Editor

120 ಕೋಟಿ‌ ವೆಚ್ಚದ ರಸ್ತೆ ಕಾಮಗಾರಿ ಅವ್ಯವಹಾರ ಬಯಲಿಗೆಳೆದ ಪತ್ರಕರ್ತ ಹೆಣವಾಗಿ ಪತ್ತೆ

ಸಮಗ್ರ ನ್ಯೂಸ್: 120 ಕೋಟಿ ರಸ್ತೆ ಕಾಮಗಾರಿ ವೇಳೆ ನಡೆಸಲಾಗಿದ್ದ ಅಕ್ರಮವನ್ನ ಬಯಲಿಗೆಳೆದಿದ್ದ ಪತ್ರಕರ್ತನನ್ನ ಕೊಲೆ ಮಾಡಲಾಗಿದೆ. ಮುಕೇಶ್ ಚಂದ್ರಾಕರ್ ಎಂಬಾತನ ಶವ ಪತ್ತೆಯಾಗಿದ್ದು , ಕಂಟ್ರಾಕ್ಟರ್ ಮಾಫಿಯಾಗೆ ಜರ್ನಲಿಸ್ಟ್ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚಂಡೀಘಡ ಬಿಜಾಪುರ ಜಿಲ್ಲೆಯ ಬಾಸ್ಟರ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಯುವ ಪತ್ರಕರ್ತ ಮುಕೇಶ್ ಚಂದ್ರಾಕರ್ ಸ್ಥಳೀಯ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು . ಅಲ್ಲದೆ ಇತ್ತೀಚೆಗೆ ಕಂಟ್ರಾಕ್ಟರ್ ಸುರೇಶ್ ಚಂದ್ರಾಕರ್ ಎಂಬುವರ ಮೇಲೆ ವರದಿ ಮಾಡಿ ರಸ್ತೆ ಕಾಮಗಾರಿಯಲ್ಲಿ ನಡೆದಿರುವ 120 ಕೋಟಿ

120 ಕೋಟಿ‌ ವೆಚ್ಚದ ರಸ್ತೆ ಕಾಮಗಾರಿ ಅವ್ಯವಹಾರ ಬಯಲಿಗೆಳೆದ ಪತ್ರಕರ್ತ ಹೆಣವಾಗಿ ಪತ್ತೆ Read More »

ವಿಟ್ಲ: ಸಿನಿಮೀಯ ಶೈಲಿಯಲ್ಲಿ 30 ಲಕ್ಷ ಲೂಟಿಗೈದ‌ ನಕಲಿ‌ ಇಡಿ ಅಧಿಕಾರಿಗಳು

ಸಮಗ್ರ‌ ನ್ಯೂಸ್: ಬಾಲಿವುಡ್ ಸಿನೆಮಾ ಸ್ಪೆಷಲ್ 26 ಮಾದರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ತಂಡವೊಂದು ಬರೋಬ್ಬರಿ 30 ಲಕ್ಷ ಲೂಟಿ ಮಾಡಿದೆ. ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ಸಿಂಗಾರಿ ಬೀಡಿ ಸಂಸ್ಥೆ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಶುಕ್ರವಾರ ಅವರ ಮನೆಗೆ ತಮಿಳುನಾಡು ಮೂಲದ ಕಾರಲ್ಲಿ ಆಗಮಿಸಿದ ತಂಡವೊಂದು ದಿಡೀರ್ ದಾಳಿ ನಡೆಸಿ ಇಡಿ ಅಧಿಕಾರಿಗಳು

ವಿಟ್ಲ: ಸಿನಿಮೀಯ ಶೈಲಿಯಲ್ಲಿ 30 ಲಕ್ಷ ಲೂಟಿಗೈದ‌ ನಕಲಿ‌ ಇಡಿ ಅಧಿಕಾರಿಗಳು Read More »

