Editor

ಪುತ್ತೂರು: ಲಾರಿಗೆ ಬೈಕ್ ಅಪಘಾತ : ಸವಾರ ಮೃತ್ಯು

ಪುತ್ತೂರು: ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಅ.10 ರಂದು ಬೆಳಗ್ಗೆ ನಡೆದಿದೆ. ಮೃತಪಟ್ಟವರನ್ನು ಗೋಲ್ಡನ್ ಬೇಕರಿಯ ಮಾಲೀಕ ಅಝೀಝ್ ಎಂದು ಗುರುತಿಸಲಾಗಿದೆ. ಅವರು ಭಾನುವಾರ ಬೆಳಗ್ಗೆ ತನ್ನ ಅಂಗಡಿಗೆ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಲಾರಿಗೆ ಬೈಕ್ ಅಪಘಾತ : ಸವಾರ ಮೃತ್ಯು Read More »

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರಕ್ಕೂ ಮುನ್ನ ನಡೆದಿತ್ತು ಪ್ಲ್ಯಾನ್| ಫೇಸ್ಬುಕ್ ಪರಿಚಯ ತಂದ ಎಡವಟ್ಟು| ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಬಂಟ್ವಾಳ: ನಗರ ಠಾಣೆಯಲ್ಲಿ ಶನಿವಾರ ದಾಖಲಾದ ಅಪ್ರಾಪ್ತ ಬಾಲಕಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ, ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ರೋಚಕ ತಿರುವು ಪಡೆದುಕೊಂಡಿದೆ. ಅಮ್ಟಾಡಿಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವುದು ಮಂಗಳೂರಿನ ಖಾಸಗಿ ಲಾಡ್ಜ್ ನಲ್ಲಿ ಎನ್ನುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ಕಾಪು ನಿವಾಸಿ ಕೆ. ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರಕ್ಕೂ ಮುನ್ನ ನಡೆದಿತ್ತು ಪ್ಲ್ಯಾನ್| ಫೇಸ್ಬುಕ್ ಪರಿಚಯ ತಂದ ಎಡವಟ್ಟು| ಕಂಪ್ಲೀಟ್ ಸ್ಟೋರಿ ಇಲ್ಲಿದೆ. Read More »

ಅ.13ರ ವರೆಗೂ ಭಾರೀ ಮಳೆ ಮುನ್ಸೂಚನೆ| ಹಲವು ಜಿಲ್ಲೆಗಳಲ್ಲಿ ಅಲರ್ಟ್| ದಸರಾ ಹಬ್ಬಕ್ಕೆ ಮಳೆ ಕಾಟ|

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೂರು ದಿನ ಭಾರಿ ಮಳೆಯಾಗಲಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಲಬುರ್ಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಅ.13ರ ವರೆಗೂ ಭಾರೀ ಮಳೆ ಮುನ್ಸೂಚನೆ| ಹಲವು ಜಿಲ್ಲೆಗಳಲ್ಲಿ ಅಲರ್ಟ್| ದಸರಾ ಹಬ್ಬಕ್ಕೆ ಮಳೆ ಕಾಟ| Read More »

ರಾಷ್ಟ್ರೀಯ ‌ಮೋಟಾರ್‌ಸೈಕಲ್ ರೇಸಿಂಗ್‌| ರಾಹಿಲ್ ಶೆಟ್ಟಿಗೆ ಜಯ

ಚೆನ್ನೈ: ಹೈದರಾಬಾದಿನ ರಾಹಿಲ್ ಶೆಟ್ಟಿ ಮತ್ತು ಕೆ.ವೈ. ಅಹಮದ್ ಇಲ್ಲಿ ನಡೆಯುತ್ತಿರುವ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನ ಪ್ರೀಮಿಯರ್ ಪ್ರೊ ಸ್ಟಾಕ್ ವಿಭಾಗದಲ್ಲಿ ಜಯಿಸಿದರು. ಶನಿವಾರ ಶ್ರೀಪೆರಂಬುದೂರು ಬಳಿಯ ಎಂಎಂಆರ್‌ಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ 23 ವರ್ಷದ ರಾಹಿಲ್ ಪ್ರೊ ಸ್ಟಾಕ್‌ 301-400 ಸಿಸಿ ವಿಭಾಗದಲ್ಲಿ ಆರ್‌ಎಸಿಆರ್ ಕ್ಯಾಸ್ಟ್ರಾಲ್ ಪವರ್ ರೇಸಿಂಗ್‌ನ ರಜಿನಿ ಕೃಷ್ಣನ್ ಅವರನ್ನು ಮೀರಿಸಿದರು. ಗಸ್ಟೊ ರೇಸಿಂಗ್‌ನ ರಾಹಿಲ್ ಅವರು ದೀರ್ಘ ಕಾಲದ ವಿಶ್ರಾಂತಿಯ ನಂತರ ರೇಸಿಂಗ್ ಮರಳಿದ್ದಾರೆ. ಟಿವಿಎಸ್‌

