Editor

ಕರಾವಳಿಯಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್| ಹೈ ಅಲರ್ಟ್ ಘೋಷಣೆ

ಮಂಗಳೂರು: ರಾಜ್ಯದ ಕರಾವಳಿ ಮಲೆನಾಡು ಭಾಗದಲ್ಲಿ ಹೈ ಅಲರ್ಟ್‌ ನಡುವೆಯೇ ಮತ್ತೆ ಸ್ಯಾಟಲೈಟ್‌ ಫೋನ್‌ ರಿಂಗಣಿಸಿದೆ. ಈ ಭಾಗದ ಐದಕ್ಕೂ ಹೆಚ್ಚು ಕಡೆ ಸ್ಯಾಟಲೈಟ್‌ ಫೋನ್‌ ಕರೆ ಸಕ್ರಿಯ ಆಗಿರುವುದು ಬೆಳಕಿಗೆ ಬಂದಿದೆ. ದೇಶಾದ್ಯಂತ ಉಗ್ರರ ಆತಂಕ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ವಿಭಾಗ ಈಗಾಗಲೇ ಸ್ಯಾಟಲೈಟ್‌ ಫೋನ್‌ ಕುರಿತು ಎಚ್ಚರಿಕೆ ನೀಡಿದ್ದು, ಹೈಅಲರ್ಟ್‌ ಆಗಿರುವಂತೆ ಸೂಚಿಸಿದೆ. ರಾಜ್ಯ ಕರಾವಳಿ ಹಾಗೂ ಮಲೆನಾಡುಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಮೊದಲೇ

ಕರಾವಳಿಯಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್| ಹೈ ಅಲರ್ಟ್ ಘೋಷಣೆ Read More »

ನಶೆಯ ನಂಟು| ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ‌ ಮನೆಗೆ ಸಿಬಿಐ ದಾಳಿ

ಮುಂಬೈ: ಬಾಲಿವುಡ್ ನ ಮಾದಕ ಲೋಕದ ನಂಟಿನ ಗಂಟು ದಿನಕ್ಕೊಂದು ರೀತಿಯಲ್ಲಿ ಬಿಚ್ಚಿಕೊಳ್ಳುತ್ತಿದೆ. ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ ಬಂಧನ ಪ್ರಕರಣದ ನಡುವೆ ಇದೀಗ ಎನ್ ಸಿಬಿ ಅಧಿಕಾರಿಗಳು ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮುಂಬೈ ನಗರದ ಬಾಂದ್ರಾ ಪ್ರದೇಶದಲ್ಲಿರುವ ನಿರ್ಮಾಪಕ ಇಮ್ತಿಯಾಜ್ ಖತ್ರಿ ಅವರ ನಿವಾಸ ಮತ್ತು ಕಚೇರಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪರಿಶೀಲನೆ ನಡೆಸುತ್ತಿದೆ. ಬಿಲ್ಡರ್ ಒಬ್ಬರ ಪುತ್ರನಾಗಿರುವ ಇಮ್ತಿಯಾಜ್ ಖತ್ರಿ ಬಾಲಿವುಡ್ ನೊಂದಿಗೆ ನಂಟು ಹೊಂದಿದ್ದಾರೆ.

ನಶೆಯ ನಂಟು| ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ‌ ಮನೆಗೆ ಸಿಬಿಐ ದಾಳಿ Read More »

ಯಮಕಿಂಕರನಾದ ರಸ್ತೆ ಗುಂಡಿ| ಟಿಪ್ಪರ್ ಹರಿದು ಮಹಿಳೆ‌ ಸಾವು

ಬೆಂಗಳೂರು: ರಸ್ತೆ ಗುಂಡಿಗಳಿಂದ ರಾಜಧಾನಿ ಬೆಂಗಳೂರು ಮಂದಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ, ಅಲ್ಲಲ್ಲಿ ಗುಂಡಿಗಳು ಮಾರಕವಾಗಿದ್ದು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಖುದ್ದು ಹೈಕೋರ್ಟೇ ಆದೇಶಿಸಿದ್ದರೂ ಬಿಬಿಎಂಪಿ ಎಚ್ಚೆತ್ತಿಲ್ಲ. ಇದೀಗ ಈ ಗುಂಡಿಗೆ ಅಮಾಯಕ ಮಹಿಳೆಯೊಬ್ಬರು‌ ಬಲಿಯಾಗಿದ್ದಾರೆ. ರಸ್ತೆಗುಂಡಿಯ‌ನ್ನು ತಪ್ಪಿಸಲು ಪಕ್ಕಕ್ಕೆ ಸರಿದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಈ ದುರಂತ ನಡೆದಿದೆ. ಮೊನ್ನೆ

ಯಮಕಿಂಕರನಾದ ರಸ್ತೆ ಗುಂಡಿ| ಟಿಪ್ಪರ್ ಹರಿದು ಮಹಿಳೆ‌ ಸಾವು Read More »