ಸುರತ್ಕಲ್: ಅಭಿವೃದ್ಧಿಯಿಂದ ಮರೀಚಿಕೆಯಾಗಿರುವ ಮಧ್ಯ ಗ್ರಾಮದ ರಸ್ತೆ

ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆಗೆ ಹೊಂದಿ ಕೊಂಡಂತಿರುವ ಮಧ್ಯ ಗ್ರಾಮದ ಪ್ರಮುಖ ರಸ್ತೆಗೆ ಕಾಯಕಲ್ಪ ದೊರಕಿಲ್ಲ. ಪರಿಣಾಮ ವಾಹನ ಸಂಚಾರ ಬಲುಕಷ್ಟಕರವಾಗಿದೆ. ಸುರತ್ಕಲ್‌ ಮಧ್ಯ, ಪೆಡ್ಡಿಯಂಗಡಿ, ಸೂರಿಂಜೆ, ಕಾಟಿಪಳ್ಳ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬರಬೇಕಿರುವ ಕಾರಣ ಚೇಳ್ಯಾರು ಪಂಚಾಯತ್‌ ಸತತ ಬೇಡಿಕೆ ಮಂಡಿಸುತ್ತಲೇ ಇದ್ದರೂ ಅನುದಾನ ವಿಳಂಬವಾಗುತ್ತಿದೆ. ಇದೀಗ ಮಧ್ಯ ರಸ್ತೆಯು ಹೊಂಡಗಳಿಂದ ತುಂಬಿದ್ದು, ವಾಹನ ಓಡಾಡುವುದೇ ಕಷ್ಟಸಾಧ್ಯ ವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಹೋಗುವುದು

ಸುರತ್ಕಲ್: ಅಭಿವೃದ್ಧಿಯಿಂದ ಮರೀಚಿಕೆಯಾಗಿರುವ ಮಧ್ಯ ಗ್ರಾಮದ ರಸ್ತೆ Read More »

ವಾಹನ ಸವಾರರಿಗೆ ಗುಡ್ ನ್ಯೂಸ್| ಶೀಘ್ರದಲ್ಲೇ ಪೆಟ್ರೋಲ್ ದರದಲ್ಲಿ ₹20 ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಪೆಟ್ರೋಲ್ ಬೆಲೆಯಲ್ಲಿ ಗಮನಾರ್ಹ ಕಡಿತವನ್ನು ನಿರೀಕ್ಷಿಸಲಾಗಿದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ದೇಶಾದ್ಯಂತ ಪೆಟ್ರೋಲ್ ಬೆಲೆಯನ್ನ ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ದೇಶಾದ್ಯಂತ ಲಭ್ಯವಿರುತ್ತದೆ, ಇದು ಗಣನೀಯ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಈ ಪೆಟ್ರೋಲ್ ಶೀಘ್ರದಲ್ಲೇ ಪೆಟ್ರೋಲ್ ಪಂಪ್’ಗಳಲ್ಲಿ ಲಭ್ಯವಾಗಲಿದೆ. ಇದರ ಬೆಲೆ 20 ರೂಪಾಯಿ ಕಡಿಮೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಈಗಾಗಲೇ ಎಥೆನಾಲ್ ಚಾಲಿತ ಕಾರನ್ನ ಬಿಡುಗಡೆ ಮಾಡಿದೆ. ಇದರ ಇಂಧನ ಬೆಲೆ ಲೀಟರ್ಗೆ ಕೇವಲ 25

ವಾಹನ ಸವಾರರಿಗೆ ಗುಡ್ ನ್ಯೂಸ್| ಶೀಘ್ರದಲ್ಲೇ ಪೆಟ್ರೋಲ್ ದರದಲ್ಲಿ ₹20 ಇಳಿಕೆ ಸಾಧ್ಯತೆ Read More »

ತುಮಕೂರು: ದೂರು ನೀಡಲು ಠಾಣೆಗೆ ಬಂದ ಮಹಿಳೆಯ ಜೊತೆ ಸರಸವಾಡಿದ ಡಿವೈಎಸ್ಪಿ| ವಿಡಿಯೋ ವೈರಲ್ ಬೆನ್ನಲ್ಲೇ ಪೋಲಿ ಪೊಲೀಸ್ ನಾಪತ್ತೆ

