Editor

ಜೀಪ್- ಕ್ಯಾಂಟರ್ ಮುಖಾಮುಖಿ ಢಿಕ್ಕಿ| 8 ಮಂದಿ ದುರ್ಮರಣ

ಚಿಕ್ಕಬಳ್ಳಾಪುರ: ಜೀಪ್, ಕ್ಯಾಂಟರ್​ ನಡುವೆ ಡಿಕ್ಕಿ ಆಗಿ 8 ಜನರ ದುರ್ಮರಣ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮದಿನಾಯಕನಹಳ್ಳಿ ಬಳಿ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಜೀಪ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬಳ್ಳಾಪುರ ಎಸ್​ಪಿ ಜಿ.ಜೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಪಘಾತ ಆದ ಜೀಪ್‌ನಲ್ಲಿ 14 ಪ್ರಯಾಣಿಕರು ಇದ್ದರು. ಜೀಪ್​ನಲ್ಲಿ ಇದ್ದ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಜೀರೋ ಟ್ರಾಫಿಕ್‌ನಲ್ಲಿ […]

ಜೀಪ್- ಕ್ಯಾಂಟರ್ ಮುಖಾಮುಖಿ ಢಿಕ್ಕಿ| 8 ಮಂದಿ ದುರ್ಮರಣ Read More »

ಕಡಬ: ಉದನೆಯ ಗಣಪತಿ ಕಟ್ಟೆಗೆ ಹಾನಿಗೊಳಿಸಿದ ಆರೋಪಿಯ ಬಂಧನ

ಉಪ್ಪಿನಂಗಡಿ: ಇಲ್ಲಿನ ಸಮೀಪದ ಉದನೆಯ ಗಣಪತಿ ಕಟ್ಟೆಯನ್ನು ನಿನ್ನೆ ಧ್ವಂಸ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಿಹಾರ ಮೂಲದ ರವೀಂದ್ರ ಕುಮಾರ್‌ ಎಂದು ಗುರುತಿಸಲಾಗಿದ್ದು, ಆತ ಪೊಲೀಸರ ವಶದಲ್ಲಿದ್ದಾನೆ. ಸೆ.10ರಂದು ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಉದನೆ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಗಣಪತಿ ಕಟ್ಟೆಯ ಮೆಟ್ಟಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಆದರೆ, ರಾತ್ರಿ ವೇಳೆ ಆರೋಪಿ ಬಾಳೆಗಿಡಗಳನ್ನು ಕಿತ್ತೆಸೆದು ಕಲ್ಲು ಎತ್ತಿಹಾಕಿ ಮೆಟ್ಟಿಲನ್ನು ಹಾನಿಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉದನೆಯಲ್ಲಿ ಓಡಾಡಿಕೊಂಡಿದ್ದ ಆರೋಪಿ

ಕಡಬ: ಉದನೆಯ ಗಣಪತಿ ಕಟ್ಟೆಗೆ ಹಾನಿಗೊಳಿಸಿದ ಆರೋಪಿಯ ಬಂಧನ Read More »

ಹಾಡುಹಗಲೇ‌ ಮಹಿಳೆಯ ಸರ ಕಿತ್ತು ಪರಾರಿಯಾದ ಆಗಂತುಕ| ಮಹಿಳೆಯರೇ ಒಬ್ಬಂಟಿಯಾಗಿ ಹೊರಗಡೆ ಹೋಗುವಾಗ ಎಚ್ಚರ

ಮಂಗಳೂರು: ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆಗಂತುಕರು ಆಕೆಯ ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾದ ಘಟನೆ ನಗರದ ಶಿವಭಾಗ್ ಬಳಿಯ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ. ರಿಟ್ಸ್ ಕಾರಿನಲ್ಲಿ ಬಂದ ಮೂವರು ನಗರದ ಆಗ್ನೆಸ್ ಕಾಲೇಜಿನ ಎದುರುಗಡೆಯಿಂದ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಕುತ್ತಿಗೆಯಿಂದ ಸರ ಕಿತ್ತು ಓಡಿದ್ದಾರೆ. ರಿಟ್ಸ್ ಕಾರಿನಿಂದ ಮೊದಲು ಮೂವರು ಇಳಿದಿದ್ದು ಇಬ್ಬರು ಬಾಗಿಲು ಹತ್ತಿರದಲ್ಲೇ ನಿಂತಿದ್ದರು. ಇನ್ನೊಬ್ಬಾತ ಮಹಿಳೆಯನ್ನು ಎಳೆದಾಡಿ ಸರ ಕೀಳಲು ಯತ್ನಿಸಿದ್ದಾನೆ. ಸಾಧಾರಣ

