Editor

ದಸರಾ ಬಳಿಕ ರಾಜ್ಯದಲ್ಲಿ 1ನೇ ತರಗತಿಯಿಂದಲೇ‌ ಶಾಲಾರಂಭ – ಸಚಿವ ಬಿ.ಸಿ ನಾಗೇಶ್

ಮಂಗಳೂರು : ರಾಜ್ಯದಲ್ಲಿ ಈಗಾಗಲೇ 6 ರಿಂದ 12ನೇ ತರಗತಿ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಆದರೆ 1 ರಿಂದ 5ನೇ ತರಗತಿಗಳು ಆರಂಭಗೊಂಡಿಲ್ಲ. ಈ ಶಾಲೆಗಳು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಮುಹೂರ್ತವನ್ನು ರಾಜ್ಯ ಸರ್ಕಾರ ಫಿಕ್ಸ್ ಮಾಡಿದೆ. ದಸರಾ ಬಳಿಕ 1 ರಿಂದ 5ನೇ ತರಗತಿಗಳನ್ನು ಆರಂಭಿಸೋದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಈ ಕುರಿತಂತೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲ. ಇದೀಗ

ದಸರಾ ಬಳಿಕ ರಾಜ್ಯದಲ್ಲಿ 1ನೇ ತರಗತಿಯಿಂದಲೇ‌ ಶಾಲಾರಂಭ – ಸಚಿವ ಬಿ.ಸಿ ನಾಗೇಶ್ Read More »

ವೇಣೂರು ಕೊಲೆ ಪ್ರಕರಣ| ಆರೋಪಿಯನ್ನು ಬಂಧಿಸಿದ ಪೊಲೀಸರು| ಕುಡಿತದ ಮತ್ತು ತಂದಿದು ಪ್ರಾಣಕ್ಕೆ ಕುತ್ತು|

ಬೆಳ್ತಂಗಡಿ: ಜೊತೆಯಾಗಿ ಕುಡಿದು ಗಲಾಟೆ ಮಾಡಿ, ನಂತರ ವ್ಯಕ್ತಿಯನ್ನು ಮಾವನ ಮಗನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ ಎಂದು ಗುರುತಿಸಲಾಗಿದೆ. ಸುಮಾರು 60 ವರ್ಷ ಪ್ರಾಯದ ಇವರನ್ನು ಕಡಿದು ಕೊಲೆ ಮಾಡಲಾಗಿದೆ. ಸಂಜೀವ ಶೆಟ್ಟಿ ಇವರು ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಇವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಇಂದು ಬೆಳಗ್ಗೆ ತಡವಾದರೂ ಸಂಜೀವ ಅವರು ಏಕೆ ಬಂದಿಲ್ಲ ಎಂದು

ವೇಣೂರು ಕೊಲೆ ಪ್ರಕರಣ| ಆರೋಪಿಯನ್ನು ಬಂಧಿಸಿದ ಪೊಲೀಸರು| ಕುಡಿತದ ಮತ್ತು ತಂದಿದು ಪ್ರಾಣಕ್ಕೆ ಕುತ್ತು| Read More »

ಈದ್ ಸಾಮೂಹಿಕ ‌ಮೆರವಣಿಗೆಗೆ‌ ನಿಷೇಧ| ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ ರಾಜ್ಯ‌ ಸರ್ಕಾರ|

ಬೆಂಗಳೂರು- ವಾಲ್ಮೀಕಿ ಜಯಂತಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಲು ಸೂಚಿಸಿರುವ ರಾಜ್ಯ ಸರ್ಕಾರ ಸಾಮೂಹಿಕ ಮೆರವಣಿಗೆ ನಡೆಸದಂತೆ ನಿಷೇಧಿಸಿದೆ. ಅ.20ರಂದು ನಡೆಯುವ ವಾಲ್ಮೀಕಿ ಜಯಂತಿ ಮತ್ತು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕಂದಾಯ ಇಲಾಖೆ ಹೊರಡಿಸಿದ್ದು, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿ, ಎಸ್‍ಪಿ, ಬಿಬಿಎಂಪಿ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಹಬ್ಬದ ಅಂಗವಾಗಿ ನಡೆಯುವ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ನೂರು ಜನಕ್ಕಿಂತ ಹೆಚ್ಚು ಮಂದಿ

ಈದ್ ಸಾಮೂಹಿಕ ‌ಮೆರವಣಿಗೆಗೆ‌ ನಿಷೇಧ| ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ ರಾಜ್ಯ‌ ಸರ್ಕಾರ| Read More »

ವ್ಯಕ್ತಿಯನ್ನು ಕಡಿದು ಕೊಲೆಗೈದ ದುಷ್ಕರ್ಮಿಗಳು| ವೇಣೂರಿನಲ್ಲಿ ನಡೆಯಿತು ಬರ್ಬರ ಕೃತ್ಯ|

ಬೆಳ್ತಂಗಡಿ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ(60) ಎಂದು ಗುರುತಿಸಲಾಗಿದೆ. ಸಂಜೀವ ಶೆಟ್ಟಿ ಇವರು ಇನ್ನೊಂದು ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಇವರನ್ನು ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಬೆಳಗ್ಗೆ ಕಾದು ಕುಳಿತರೂ ಬರದ ಕಾರಣ ಏಕೆ ಬಂದಿಲ್ಲ ಎಂದು ಅವರ ಮನೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವೇಣೂರು ಠಾಣಾ ವ್ಯಾಪ್ತಿಯಲ್ಲಿ