ಹೈದರಾಬಾದ್ ನಲ್ಲಿ ಅಪಘಾತ| ಬಂಟ್ವಾಳ ಮೂಲದ ಯುವಕ ಸಾವು

ಬಂಟ್ವಾಳ : ಹೈದರಾಬಾದ್ ನಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಮೃತರನ್ನು ಇಲ್ಲಿನ ಕುಚ್ಚುಗುಡ್ಡೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಪ್ರಶಾಂತ್ ಶೆಟ್ಟಿ(32) ಎಂದು ಗುರುತಿಸಲಾಗಿದೆ. ಪ್ರಶಾಂತ್ ಶೆಟ್ಟಿ ಚಲಾಯಿಸುತ್ತಿದ್ದ ಬೈಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿ‌ಯಾಗಿ ಈ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈದರಾಬಾದ್ ನಲ್ಲಿ ಅಪಘಾತ| ಬಂಟ್ವಾಳ ಮೂಲದ ಯುವಕ ಸಾವು Read More »

ಅಫ್ಘಾನಿಸ್ತಾನ ಮಸೀದಿಯಲ್ಲಿ ಸಿಡಿದ ಆತ್ಮಹತ್ಯಾ ಬಾಂಬ್| 100 ಕ್ಕೂ ಹೆಚ್ಚು‌ ಮಂದಿ ಸಾವು

ಕಾಬೂಲ್: ಅಫ್ಗಾನಿಸ್ತಾನದ ಕುಂದುಜ್‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ದಾಳಿಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಅಮೆರಿಕ ಪಡೆಗಳು ಅಫ್ಗಾನಿಸ್ತಾನ ತೊರೆದ ಬಳಿಕ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ಎನ್ನಲಾಗಿದೆ. ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಫ್ಗಾನಿಸ್ತಾನದಲ್ಲಿ ಈ ಹಿಂದೆ ಶಿಯಾ ಸಮುದಾಯದವರನ್ನು ಗುರಿಯಾಗಿಸಿ

ಅಫ್ಘಾನಿಸ್ತಾನ ಮಸೀದಿಯಲ್ಲಿ ಸಿಡಿದ ಆತ್ಮಹತ್ಯಾ ಬಾಂಬ್| 100 ಕ್ಕೂ ಹೆಚ್ಚು‌ ಮಂದಿ ಸಾವು Read More »

ಬಂಟ್ವಾಳ: ಮಹಿಳೆಯಿಂದ ಲಂಚ ಸ್ವೀಕಾರ| ಸರ್ವೇಯರ್ ಬಂಧನ

ಬಂಟ್ವಾಳ: ಭೂಮಿಯ ಗಡಿ ಗುರುತಿಸಲು ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಸಿಬ್ಬಂದಿ ಬಂಟ್ವಾಳ ಸರ್ವೇ ವಿಭಾಗದ ಸರ್ವೇಯರ್‌ನನ್ನು ಬಂಧಿಸಿದ್ದಾರೆ. ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿರುವ ಸರ್ವೇಕ್ಷಣಾ ಇಲಾಖೆಯಲ್ಲಿ ಸರ್ವೇಯರ್ ಸುರೇಶ್ ಬಂಧಿತ ಆರೋಪಿ. ಈತ ಮಹಿಳೆಯಿಂದ 6,000 ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಲ್ಲಿಯ ಪ್ರೇಮಾ ಸರಿತಾ ಪಿಂಟೋ ಎಂಬವರು ತನ್ನ ಭೂಮಿಯಲ್ಲಿ ಗಡಿ ಸಮೀಕ್ಷೆಗಾಗಿ ಅರ್ಜಿ ಸಲ್ಲಿಸಿದ್ದರು. ಸರ್ವೇಯರ್ ಆಕೆಯಿಂದ 7,000 ಲಂಚಕ್ಕೆ

ಬಂಟ್ವಾಳ: ಮಹಿಳೆಯಿಂದ ಲಂಚ ಸ್ವೀಕಾರ| ಸರ್ವೇಯರ್ ಬಂಧನ Read More »

ದಸರಾ ಜಂಬೂಸವಾರಿ|ಮದವೇರಿದ ವಿಕ್ರಮನಿಗೆ ಗೇಟ್‌ಪಾಸ್..!

ಮಂಡ್ಯ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಂದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ವಿಕ್ರಮನಿಗೆ ಮದವೇರಿದ ಕಾರಣ ಈ ಬಾರಿಯ ಮೆರವಣಿಗೆಯಿಂದ ಗೇಟ್‌ಪಾಸ್ ಆಗಿದ್ದಾನೆ.ಮೈಸೂರಿಗೆ ದಸರಾ ನೋಡಲು ಬರುವ ಜನರಿಗೆ ಅಂಬಾರಿ ಹೊರುವ ಆನೆಗಳಾದ ಅರ್ಜುನನ್ನು ಮತ್ತು ವಿಕ್ರಮನನ್ನು ಕಂಡರೆ ಅಚ್ಚು-ಮೆಚ್ಚು. ಅದಲ್ಲದೆ ಕಳೆದ ಐದು ವರ್ಷಗಳಿಂದ ಸತತವಾಗಿ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಜರುಗುವ ಖಾಸಗಿ ದಬಾರ‍್ನ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ

