Editor

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಮುನ್ಸೂಚನೆ| ಕರಾವಳಿ ಜಿಲ್ಲೆಗಳಿಗೆ ಆರೆಂಟ್ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 29 ರವರೆಗೆ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಇರಲಿದ್ದು, ಜೂನ್ 29 ರಿಂದ ಜುಲೈ 1 ರವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ಹಾಗೂ ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ […]

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಮುನ್ಸೂಚನೆ| ಕರಾವಳಿ ಜಿಲ್ಲೆಗಳಿಗೆ ಆರೆಂಟ್ ಅಲರ್ಟ್ Read More »

ಅಂತ್ಯೋದಯ ಪಡಿತರದಾರರಿಗೆ ಶಾಕ್ ನೀಡಿದ ಕೇಂದ್ರ| ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿ ನೀಡಲು ಚಿಂತನೆ

ಸಮಗ್ರ ನ್ಯೂಸ್: ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದೆ. ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ದಾರರಿಗೆ ನೀಡಲಾಗುತ್ತಿರುವ ರೇಷನ್ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಇನ್ನು ಮುಂದೆ ಕುಟುಂಬದ ಆಧಾರದ ಬದಲಿಗೆ, ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ಅಥವಾ ಗೋಧಿ ನೀಡುವ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದುವರೆಗೆ ಅಂತ್ಯೋದಯ ಅನ್ನ ಯೋಜನೆಯಡಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದರೂ ತಿಂಗಳಿಗೆ 35 ಕೆಜಿ ಉಚಿತ ರೇಷನ್ ನೀಡಲಾಗುತ್ತಿತ್ತು. ಆದರೆ ಹೊಸ

ಅಂತ್ಯೋದಯ ಪಡಿತರದಾರರಿಗೆ ಶಾಕ್ ನೀಡಿದ ಕೇಂದ್ರ| ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿ ನೀಡಲು ಚಿಂತನೆ Read More »

ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್| ಎಲ್ಲಾ ನಿರ್ಬಂಧ ತೆರವುಗೊಳಿಸಿದ ಕೇಂದ್ರ

ಸಮಗ್ರ ನ್ಯೂಸ್: ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ನೆಮ್ಮದಿ ನೀಡುವ ಕ್ರಮವಾಗಿ, ಕೇಂದ್ರ ಸರ್ಕಾರ ಎಲ್‌ಪಿಜಿ ಪೂರೈಕೆಯ ಮೇಲಿದ್ದ ಎಲ್ಲಾ ರೀತಿಯ ನಿರ್ಬಂಧಗಳನ್ನು ತಕ್ಷಣದಿಂದಲೇ ಹಿಂತೆಗೆದುಕೊಂಡಿದೆ. ಗೃಹೇತರ ಪ್ಯಾಕೇಜ್ಡ್ ಎಲ್‌ಪಿಜಿ ಪೂರೈಕೆಗೆ ವಿಧಿಸಲಾಗಿದ್ದ ವಲಯವಾರು ಮಿತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದಾಗಿ ಸರ್ಕಾರ ಘೋಷಿಸಿದೆ. ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಎಲ್‌ಪಿಜಿ (LPG) ಗ್ಯಾಸ್ ಪೂರೈಕೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತಕ್ಷಣದಿಂದಲೇ ತೆರವುಗೊಳಿಸಿದ್ದು, ಇದರಿಂದ ಹೋಟೆಲ್‌ಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯ

ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್| ಎಲ್ಲಾ ನಿರ್ಬಂಧ ತೆರವುಗೊಳಿಸಿದ ಕೇಂದ್ರ Read More »

ಮಂಗಳೂರು: ವಿಮಾನ ನಿಲ್ದಾಣ ‘ಉಬರ್’ ಟ್ಯಾಕ್ಸಿ ಸೇವೆ ಬಂದ್

ಸಮಗ್ರ ನ್ಯೂಸ್: ಹಲವು ದಿನಗಳಿಂದ ಚಾಲಕರಿಗೆ ಅನ್ಯಾಯ ಮಾಡುತ್ತಿರುವ ಉಬರ್ ಕಂಪನಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಆನ್‌ಲೈನ್‌ ಟ್ಯಾಕ್ಸಿ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದು, ವಿಮಾನ ನಿಲ್ದಾಣದಲ್ಲಿ ಉಬ‌ರ್ ಟ್ಯಾಕ್ಸಿ ಸೇವೆಯನ್ನು ಬಂದ್‌ ಮಾಡಿದ್ದಾರೆ. ಚಾಲಕರ ಹಲವು ಬೇಡಿಕೆಗಳು, ಸಮಸ್ಯೆಗಳು ಹಾಗೂ ನ್ಯಾಯಯುತ ಹಕ್ಕುಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ, ಉಬರ್ ಕಂಪನಿಯಿಂದ ಯಾವುದೇ ಸಮರ್ಪಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ತಿಳಿಸಿದೆ.ಚಾಲಕರ ಆದಾಯದ