ಹಾಡುಹಗಲೇ‌ ಮಹಿಳೆಯ ಸರ ಕಿತ್ತು ಪರಾರಿಯಾದ ಆಗಂತುಕ| ಮಹಿಳೆಯರೇ ಒಬ್ಬಂಟಿಯಾಗಿ ಹೊರಗಡೆ ಹೋಗುವಾಗ ಎಚ್ಚರ Read More »

ಮೈಸೂರಿನ ಹಲವು ಅನಧಿಕೃತ ದೇಗುಲಗಳ ತೆರವಿಗೆ ಸುಪ್ರೀಂ ಅನುಮತಿ| ಅನಧಿಕೃತ ಮಸೀದಿ, ಚರ್ಚ್ ಗಳು ಕಾಣೋದಿಲ್ವೇ? – ಪ್ರತಾಪ್ ಸಿಂಹ ಆಕ್ರೋಶ

ಮೈಸೂರು (ಸೆ.12): ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಮೈಸೂರಿನ ನಗರದ ಹಲವು ದೇವಾಲಯಗಳಿಗೆ ನೆಲಸಮ ಭೀತಿ ಎದುರಾಗಿದೆ.93 ದೇವಾಲಯಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೈಸೂರು ಮಹಾನಗರ ಪಾಲಿಕೆ ಪಟ್ಟಿ ಮಾಡಿದೆ. ಇದರಲ್ಲಿ ಪ್ರಸಿದ್ಧ ಅಗ್ರಹಾರದ ನೂರೊಂದು ಗಣಪತಿ ದೇವಾಲಯವೂ ಸೇರಿದೆ. ಇದೇ ತಿಂಗಳ 22ರಂದು ಮೈಸೂರು ನಗರದಲ್ಲಿರುವ 93 ದೇವಾಲಯಗಳ ತೆರವು ಕಾರ್ಯ ಆರಂಭವಾಗಲಿದೆ.ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆಗೂಡು ದುರ್ಗಾ ಪರಮೇಶ್ವರಿ, ನ್ಯೂ ಸಯ್ಯಾಜಿರಾವ್ ಪಂಚಮುಖಿ ಗಣಪತಿ ದೇವಾಲಯ, ವಿಜಯನಗರ ಚಾಮುಂಡೇಶ್ವರಿ ದೇವಾಲಯಗಳೂ ಸುಪ್ರೀಂಕೋರ್ಟ್

ಮೈಸೂರಿನ ಹಲವು ಅನಧಿಕೃತ ದೇಗುಲಗಳ ತೆರವಿಗೆ ಸುಪ್ರೀಂ ಅನುಮತಿ| ಅನಧಿಕೃತ ಮಸೀದಿ, ಚರ್ಚ್ ಗಳು ಕಾಣೋದಿಲ್ವೇ? – ಪ್ರತಾಪ್ ಸಿಂಹ ಆಕ್ರೋಶ Read More »

ಮಾಜಿ ಸಿಎಂ ಯಡಿಯೂರಪ್ಪರನ್ನು ದಿಢೀರ್ ಭೇಟಿಯಾದ ನಳಿನ್|

: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಳೆದ ರಾತ್ರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ವಿದ್ಯಮಾನ ಕುತೂಹಲ ಮೂಡಿಸಿದೆ. ಕಳೆದ ರಾತ್ರಿ ಸರ್ಕಾರಿ ನಿವಾಸದಲ್ಲಿ ನಳಿನ್ ಕುಮಾರ್ ಕಟೀಲ್ ಮಾಜಿ ಸಿಎಂ ಬಿ.ಎಸ್ ವೈ ರನ್ನು ಭೇಟಿ ಮಾಡಿದ್ದಾರೆ. ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಳಿಕ ಪಕ್ಷದ ಕೋರ್ ಕಮಿಟಿ ಸಭೆ ಇನ್ನೂ ನಡೆದಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ವಾರದಲ್ಲಿ ಕೋರ್ ಕಮಿಟಿ

ಮಾಜಿ ಸಿಎಂ ಯಡಿಯೂರಪ್ಪರನ್ನು ದಿಢೀರ್ ಭೇಟಿಯಾದ ನಳಿನ್| Read More »

ರಾಜಸ್ಥಾನ – ಮಹಿಳಾ ಕಾನ್ಸ್​ಟೇಬಲ್ ಜೊತೆ ಡಿಎಸ್ ಪಿ ರಾಸಲೀಲೆ ವಿಡಿಯೋ ವೈರಲ್ – ಪೋಕ್ಸೋ ಕಾಯ್ದೆಯಡಿ ಅಧಿಕಾರಿ ಆರೆಸ್ಟ್