ಸಮಗ್ರ ನ್ಯೂಸ್: ಜಮೀನು ವಿಚಾರಕ್ಕೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ಪೊಲೀಸ್ ಠಾಣೆಯಲ್ಲಿಯೇ ರಾಸಲೀಲೆ ನಡೆಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದಾಗಿ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯೊಂದಿಗೆ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ರಾಸಲೀಲೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಡಿವೈಎಸ್‌ಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಜಮೀನು ವ್ಯಾಜ್ಯದ ಬಗ್ಗೆ ಪಾವಗಡ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ

ತುಮಕೂರು: ದೂರು ನೀಡಲು ಠಾಣೆಗೆ ಬಂದ ಮಹಿಳೆಯ ಜೊತೆ ಸರಸವಾಡಿದ ಡಿವೈಎಸ್ಪಿ| ವಿಡಿಯೋ ವೈರಲ್ ಬೆನ್ನಲ್ಲೇ ಪೋಲಿ ಪೊಲೀಸ್ ನಾಪತ್ತೆ Read More »

ಕಡಬ: ಪ್ರೀತಿಸುವ ನಾಟಕವಾಡಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ; ಆರೋಪಿಯ ಬಂಧನ

ಸಮಗ್ರ ನ್ಯೂಸ್: ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಜತೆ ಪ್ರೀತಿಸುವ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್‌ ನಿವಾಸಿ ಪ್ರವೀಣ್‌ ಪೂಜಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಆತ ಬಾಲಕಿ ಜತೆಗೆ ಸುತ್ತಾಟ ನಡೆಸಿ ವಿಶ್ವಾಸ ಗಳಿಸಿ ಬಳಿಕ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಅದರ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಕೂಡಾ ಮಾಡುತ್ತಿದ್ದ. ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ.

ಕಡಬ: ಪ್ರೀತಿಸುವ ನಾಟಕವಾಡಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ; ಆರೋಪಿಯ ಬಂಧನ Read More »

ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಹೆಚ್ಚಿದ ಬೇಡಿಕೆ/ ಶೀಘ್ರದಲ್ಲೇ ಇತರ ಜಿಲ್ಲೆಗಳಿಗೂ ವಿಸ್ತರಣೆ

ಸಮಗ್ರ ನ್ಯೂಸ್‌: ಕೆಎಂಎಫ್ ಪರಿಚಯಿಸಿದ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೇವಲ ಮೂರು ದಿನದಲ್ಲಿ ಬರೋಬ್ಬರಿ 2250 ಮೆಟ್ರಿಕ್ ಟನ್ ಹಿಟ್ಟು ಮಾರಾಟವಾಗಿದೆ. ಸದ್ಯ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ದೋಸೆ ಹಿಟ್ಟಿನ ಮಾರಾಟಕ್ಕೆ ಸಖತ್ ಬೇಡಿಕೆ ಸೃಷ್ಟಿಯಾದ್ದು, ಶೀಘ್ರದಲ್ಲೇ ಇತರ ಜಿಲ್ಲೆಗಳಿಗೂ ದೋಸೆ ಹಿಟ್ಟಿನ ವ್ಯಾಪಾರ ವಿಸ್ತರಿಸಲು ಕೆಎಂಎಫ್ ಸಜ್ಜಾಗುತ್ತಿದೆ. ರಾಜಧಾನಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದ್ದಂತೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ದೋಸೆ-ಇಡ್ಲಿ ಹಿಟ್ಟಿನ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಇತ್ತ

ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಹೆಚ್ಚಿದ ಬೇಡಿಕೆ/ ಶೀಘ್ರದಲ್ಲೇ ಇತರ ಜಿಲ್ಲೆಗಳಿಗೂ ವಿಸ್ತರಣೆ Read More »