ಮಂಗಳೂರು: ವಿಮಾನ ನಿಲ್ದಾಣ ‘ಉಬರ್’ ಟ್ಯಾಕ್ಸಿ ಸೇವೆ ಬಂದ್ Read More »

“ಕುಡ್ಲದ ಜನಕುಲು ಪೊಲೀಸ್ ಕೆಲ್ಸೊಗು ಸೇರ್ಲೆ”| ತುಳು ಗೊತ್ತಿದ್ರೆ ಪ್ಲಸ್ ಪಾಯಿಂಟ್| ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಂದೇಶ

ಸಮಗ್ರ ನ್ಯೂಸ್: “ಎನ್ನ ವೃತ್ತಿ ಜೀವನಡ್‌ ಕುಡ್ಲ ಎನ್ನ ಇಷ್ಟದ ಊರು. ಎನ್ನ ಸೇವಾವಧಿಡ್‌ ಎಚ್ಚ ಸರ್ವಿಸ್‌ ಮಲ್ತಿನ ಊರುಲ ಉಂದುವೇ. ಕುಡ್ಲದ ಜನಕುಲು ಮಸ್ತ್‌ ಎಡ್ಡೆಂತಿನಕುಲು, ಬೊಕ್ಕ ಮಸ್ತ್‌ ಬುದ್ಧಿವಂತೆರ್‌ ಪೊಲೀಸ್‌ ಇಲಾಖೆಡ್‌ ಕರ್ತವ್ಯ ಮುಲ್ಪುನ ಗೌರವದ ಕೆಲಸ. ಕುಡ್ಲದಕುಲು ಪೊಲೀಸ್‌ ಡಿಪಾರ್ಟ್‌ಮೆಂಟ್‌ ಸೇರ್ಲೆ, ಅವು ಬೊಕ್ಕಲಾತ್‌ ಇಲಾಖೆಗ್‌ ಶಕ್ತಿ ಆಪುಂಡು.” ಮಂಗಳೂರಿನ ಬಗ್ಗೆ ಹಾಗೂ ಇಲ್ಲಿನ ಜನರ ಬಗ್ಗೆ ಮೆಚ್ಚುಗೆಯ ಮಾತುಗಳೊಂದಿಗೆ ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಅವರು ಯುವ ಸಮುದಾಯ

“ಕುಡ್ಲದ ಜನಕುಲು ಪೊಲೀಸ್ ಕೆಲ್ಸೊಗು ಸೇರ್ಲೆ”| ತುಳು ಗೊತ್ತಿದ್ರೆ ಪ್ಲಸ್ ಪಾಯಿಂಟ್| ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಂದೇಶ Read More »

ಚುರುಕುಗೊಂಡ ಮುಂಗಾರು| ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕರಾವಳಿ ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇತ್ತ ಬೆಂಗಳೂರು ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು, ಮಿಂಚು  (Weather) ಹಾಗೂ ಬಲವಾದ ಬಿರುಗಾಳಿ ಸಹಿತ ಲಘುವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ

ಚುರುಕುಗೊಂಡ ಮುಂಗಾರು| ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ Read More »

ಜನರ ಸಮಸ್ಯೆ ಆಲಿಸಲು ಹೊಸ ಇಲಾಖೆ ಘೋಷಿಸಿದ ಸಿಎಂ| ‘ಪ್ರಜಾಸೇವೆ’ಯಲ್ಲಿ ಸಿಗಲಿದೆ ಪರಿಹಾರ

ಸಮಗ್ರ ನ್ಯೂಸ್: ರಾಜ್ಯದ ಜನರು ತಮ್ಮ ಸಮಸ್ಯೆಗಳು, ಬೇಡಿಕೆಗಳು ಹಾಗೂ ದೂರುಗಳನ್ನು ಪರಿಹರಿಸಿಕೊಳ್ಳಲು ಇನ್ನು ಮುಂದೆ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಬೇಕಾಗಿಲ್ಲ. ಜನರ ಅಹವಾಲುಗಳಿಗೆ ತ್ವರಿತ ಸ್ಪಂದನೆ ನೀಡುವ ಉದ್ದೇಶದಿಂದ ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಜೊತೆಗೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ವಿಶೇಷ ಸಚಿವರನ್ನೂ ನೇಮಿಸಲಾಗುವುದು ಎಂದು ತಿಳಿಸಿದ್ದಾರೆ. ದು. ಸಚಿವ ಸಂಪುಟ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬಂದು

ಜನರ ಸಮಸ್ಯೆ ಆಲಿಸಲು ಹೊಸ ಇಲಾಖೆ ಘೋಷಿಸಿದ ಸಿಎಂ| ‘ಪ್ರಜಾಸೇವೆ’ಯಲ್ಲಿ ಸಿಗಲಿದೆ ಪರಿಹಾರ Read More »