ರಾಜಸ್ಥಾನ : ಮಹಿಳಾ ಕಾಸ್ಸ್ಟೇಬಲ್ ಜೊತೆ ಡಿಎಸ್ ಪಿ ಅಧಿಕಾರಿಯೊಬ್ಬ ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆಸಿದ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರು ವರ್ಷದ ಮಗುವಿನ ಮುಂದೆಯೆ ನಡೆಸಿದ ರಾಸಲೀಲೆ ಹಿನ್ನಲೆ ಪೊಲೀಸ್ ಅಧಿಕಾರಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಅಜ್ಮೇರ್ ಜಿಲ್ಲೆಯ ಬೇವಾರ್ ನಲ್ಲಿ ಆರೋಪಿ ಅಧಿಕಾರಿ ಹೀರಾ ಲಾಲ್ ಸೈನಿ, ಸರ್ಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಹ ಕೆಲಸ ಮಾಡುತ್ತಿದ್ದರು. ಹೀರಾಲಾಲ್ ಸೈನಿ ಅವರನ್ನು

ರಾಜಸ್ಥಾನ – ಮಹಿಳಾ ಕಾನ್ಸ್​ಟೇಬಲ್ ಜೊತೆ ಡಿಎಸ್ ಪಿ ರಾಸಲೀಲೆ ವಿಡಿಯೋ ವೈರಲ್ – ಪೋಕ್ಸೋ ಕಾಯ್ದೆಯಡಿ ಅಧಿಕಾರಿ ಆರೆಸ್ಟ್ Read More »

ಮತ್ತೊಬ್ಬನೊಂದಿಗಿತ್ತು‌ ಆಕೆಗೆ ಅನೈತಿಕ ಸಂಬಂಧ| ಇದನ್ನೇ ಸರಿಯಾಗಿ ಬಳಸಿಕೊಂಡ ಖತರ್ನಾಕ್ ಮಗಳು| ಏನು ಗೊತ್ತಾ ಈ ವಿಚಿತ್ರ ಸ್ಟೋರಿ?

ಪುಣೆ : ಬಿತ್ತಿದಂತೆ ಬೆಳೆ‌, ತಾಯಿಯಂತೆ ಮಗಳು‌ ಎಂಬ ಗಾದೆ ಮಾತು ನೀವೆಲ್ಲಾ ಕೇಳಿರ್ತೀರಿ. ಈ ಗಾದೆಗೆ ಹೋಲುವಂತಹ ಪ್ರಕರಣವೊಂದು ನಡೆದಿದೆ. ತಾಯಿ ಮತ್ತೋರ್ವ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಇದನ್ನೇ ಮಗಳು ತನ್ನ ಬಂಡವಾಳವಾಗಿ ಮಾಡಿಕೊಂಡಿದ್ದಾಳೆ. 21 ವರ್ಷದ ಮಗಳಿಗೆ ಅಮ್ಮನ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿದೆ. ಆದರೆ ಮಗಳು ಇದನ್ನು ದೊಡ್ಡದು ಮಾಡಲು ಹೋಗಿಲ್ಲ. ಬದಲಾಗಿ ಅಮ್ಮನ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಇಳಿದಿದ್ದಾಳೆ. ತಾಯಿ ಅನೈತಿಕ

ಮತ್ತೊಬ್ಬನೊಂದಿಗಿತ್ತು‌ ಆಕೆಗೆ ಅನೈತಿಕ ಸಂಬಂಧ| ಇದನ್ನೇ ಸರಿಯಾಗಿ ಬಳಸಿಕೊಂಡ ಖತರ್ನಾಕ್ ಮಗಳು| ಏನು ಗೊತ್ತಾ ಈ ವಿಚಿತ್ರ ಸ್ಟೋರಿ? Read More »

