ಸಂಘದ ಲೆಕ್ಕ ಕೇಳಿದರೆ ಹಿಂದೂ ವಿರೋಧಿಯೇ? ಶ್ರೀರಾಮನೇ ಲೆಕ್ಕ ಕೊಡುವಾಗ ಇವರಿಗೇನು ಕಷ್ಟ? ಪ್ರಿಯಾಂಕ್ ಖರ್ಗೆ ಖಡಕ್ ಪ್ರಶ್ನೆ
ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಲೆಕ್ಕ ಕೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನಾನು ಕೇಳುತ್ತಿರುವುದು ಸಂಘದ ಲೆಕ್ಕವೇ ಹೊರತು ಹಿಂದೂ ಧರ್ಮದ ಲೆಕ್ಕವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಾರದರ್ಶಕತೆ ಬಯಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಇಲ್ಲಿ ಸಫಾಯಿ ಕರ್ಮಚಾರಿಗಳಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಪ್ರತಿಯೊಬ್ಬರಿಗೂ ಲೆಕ್ಕವಿದೆ. ಪ್ರತಿದಿನ ನೂರಾರು ಶಾಖೆಗಳನ್ನು ನಡೆಸುವ, […]