ಉಡುಪಿ: ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿಗೆ ಜೂ.30 ಕೊನೆದಿನ| ದ.ಕ ಜಿಲ್ಲೆಗೆ ಇನ್ನೂ ಬಂದಿಲ್ಲ ಆದೇಶ

ಸಮಗ್ರ ನ್ಯೂಸ್: ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾ ಗುವ ಬೆಳೆ ನಷ್ಟಕ್ಕೆ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮ ದಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ರೈತರ ಪಹಣಿಯಲ್ಲಿ ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯಡಿ ನೊಂದಣಿ ಮಾಡಿಸಲು ಜೂನ್ 30 ಕೊನೆಯ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು

ಉಡುಪಿ: ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿಗೆ ಜೂ.30 ಕೊನೆದಿನ| ದ.ಕ ಜಿಲ್ಲೆಗೆ ಇನ್ನೂ ಬಂದಿಲ್ಲ ಆದೇಶ Read More »

ಭರ್ಜರಿ ಕುಸಿತ ಕಂಡ ಬಂಗಾರದ ದರ| ಆಭರಣ ಪ್ರಿಯರಿಗೆ ದಿಲ್ ಖುಷ್

ಸಮಗ್ರ ನ್ಯೂಸ್: ಸತತವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಜೂನ್‌ 16 ರಿಂದ ಆರಂಭವಾದ ಚಿನ್ನದ ಬೆಲೆಯ ಕುಸಿತ ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದೇ ದಿನಕ್ಕೆ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 3650 ರೂ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ 10 ಸಾವಿರ ರೂ ಕಡಿತಗೊಂಡಿದೆ. ಈಕ್ವಿಟಿ ಮಾರುಕಟ್ಟೆ ಹೆಚ್ಚು ಲಾಭದಾಯಕ ಎಂದೆನಿಸಿದ್ದರಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಕುಸಿದಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ. ಜೂನ್ 19 2026 ಶುಕ್ರವಾರದಂದು , 24 ಕ್ಯಾರೆಟ್ 1

ಭರ್ಜರಿ ಕುಸಿತ ಕಂಡ ಬಂಗಾರದ ದರ| ಆಭರಣ ಪ್ರಿಯರಿಗೆ ದಿಲ್ ಖುಷ್ Read More »

ಮೊದಲ ಟಾಸ್ಕ್ ನಲ್ಲೇ ಪಾಸ್ ಆದ ಸಿಎಂ ಡಿಕೆಶಿ| ಪರಿಷತ್ ಚುನಾವಣೆಯಲ್ಲಿ ಐದು ಸ್ಥಾನ ಗೆದ್ದ ಕಾಂಗ್ರೆಸ್| 2 ಸ್ಥಾನಕ್ಕೆ ತೃಪ್ತಿಪಟ್ಟ ಬಿಜೆಪಿ; ಸೊನ್ನೆ ಸುತ್ತಿದ ಜೆಡಿಎಸ್

ಸಮಗ್ರ ನ್ಯೂಸ್: ಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ. ಮೈತ್ರಿ ಶಾಸಕರಿಂದ ಅಡ್ಡ ಮತದಾನ ಮಾಡಿಸಿ ಚೆಕ್ ಮೇಟ್ ನೀಡಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಸ್ಥಳೀಯಲು ಯತ್ನಿಸಿದ ದೋಸ್ತಿಗೆ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ ಶಾಸಕರಿಂದ ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ನಡೆದಿದೆ. ಕಾಂಗ್ರೆಸ್ ಪರ ಬಿಜೆಪಿ, ಜೆಡಿಎಸ್ ನ 11 ಶಾಸಕರು ಮತ ಹಾಕಿದ್ದಾರೆ. ಮೈತ್ರಿ ಶಾಸಕರಿಂದ ಅಡ್ಡ ಮತದಾನ ಹಾಕಿಸಿ ಸಿಎಂ ಚೆಕ್ ಮೇಟ್ ಇಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ 11 ಶಾಸಕರು

ಮೊದಲ ಟಾಸ್ಕ್ ನಲ್ಲೇ ಪಾಸ್ ಆದ ಸಿಎಂ ಡಿಕೆಶಿ| ಪರಿಷತ್ ಚುನಾವಣೆಯಲ್ಲಿ ಐದು ಸ್ಥಾನ ಗೆದ್ದ ಕಾಂಗ್ರೆಸ್| 2 ಸ್ಥಾನಕ್ಕೆ ತೃಪ್ತಿಪಟ್ಟ ಬಿಜೆಪಿ; ಸೊನ್ನೆ ಸುತ್ತಿದ ಜೆಡಿಎಸ್ Read More »