ರಾಷ್ಟ್ರೀಯ ‌ಮೋಟಾರ್‌ಸೈಕಲ್ ರೇಸಿಂಗ್‌| ರಾಹಿಲ್ ಶೆಟ್ಟಿಗೆ ಜಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಗೃಹ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತವೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಬರಬಹುದು.ಭೂಮಿಯನ್ನು ಮಾರುವ ಮುಂಚೆ ಸರಿಯಾಗಿ ಅದರ ಬಗ್ಗೆ ತಿಳಿಯಿರಿ. ಅನಿರೀಕ್ಷಿತ ವ್ಯಕ್ತಿಯಿಂದ ಪಾಲುದಾರಿಕೆ ವ್ಯವಹಾರದ ಬಗ್ಗೆ ಆಹ್ವಾನ ಬರಬಹುದು. ಪೂರ್ಣ ವಿಷಯ ತಿಳಿದು ನಂತರ ತೀರ್ಮಾನಿಸಿರಿ. ವಿದ್ಯಾರ್ಥಿಗಳು ವಿಶೇಷ ಅಧ್ಯಯನಕ್ಕಾಗಿ ಆಯ್ಕೆಯಾಗುವ ಸಂದರ್ಭವಿದೆ. ಹಂತ ಹಂತವಾಗಿ ಹಣದ ಸಮಸ್ಯೆಗೆ ದಾರಿ ಕಂಡುಕೊಳ್ಳುವಿರಿ. ಸಂಬಂಧಿಕರೊಡನೆ ಕೆಲವು ವಿಷಯಗಳನ್ನು ಸಮಾಲೋಚನೆ ಮಾಡುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ನಿಮ್ಮ ಆತ್ಮೀಯ ಬಂಧುಗಳು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ವಿಧಿವಶ

ಬೆಂಗಳೂರು : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಹಿರಿಯ ನಟ ಸತ್ಯಜಿತ್ (72) ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯಜಿತ್ ಅವರ ಆರೋಗ್ಯದಲ್ಲಿ ಮತ್ತಷ್ಟು ಗಂಭೀರವಾಗಿತ್ತು. ಗುರುವಾರ ಡಯಾಲಿಸೀಸ್ ಮಾಡುವಾಗ ಹಾರ್ಟ್ ರೇಟ್ ಕಡಿಮೆಯಾಗಿದೆ. ಇಂಟರ್ನಲ್ ಬ್ಲೀಡಿಂಗ್ ಕೂಡ ಆಗುತ್ತಿದ್ದು, ಮತ್ತೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 2 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು

ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ವಿಧಿವಶ Read More »

ಕಡಬ: ಹೊಳೆಯಲ್ಲಿ ತೇಲಿಬಂತು ಮಾನವನ ತಲೆಬುರುಡೆ| ಕಾರಣ ನಿಗೂಢ..!

ಕಡಬ: ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕೊಳೆತ ತಲೆಬುರುಡೆಯೊಂದು ಹೊಳೆಯೊಂದರಲ್ಲಿ ತೇಲಿಬಂದಿರುವ ಘಟನೆ ತಾಲೂಕಿನ ಪೆರಾಬೆ ಗ್ರಾಮದ ಅನ್ನಡ್ಕ ಎಂಬಲ್ಲಿ ನಡೆದಿದೆ. ಅನ್ನಡ್ಕದಲ್ಲಿರುವ ತೋಡಿನಲ್ಲಿ ಪತ್ತೆಯಾಗಿರುವ ಕೊಳೆತ ತಲೆ ಬುರುಡೆ,ಕಾಡಿನಿಂದ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಈ ಕುರುತಂತೆ ತನಿಖೆ ನಡೆಸುತ್ತಿದ್ದಾರೆ. ಯಾವೊಂದೂ ಸುಳಿವು ಇಲ್ಲದೇ ಪತ್ತೆಯಾಗಿರುವ ತಲೆಬುರುಡೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಕಡಬ: ಹೊಳೆಯಲ್ಲಿ ತೇಲಿಬಂತು ಮಾನವನ ತಲೆಬುರುಡೆ| ಕಾರಣ ನಿಗೂಢ..! Read More »