ನೇತ್ರಾವತಿ ನದಿಯಲ್ಲಿ ತೇಲಿ ಬಂದ ಯುವತಿಯ ಮೃತ ದೇಹ

ಉಳ್ಳಾಲ: ಹೊಯ್ಗೆಬಜಾರ್‌ನ ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಇಂದು ಮುಂಜಾನೆ ತೇಲಿ ಬಂದ ಘಟನೆ ನಡೆದಿದೆ. ಮಂಗಳೂರು ಧಕ್ಕೆಯ ಸಮೀಪ ಎಡಭಾಗ ನದಿಯಲ್ಲಿ ಮೃತದೇಹ ತೇಲಿಬರುತಿತ್ತು. ಇದನ್ನು ಗಮನಿಸಿದ ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ದೋಣಿಯವರು ಉಳ್ಳಾಲ ಉಳಿಯ ನಿವಾಸಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮೃತದೇಹವಿದ್ದ ಸ್ಥಳಕ್ಕೆ ತೆರಳಿದ ಇಬ್ಬರು ಮೀನುಗಾರರು ಮೃತದೇಹವನ್ನು ಹೊಯ್ಗೆಬಜಾರ್ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ಸುಮಾರು 20-35 ರ ಒಳಗಿನ ಯುವತಿಯಾಗಿದ್ದು, ಪ್ಯಾಂಟ್ ಹಾಗೂ ಟೀಶರ್ಟ್‌ ಧರಿಸಿದ್ದಳು. ಆತ್ಮಹತ್ಯೆಯೋ ಅಥವಾ

ನೇತ್ರಾವತಿ ನದಿಯಲ್ಲಿ ತೇಲಿ ಬಂದ ಯುವತಿಯ ಮೃತ ದೇಹ Read More »

ಕಾಸರಗೋಡು: ಯುವಕನ ಅಪಹರಣ – ಇಬ್ಬರ ಬಂಧನ

ಕಾಸರಗೋಡು: ಕಾರಿನಲ್ಲಿ ಬಂದ ತಂಡವೊಂದು ಯುವಕನನ್ನು ಅಪಹರಿಸಿದ ಘಟನೆ ಸೆ.10ರ ರಾತ್ರಿ ಮಜೀರ್ಪಳ್ಳದಲ್ಲಿ ನಡೆದಿದ್ದು, ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಮಜೀರ್ಪಳ್ಳ ಬಲಿಪಗುಳಿಯ ಸವಾದ್ (28) ಅಪಾರಣವಾದ ಯುವಕ. ಈತನನ್ನು ಬಲವಂತವಾಗಿ ಅಪಹರಿಸಿ ಪರಾರಿಯಾಗಿದ್ದು, ಈ ಕಾರಿಗೆ ಬೆಂಗಾವಲಾಗಿ ಬಂದ ಇನ್ನೊಂದು, ಕಾರು ಮತ್ತು ಬೈಕ್ ಅನ್ನು ನಾಗರಿಕರು ತಡೆದು ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಂಕನಾಡಿಯ ಅಬ್ದುಲ್ ಹಸೀಬ್ (28) ಹಾಗೂ ಬಂಟ್ವಾಳದ ಯಾಹ್ಯಾ (32) ಬಂಧಿತ ಅರೋಪಿಗಳು. ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಹಣಕಾಸಿನ

ಕಾಸರಗೋಡು: ಯುವಕನ ಅಪಹರಣ – ಇಬ್ಬರ ಬಂಧನ Read More »

ನಿಫಾ, ಕೊರೊನಾ ಆತಂಕ |ಅಕ್ಟೋಬರ್ ಕೊನೆವರೆಗೆ ಮೈಸೂರು-ಕೇರಳ ಓಡಾಟ ನಿಷೇಧ

ಮೈಸೂರು: ನೆರೆಯ ರಾಜ್ಯ ಕೇರಳದಲ್ಲಿ ಮಹಾಮಾರಿ ಕೋವಿಡ್ ಸೋಂಕು ಹರಡುವಿಕೆಯ ಹೆಚ್ಚಳ ಹಾಗೂ ನಿಫಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮೈಸೂರು- ಕೇರಳ ನಡುವೆ ವಾಹನಗಳ ಸಂಚಾರವನ್ನು ಅಕ್ಟೋಬರ್ ಅಂತ್ಯದವರೆಗೆ ನಿರ್ಬಂಧಿಸಲಾಗಿದೆ. ಇದುವರೆಗೆ ಎರಡು ರಾಜ್ಯಗಳ ನಡುವೆ ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.ಆದರೆ, ಸೆ.7ರಿಂದ ತುರ್ತು ಚಿಕಿತ್ಸಾ ವಾಹನ ಹಾಗೂ ಗೂಡ್ಸ್ ವಾಹನ ಹೊರತುಪಡಿಸಿ, ಬೇರೆ ಎಲ್ಲ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ

ನಿಫಾ, ಕೊರೊನಾ ಆತಂಕ |ಅಕ್ಟೋಬರ್ ಕೊನೆವರೆಗೆ ಮೈಸೂರು-ಕೇರಳ ಓಡಾಟ ನಿಷೇಧ Read More »