ವ್ಯಕ್ತಿಯನ್ನು ಕಡಿದು ಕೊಲೆಗೈದ ದುಷ್ಕರ್ಮಿಗಳು| ವೇಣೂರಿನಲ್ಲಿ ನಡೆಯಿತು ಬರ್ಬರ ಕೃತ್ಯ| Read More »

ಪ್ರಧಾನಿ ಮೋದಿ ಉಡುಗೊರೆಗಳ ಇ- ಹರಾಜು| ಕೋಟಿ ದಾಟಿದ ನೀರಜ್ ಚೋಪ್ರಾರ ಜಾವೆಲಿನ್

ನವದೆಹಲಿ: ಕಳೆದ ಸೆಪ್ಟೆಂಬರ್ 17ರಂದು ಆರಂಭವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ – ಹರಾಜಿಗೆ ಅಕ್ಟೋಬರ್ 7ರಂದು ತೆರೆ ಬಿದ್ದಿದೆ. ಈ ಹರಾಜಿನಲ್ಲಿ ಸರ್ದಾರ್ ಪಟೇಲ್ ಅವರ ಶಿಲ್ಪಕಲೆಗೆ ಅತಿಹೆಚ್ಚು ಬಿಡ್‌ಗಳು ನಡೆದಿವೆ ಮತ್ತು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಅತಿ ದೊಡ್ಡ ಮೊತ್ತಕ್ಕೆ ಹರಾಜಾಗಿದೆ. ಸರ್ದಾರ್ ಪಟೇಲ್ ಶಿಲ್ಪಕಲೆಯು 140 ಬಿಡ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ – ಹರಾಜಿನಲ್ಲಿ ಅತಿ

ಪ್ರಧಾನಿ ಮೋದಿ ಉಡುಗೊರೆಗಳ ಇ- ಹರಾಜು| ಕೋಟಿ ದಾಟಿದ ನೀರಜ್ ಚೋಪ್ರಾರ ಜಾವೆಲಿನ್ Read More »

‘ಟಾರ್ಗೆಟ್ ಹಿಂದೂಸ್’ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಹಿಂದೂ ವಿರೋಧಿ ಪೋಸ್ಟಿಂಗ್| ಮತ್ತೆ ಬಾಲ ಬಿಚ್ಚಿದ ಕಿಡಿಗೇಡಿಗಳು

ಮಂಗಳೂರು: ಚೈತ್ರಾ ಕುಂದಾಪುರ ಹಾಗೂ ತುಳುವರ ಆರಾಧ್ಯ ದೈವ ಕೊರಗಜ್ಜನನ್ನು ತೀರಾ ತುಚ್ಚ ರೀತಿಯಲ್ಲಿ, ಅಶ್ಲೀಲವಾಗಿ ನಿಂದಿಸುವ ಮೂಲಕ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಅವಮಾನ ಮಾಡಲಾಗಿದ್ದ ಪೇಜ್ ನಿಷ್ಕ್ರಿಯಗೊಂಡ ಬೆನ್ನಲ್ಲೇ ಮತ್ತೊಂದು ಪೇಜ್ ನಲ್ಲಿ ಹಿಂದೂ ವಿರೋಧಿ ಪೋಸ್ಟಿಂಗ್ ಮಾಡಲಾಗಿದೆ. ಕಿಡಿಗೇಡಿಗಳು ಮತ್ತದೇ ಚಾಳಿ‌ ಮುಂದುವರೆಸಿದ್ದು, ಈ ಹೊಲಸು ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಟಾರ್ಗೆಟ್ ಹಿಂದೂಸ್’ ಎಂಬ ಪ್ರೊಫೈಲ್ ಫೋಟೋ ಇಟ್ಟುtarget-hindus’ ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಖಾತೆ

‘ಟಾರ್ಗೆಟ್ ಹಿಂದೂಸ್’ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಹಿಂದೂ ವಿರೋಧಿ ಪೋಸ್ಟಿಂಗ್| ಮತ್ತೆ ಬಾಲ ಬಿಚ್ಚಿದ ಕಿಡಿಗೇಡಿಗಳು Read More »

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ | ಬೆಳ್ಳಿಗೆದ್ದ ಅಂಶು ಮಲಿಕ್

ಓಸ್ಲೊ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಯುವ ಕುಸ್ತಿಪಟುಗಳು ಅಮೋಘ ಸಾಧನೆ ಮೆರೆದಿದ್ದಾರೆ.ನಾರ್ವೆಯ ಓಸ್ಲೋದಲ್ಲಿ ಗುರುವಾರ ರಾತ್ರಿ ನಡೆದ ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಮಲಿಕ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೆ ಅಂಶು ಮಲಿಕ್ ಪಾತ್ರರಾಗಿದ್ದಾರೆ. ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಅಂಶು,

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ | ಬೆಳ್ಳಿಗೆದ್ದ ಅಂಶು ಮಲಿಕ್ Read More »

ಮೂತ್ರ ವಿಸರ್ಜನೆ ವೇಳೆ‌ ಸಿಡಿಯಿತು‌ ಕಿಸೆಯಲ್ಲಿದ್ದ ಲೋಡೆಡ್ ಪಿಸ್ತೂಲ್| ಮುಂದೆ…?

