತಿ ಮೂರ್ತಿಯನ್ನ ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಈ ಕೃತ್ಯದಿಂದಾಗಿ ಹಿರೇಹಳ್ಳಿ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸತತ 14 ವರ್ಷಗಳಿಂದ ಗ್ರಾಮದ ಯುವಕರು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಆದರೆ ಈ ರೀತಿ ಮಾಡಿರುವುದು […]

ಗಣಪತಿ ಮೂರ್ತಿ ಧ್ವಂಸ ಮಾಡಿದ ಕಿಡಿಗೇಡಿಗಳು ಗ್ರಾಮಸ್ಥರಿಂದ ಹೆಚ್ಚಿದ ಆಕ್ರೋಶ Read More »

ನಟ ಸಾಯಿ ಧರ್ಮ ತೇಜ್ ಬೈಕ್ ಅಪಘಾತ: ಸ್ಥಿತಿ ಗಂಭೀರ

ಹೈದರಾಬಾದ್‌: ಇಲ್ಲಿನ ಕೇಬಲ್‌ ಸೇತುವೆಯ ಮೇಲೆ ನಡೆದ ಅಪಘಾತದಲ್ಲಿ ತೆಲುಗು ಚಿತ್ರನಟ ಸಾಯಿ ಧರ್ಮ ತೇಜ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹೈದರಾಬಾದ್‌ನ ಕೇಬಲ್‌ ಸೇತುವೆಯ ಮೇಲೆ ಸಾಯಿ ಧರ್ಮ ತೇಜ್‌ ವೇಗವಾಗಿ ಚಲಿಸುತ್ತಿದ್ದ ಬೈಕ್‌ ಸ್ಕಿಡ್‌ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್‌ ಅವರು ಹೆಲ್ಮೆಟ್‌ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಜುಬಿಲಿ ಹಿಲ್ಸ್‌ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಯಿ ಧರ್ಮ

ನಟ ಸಾಯಿ ಧರ್ಮ ತೇಜ್ ಬೈಕ್ ಅಪಘಾತ: ಸ್ಥಿತಿ ಗಂಭೀರ Read More »

ಪಣಂಬೂರು: ದೋಣಿ ದುರಂತ – ನಾಲ್ವರು ಮೀನುಗಾರರ ರಕ್ಷಣೆ , ಓರ್ವ ನಾಪತ್ತೆ

ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿ ದುರಂತ ಸಂಭವಿಸಿ ಮೀನುಗಾರರು ನೀರುಪಾಲಾದ ಘಟನೆ ನಡೆದಿದೆ. ಅಝರ್ ಎಂಬವರ ಮಾಲಕತ್ವದ ಗಿಲ್ ನೆಟ್ ಬೋಟ್ ಇದಾಗಿದ್ದು ಅವಘಡ ಸಂಭವಿಸಿ ಮೀನುಗಾರರು ನೀರುಪಾಲಾಗಿದ್ದು ಈ ಪೈಕಿ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಪೈಕಿ ಓರ್ವ ನಾಪತ್ತೆಯಾಗಿದ್ದು ಆತನನ್ನು ಶರೀಫ್ ಎಂದು ಗುರುತಿಸಲಾಗಿದೆ. ಸದ್ಯ ದೋಣಿಯನ್ನು ದಡಕ್ಕೆ ತರಲಾಗಿದೆ.

ಪಣಂಬೂರು: ದೋಣಿ ದುರಂತ – ನಾಲ್ವರು ಮೀನುಗಾರರ ರಕ್ಷಣೆ , ಓರ್ವ ನಾಪತ್ತೆ Read More »

ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ಪತ್ತೆ| ಶುರುವಾಯ್ತು ಮತ್ತೊಂದು ಆತಂಕ

ಬೆಂಗಳೂರು : ಕೊರೊನಾ 3ನೇ ಅಲೆ ಭೀತಿ ಬೆನ್ನಲ್ಲೇ ಜನರಿಗೆ ಮತ್ತೊಂದು ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಕೊರೊನಾದ ಡೆಲ್ಟಾ ಉಪ ರೂಪಾಂತರಿ ಎವೈ3, ಎವೈ4, ಎವೈ6 (AY3, AY4, AY6) ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ ಹೊಸ ರೂಪಾಂತರಿಯ 400 ಸ್ಯಾಂಪಲ್‌ ಟೆಸ್ಟ್‌ ಮಾಡಲಾಗಿದ್ದು, ಇದರಲ್ಲಿ ಒಂದಿಷ್ಟು ಜನರಿಗೆ ರೂಪಾಂತರಿ ಕಂಡು ಬಂದಿದೆ.ಎವೈ3, ಎವೈ4, ಎವೈ6 ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಕೆಲವರು ಡಿಸ್ಚಾರ್ಜ್‌ ಆಗಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ ಹೇಳಿದ್ದಾರೆ.

ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ಪತ್ತೆ| ಶುರುವಾಯ್ತು ಮತ್ತೊಂದು ಆತಂಕ Read More »

ನಿನ್ನ ವಾಹನದಿಂದ ಬೆಳೆ ಉಳಿಸು – ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

ಚಿಕ್ಕಮಗಳೂರು: ಗಣಪತಿ ಹಬ್ಬದಂದು ರೈತನೊಬ್ಬ ಜೀವಂತ ಇಲಿಯನ್ನು ಗಣೇಶನಿಗೆ ನೀಡಿ, ಬೆಳೆಗಳನ್ನು ಉಳಿಸು ಎಂದು ಬೇಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ. ಮರ್ಕಲ್ ಗ್ರಾಮದ ರೈತ ನಿತಿನ್ ಅವರ ಹೊಲದಲ್ಲಿ ಇಲಿಗಳ ಕಾಟ ಯಥೇಚ್ಛವಾಗಿತ್ತು. ಯಾವುದೇ ಔಷಧಿ ಇಟ್ಟರೂ, ಏನೇ ಮಾಡಿದರೂ ಇಲಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಯೂ ಇಲಿ ಹಾಗೂ ಮಣ್ಣು ಪಾಲಾಗುತ್ತಿತ್ತು. ಇದರಿಂದ ಮನನೊಂದ ರೈತ ನಿನ್ನ ವಾಹನದಿಂದ ನಮ್ಮ ಬೆಳೆಗಳು ನಾಶವಾಗುತ್ತವೆ, ಬೆಳೆಗಳನ್ನ ಉಳಿಸಿಕೊಳ್ಳುವುದೇ ಕಷ್ಟವಾಗಿದೆ

ನಿನ್ನ ವಾಹನದಿಂದ ಬೆಳೆ ಉಳಿಸು – ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ Read More »

ಮುಂಬೈ| ಮತ್ತೊಂದು ನಿರ್ಭಯಾ ಮಾದರಿ ಪ್ರಕರಣ| ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ರಾಡ್ ತುರುಕಿದ ಪಾಪಿ

ಮುಂಬೈ: ನಿರ್ಭಯಾ ಪ್ರಕರಣದಿಂದ ಇಡೀ ದೇಶವೆ ಬೆಚ್ಚಿ ಬಿದ್ದಿತ್ತು. 2012ರಲ್ಲಿ ನಡೆದ ಈ ಅತ್ಯಾಚಾರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ತಲೆ ತಗ್ಗಿಸುವಂತಾಗಿತ್ತು. ಇದೀಗ ಇದೇ ರೀತಿಯ ಮತ್ತೊಂದು ಪ್ರಕರಣ ಮುಂಬೈನಲ್ಲಿ ವರದಿಯಾಗಿದೆ. 34ರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ನಿರ್ಭಯಾ ಮೇಲೆ ಬಸ್‌ನಲ್ಲಿ ಅತ್ಯಾಚಾರ ಮಾಡಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಲಾಗಿತ್ತು. ಇದೀಗ ಮುಂಬೈ ಅತ್ಯಾಚಾರ ಪ್ರಕರಣದಲ್ಲಿ ಬಸ್ ಬದಲು ಸರಕು

ಮುಂಬೈ| ಮತ್ತೊಂದು ನಿರ್ಭಯಾ ಮಾದರಿ ಪ್ರಕರಣ| ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ರಾಡ್ ತುರುಕಿದ ಪಾಪಿ Read More »

ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, (ಸೆ.08): ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕುಕ್, ಹೌಸ್ ಕೀಪಿಂಗ್, ಸ್ಟೋರ್ ಕೀಪರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ವಿದ್ಯಾರ್ಹತೆ: ಕಾರ್ಪೆಂಟರ್: 10ನೇ ತರಗತಿ ಪಾಸ್ ಹೌಸ್ ಕೀಪಿಂಗ್: ಮೆಟ್ರಿಕ್ಯುಲೇಷನ್ ಕ್ಲರ್ಕ್: 12ನೇ ತರಗತಿ ಪಾಸ್ ಸ್ಟೋರ್ ಕೀಪರ್: 12ನೇ ತರಗತಿ ಪಾಸ್ ಪೈಂಟರ್: 10ನೇ ತರಗತಿ, ವಯೋಮಿತಿ: ಕನಿಷ್ಠ

ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಶಾಲಾ ಮಕ್ಕಳಿಗೆ ದಸರಾ ಹಾಗೂ ಬೇಸಿಗೆ ರಜೆ ಘೋಷಣೆ

ಬೆಂಗಳೂರು :‌ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಅದ್ರಂತೆ, ಆಕ್ಟೋಬರ್ 10 ರಿಂದ ಈ ದಸರಾ ರಜೆ ಪ್ರಾರಂಭವಾಗಲಿದ್ದು, 20 ರವರೆಗೆ ಇರಲಿದೆ. ಅಂದರೆ ಬರೋಬ್ಬರಿ 10 ದಿನಗಳ ದಸರಾ ರಜೆ ಘೋಷಿಸಲಾಗಿದೆ. ಈ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ. ಇದರ ಜೊತೆಗೆ ಬೇಸಿಗೆ ರಜೆಯನ್ನೂ ಘೋಷಣೆ ಮಾಡಿದ್ದು, ಮುಂದಿನ ವರ್ಷ

ಶಾಲಾ ಮಕ್ಕಳಿಗೆ ದಸರಾ ಹಾಗೂ ಬೇಸಿಗೆ ರಜೆ ಘೋಷಣೆ Read More »

ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ

ಮಂಡ್ಯ: ರಾತ್ರಿಯಾಗ್ತಿದ್ದಂತೆ ಭಾರೀ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿಯ ಪಾಲಹಳ್ಳಿ ಗ್ರಾಮದ ಬಳಿ ನಡೆದಿದೆ. ಕಳೆದ ಒಂದು ತಿಂಗಳಿನಿಂದ ರಂಗನತಿಟ್ಟು ಪಕ್ಷಿಧಾಮದ ಪಾಲಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆಯಲ್ಲಿ ಮೊಸಳೆಯೊಂದು ಸೇರಿಕೊಂಡಿದ್ದು, ಈಗಾಗಲೇ ನಾಲೆಯಿಂದ ಮೇಲೆ ಬಂದ ಮೂರ್ನಾಲ್ಕು ಕುರಿ ಮೇಕೆಗಳನ್ನು ತಿಂದಿದೆ. ಇದೀಗ ಮತ್ತೊಮ್ಮೆ ಭಾರೀ ಗಾತ್ರದ ಈ ಮೊಸಳೆ ವಿರಿಜಾ ನಾಲೆಯ ಪಕ್ಕದಲ್ಲೇ ರಾತ್ರಿಯಲ್ಲಿ ರಸ್ತೆಗೆ ಬಂದು ಆಹಾರಕ್ಕಾಗಿ

ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ Read More »

ಕಾರ್ಕಳ|ಅಕ್ರಮ ಮತಾಂತರ ಆರೋಪ – ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿದ ಹಿಂಜಾವೇ ಕಾರ್ಯಕರ್ತರು

ಕಾರ್ಕಳ: ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರಾರ್ಥನೆ ನಡೆಸುತ್ತಿದ್ದ ಜಾಗದ ಮೇಲೆ ದಾಳಿ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಕುಕ್ಕಂದೂರು ಗ್ರಾಮದ ನಕ್ರೆ ಆನಂದಿ ಮೈದಾನ ಎಂಬಲ್ಲಿರುವ ಪ್ರಗತಿ ಸೆಂಟರ್ ಎಂಬ ಹೆಸರಿನ ಕೇಂದ್ರದಲ್ಲಿ ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಿಂದ ಇಲ್ಲಿ ಹಿಂದೂ ಧರ್ಮದವರನ್ನು ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ದಾಳಿ ಸಂದರ್ಭ

ಕಾರ್ಕಳ|ಅಕ್ರಮ ಮತಾಂತರ ಆರೋಪ – ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿದ ಹಿಂಜಾವೇ ಕಾರ್ಯಕರ್ತರು Read More »