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ| ಇಬ್ಬರು ಅರೆಸ್ಟ್, ಮುಂದುವರಿದ ತನಿಖೆ

ಬಂಟ್ವಾಳ : ಅಪ್ರಾಪ್ತ ವಯಸ್ಸಿನ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಖಚಿತಪಡಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮಾಡಿ ಎಂಬಲ್ಲಿ ಈ ಪ್ರಕರಣ ನಡೆದಿದ್ದು, ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆಂದು ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಶಾಲೆಗೆಂದು ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಬಂದ ಪರಿಚಿತನೋರ್ವ ಸೇರಿದಂತೆ ಆರೋಪಿಗಳು ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ದೂರಲಾಗಿದೆ.

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ| ಇಬ್ಬರು ಅರೆಸ್ಟ್, ಮುಂದುವರಿದ ತನಿಖೆ Read More »

ಫೇಸ್ಬುಕ್, ವಾಟ್ಸಪ್ ಸರ್ವರ್ ಡೌನ್| ಲಾಭ ಪಡೆದುಕೊಂಡ ಪೋರ್ನ್ ಸೈಟ್ ಗಳು| ಅಶ್ಲೀಲ ತಾಣಗಳಿಗೆ ಭೇಟಿ‌ ನೀಡಿದವರೆಷ್ಟು ಮಂದಿ ಗೊತ್ತಾ?

ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣ ಜನರ ಜೀವನದ ಒಂದು ಅಂಗವಾಗಿದೆ. ಒಂದು ಗಳಿಕೆ ಕೂಡ ಸಾಮಾಜಿಕ ಜಾಲತಾಣದಿಂದ ದೂರವಿರದ ಜನರಿದ್ದಾರೆ. ಆದ್ರೆ ಸೋಮವಾರ, ಫೇಸ್ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಕೈಕೊಟ್ಟಿತ್ತು. ಕೆಲ ಗಂಟೆಗಳ ಕಾಲ ಸೇವೆ ನಿಧಾನವಾಗಿತ್ತು. ಫೇಸ್ಬುಕ್ ಒಡೆತನದ ಈ ಸಾಮಾಜಿಕ ಜಾಲತಾಣದ ವೇಗ ಕಡಿಮೆಯಾಗಿದ್ದು, ಪೋರ್ನ್ ಸೈಟ್ ಗೆ ಲಾಭ ನೀಡಿದೆ. ಪೋನ್ ಸೈಟ್ ಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಪೋರ್ಟಲ್ ಪೋರ್ನ್‌ಹಬ್‌ ನ ಟ್ರಾಫಿಕ್ ಶೇಕಡಾ 10.5 ರಷ್ಟು ಏರಿಕೆಯಾಗಿದೆ. ಸಾಮಾಜಿಕ ಜಾಲತಾಣದ ವೇಗ

ಫೇಸ್ಬುಕ್, ವಾಟ್ಸಪ್ ಸರ್ವರ್ ಡೌನ್| ಲಾಭ ಪಡೆದುಕೊಂಡ ಪೋರ್ನ್ ಸೈಟ್ ಗಳು| ಅಶ್ಲೀಲ ತಾಣಗಳಿಗೆ ಭೇಟಿ‌ ನೀಡಿದವರೆಷ್ಟು ಮಂದಿ ಗೊತ್ತಾ? Read More »

ಅಮಲು ಪದಾರ್ಥ ನೀಡಿ ಅಪ್ರಾಪ್ತೆಯ ಅತ್ಯಾಚಾರ| ಬಂಟ್ವಾಳದಲ್ಲಿ ನಡೆಯಿತು ಗ್ಯಾಂಗ್ ರೇಪ್|

ಬಂಟ್ವಾಳ: ಇಲ್ಲಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅಪ್ರಾಪ್ತೆ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್ ರೇಪ್ ಕೃತ್ಯ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಬಂಟ್ವಾಳದ ಎಸ್ ವಿ ಎಸ್ ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಗೆ ಅಮಲು ಹತ್ತಿಸುವ ಚಾಕಲೇಟ್ ನೀಡಿ ಅಪಹರಿಸಸಲಾಗಿದೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಟಾಡಿಯ ರೂಂ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ

ಅಮಲು ಪದಾರ್ಥ ನೀಡಿ ಅಪ್ರಾಪ್ತೆಯ ಅತ್ಯಾಚಾರ| ಬಂಟ್ವಾಳದಲ್ಲಿ ನಡೆಯಿತು ಗ್ಯಾಂಗ್ ರೇಪ್| Read More »