ನ್ಯೂಯಾರ್ಕ್​: ಇಲ್ಲಿನ ಟೈಮ್ಸ್​ ಸ್ಕ್ವೇರ್​ ಸಬ್​ವೇ ಸ್ಟೇಷನ್​ ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ಕಿಸೆಯಲ್ಲಿದ್ದ ಪಿಸ್ತೂಲ್​ನಿಂದ ಗುಂಡು ಹಾರಿದ ಘಟನೆ ನಡೆದಿದೆ. ದೊಡ್ಡದಾಗಿ ಶಬ್ದವಾಗುತ್ತಿದ್ದಂತೆಯೇ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ವ್ಯಕ್ತಿ ತನ್ನ ಪ್ಯಾಂಟ್ ಕಿಸೆಯಲ್ಲಿ ಲೋಡ್ ಆಗಿದ್ದ ಪಿಸ್ತೂಲನ್ನು ಇಟ್ಟುಕೊಂಡಿದ್ದನು, ಮೂತ್ರ ವಿಸರ್ಜಿಸುತ್ತಿರುವಾಗ ಆಕಸ್ಮಿಕವಾಗಿ ಪಿಸ್ತೂಲ್​ನಿಂದ ಗುಂಡು ಹಾರಿದೆ. ಇದರ ಪರಿಣಾಮ ಆತನ ಕಾಲಿಗೆ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡೈಲಿ ನ್ಯೂಸ್ ಪ್ರಕಾರ, 39

ಮೂತ್ರ ವಿಸರ್ಜನೆ ವೇಳೆ‌ ಸಿಡಿಯಿತು‌ ಕಿಸೆಯಲ್ಲಿದ್ದ ಲೋಡೆಡ್ ಪಿಸ್ತೂಲ್| ಮುಂದೆ…? Read More »

ರೈತರಿಗೆ ಗುಡ್ ನ್ಯೂಸ್| ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಸರ್ಕಾರದ ಚಿಂತನೆ|

ಮೈಸೂರು : ರಾಜ್ಯದ ರೈತ ಸಮುದಾಯಕ್ಕೆ ಸಿಎಂ ಸಿಹಿಸುದ್ದಿ ನೀಡಿದ್ದು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಾರಿ ಮಾಡಿದ್ದ ಯಶಸ್ವಿನಿ ಯೋಜನೆಯ ಮರು ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಮೈಸೂರು ದಸರಾ ಉದ್ಘಾಟನೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರೈತರಿಗೆ ಅನಾರೋಗ್ಯ ಉಂಟಾದರೆ ಸುಲಭವಾಗಿ, ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳು ನೀಡುವ ಉದ್ದೇಶದಿಂದ ಯಶಸ್ವಿ ಯೋಜನೆಯನ್ನು ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಇದೀಗ ಈ ಯೋಜನೆಯನ್ನು ಮರು ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಸಿಎಂ

ರೈತರಿಗೆ ಗುಡ್ ನ್ಯೂಸ್| ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಸರ್ಕಾರದ ಚಿಂತನೆ| Read More »

ಮಂಗಳೂರು ಶೂಟೌಟ್ ಪ್ರಕರಣ| ಮಗನ ಸಾವು ದೃಢೀಕರಿಸಿದ ವೈದ್ಯರು| ಅಪ್ಪ ಜೈಲು ಪಾಲು

ಮಂಗಳೂರು: ನಗರದ ಮೋರ್ಗನ್ ಗೇಟ್ಸ್ ನ ಶೂಟೌಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಸುಧೀಂದ್ರ ಪ್ರಭು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಗರದ ಮೋರ್ಗನ್ಸ್ ಗೇಟ್ ನ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಅವರು ಅ.5ರಂದು ಕೆಲಸದಾಳುಗಳ ಮೇಲೆ ಕುಪಿತಗೊಂಡು ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರು. ಆದರೆ ಇದು ತಪ್ಪಿ ಅವರ ಮಗ ಸುಧೀಂದ್ರ ಪ್ರಭುವಿಗೆ ತಗುಲಿತ್ತು. ತಕ್ಷಣ ಆತನನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಆ ಬಳಿಕ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು.

ಮಂಗಳೂರು ಶೂಟೌಟ್ ಪ್ರಕರಣ| ಮಗನ ಸಾವು ದೃಢೀಕರಿಸಿದ ವೈದ್ಯರು| ಅಪ್ಪ ಜೈಲು ಪಾಲು Read More »