ದಸರಾ ಜಂಬೂಸವಾರಿ|ಮದವೇರಿದ ವಿಕ್ರಮನಿಗೆ ಗೇಟ್‌ಪಾಸ್..! Read More »

ಉಡುಪಿ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ವೈದ್ಯರಿಗೆ 2 ವರ್ಷ ಜೈಲು ಶಿಕ್ಷೆ

ಉಡುಪಿ: ಕುಕ್ಕಿಕಟ್ಟೆ ಸಮೀಪ ಡಯಾನಾ ಟಾಕೀಸು ಬಳಿ 2017 ರ ಮಾ. 16 ರಂದು ನಡೆದಿದ್ದ ಅಪಘಾತದಲ್ಲಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಉಡುಪಿಯ ಪ್ರಸಿದ್ಧ ಆಯುರ್ವೇದ ವೈದ್ಯ, ಅಲೆವೂರು ನಿವಾಸಿ ಲಕ್ಷ್ಮೀಪ್ರಸಾದ್ ಭಟ್ ಪ್ರಕರಣದ ಆಫರಾದಿ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಕೈಗೆತ್ತಿಕೊಂಡ ಉಡುಪಿ ಜಿಲ್ಲಾ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದ

ಉಡುಪಿ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ವೈದ್ಯರಿಗೆ 2 ವರ್ಷ ಜೈಲು ಶಿಕ್ಷೆ Read More »

ಶಿವಮೊಗ್ಗ ಡಿ ಸಿ ಕಚೇರಿ ಸಿಬ್ಬಂದಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆ ಪ್ರಕರಣ| ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ

ಬೆಳ್ತಂಗಡಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶಿವಮೊಗ್ಗ ವ್ಯಕ್ತಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಗಿರಿರಾಜ್ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಮೇಲಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚೀಟಿಯಲ್ಲಿ ಬರೆದಿಟ್ಟು ಸೆ.28 ರಂದು ನಾಪತ್ತೆಯಾಗಿದ್ದರು. ಚೀಟಿ ನೋಡಿ ಆಘಾತಗೊಂಡಿದ್ದ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಒಂದು ವಾರದಿಂದ ನಾಪತ್ತೆಯಾಗಿದ್ದರಿಂದ ಗಿರಿರಾಜ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.ಇದೀಗ 10 ದಿನಗಳ ಬಳಿಕ ಗಿರಿರಾಜ್ ಅಸ್ವಸ್ಥ ಸ್ಥಿತಿಯಲ್ಲಿ

ಶಿವಮೊಗ್ಗ ಡಿ ಸಿ ಕಚೇರಿ ಸಿಬ್ಬಂದಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆ ಪ್ರಕರಣ| ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ Read More »

ಹೆತ್ತ ಮಕ್ಕಳಿಗೆ ‌ವಿಷಕೊಟ್ಟು ತಾನೂ ವಿಷ ಕುಡಿದ ತಂದೆ| ಜ್ಯೂಸ್ ನಲ್ಲಿ ಬೆರೆಸಿ ಪ್ರಾಣ ತೆಗೆಯುವ ಸಂಚಿಗೆ ಪ್ರೇರಣೆಯಾಯ್ತು ಹೆಂಡದ ಅಮಲು

ಕಡಬ:. ತಾನು ವಿಷ ಕುಡಿದು ತನ್ನ ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕಡಬ ತಾಲೂಕಿನ ಬಲ್ಯದಿಂದ ವರದಿಯಾಗಿದೆ ಮೂಲತಃ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ವಿಶ್ವನಾಥ ಎಂಬವರು ಕಡಬ ತಾಲೂಕಿನ ಬಲ್ಯದಿಂದ ಮದುವೆಯಾಗಿದ್ದು, ಕುಡಿತದ ಚಟ ಹೊಂದಿದ್ದ ವಿಶ್ವನಾಥರು ಕುಡಿದು ಬಂದು ಪತ್ನಿಯ ಜೊತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿಯು ತವರು ಮನೆಗೆ ಬಂದಿದ್ದು, ಇಲ್ಲಿಗೆ ಬಂದಿದ್ದ ವಿಶ್ವನಾಥ್ ತನ್ನ ಸಣ್ಣ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದ್ದಾನೆ ಎನ್ನಲಾಗಿದೆ. ಓರ್ವ ಮಗ

ಹೆತ್ತ ಮಕ್ಕಳಿಗೆ ‌ವಿಷಕೊಟ್ಟು ತಾನೂ ವಿಷ ಕುಡಿದ ತಂದೆ| ಜ್ಯೂಸ್ ನಲ್ಲಿ ಬೆರೆಸಿ ಪ್ರಾಣ ತೆಗೆಯುವ ಸಂಚಿಗೆ ಪ್ರೇರಣೆಯಾಯ್ತು ಹೆಂಡದ ಅಮಲು Read More »