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯ/ ಆಮರಣಾಂತ ಉಪವಾಸ ಆರಂಭಿಸಿದ ಪ್ರಶಾಂತ್ ಕಿಶೋರ್

ಸಮಗ್ರ ನ್ಯೂಸ್‌: ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜನ್ ಸೂರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಗುರುವಾರ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ನಿತೀಶ್ ಕುಮಾರ್ ಸರ್ಕಾರಕ್ಕೆ ಪರೀಕ್ಷೆ ರದ್ದುಗೊಳಿಸುವಂತೆ 48 ಗಂಟೆಗಳ ಡೆಡ್ ಲೈನ್ ನೀಡಿದ ಮೂರು ದಿನಗಳ ನಂತರ, ರಾಜ್ಯದ ರಾಜಧಾನಿಯ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಶಾಂತ್ ಕಿಶೋರ್ ಇಂದಿನಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಡಿಸೆಂಬರ್ 13 ರಂದು ನಡೆದ ಪರೀಕ್ಷೆಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವುದು ನನ್ನ ಪ್ರಮಖ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯ/ ಆಮರಣಾಂತ ಉಪವಾಸ ಆರಂಭಿಸಿದ ಪ್ರಶಾಂತ್ ಕಿಶೋರ್ Read More »

ದಾಂಪತ್ಯ ಜೀವನಕ್ಕೆ ಕಾಲಿಟ್ಟ‌ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್

ಸಮಗ್ರ ನ್ಯೂಸ್: ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಂದು (ಜನವರಿ 2) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಮಾನ್ ಮಲಿಕ್ ಅವರು ಪ್ರಿಯತಮೆ ಆಶ್ನಾ ಶ್ರಾಫ್ ಜೊತೆ ಮದುವೆಆಗಿದ್ದಾರೆ. ಮದುವೆಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರ್ಮಾನ್ ಮಲಿಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿರುತ್ತಾರೆ. ತಮ್ಮ ಫ್ಯಾನ್ಸ್ ಜೊತೆ ಅವರು ಸಂಪರ್ಕದಲ್ಲಿ ಇರುತ್ತಾರೆ. ಆದರೆ ವೈಯಕ್ತಿಕ ಜೀವನದ ವಿಚಾರಗಳನ್ನು ಸಾಧ್ಯವಾದಷ್ಟು ಗೌಪ್ಯವಾಗಿ ಇಡುತ್ತಾರೆ. ಈಗ ಕೇವಲ

ದಾಂಪತ್ಯ ಜೀವನಕ್ಕೆ ಕಾಲಿಟ್ಟ‌ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ Read More »

ಧರ್ಮಸ್ಥಳ: ಮಲಿನಗೊಳ್ಳುತ್ತಿದ್ದಾಳೆ‌ ಜೀವನದಿ ನೇತ್ರಾವತಿ| ಈಕೆಯ ಉಪನದಿಯಲ್ಲಿ ಪತ್ತೆಯಾಯ್ತು ಗೋಮಾಂಸ ತ್ಯಾಜ್ಯ| ರುಂಡ, ಮುಂಡ ಕತ್ತರಿಸಿ‌ ಎಸೆದ ದುರುಳರು

ಸಮಗ್ರ ನ್ಯೂಸ್: ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದು ಮಲಿನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ದುಷ್ಕೃತ್ಯ ಎಸಗಲಾಗಿದೆ. ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಗೋ ಹತ್ಯೆಯ ನಂತರದ ತ್ಯಾಜ್ಯವನ್ನು ದುರುಳರು ಎಸೆದಿದ್ದಾರೆ. ಪಶ್ಚಿಮ ಘಟ್ಟದಿಂದ ಹರಿದು ಧರ್ಮಸ್ಥಳ ಬಳಿ ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ಗೋವಿನ ರುಂಡ,

ಧರ್ಮಸ್ಥಳ: ಮಲಿನಗೊಳ್ಳುತ್ತಿದ್ದಾಳೆ‌ ಜೀವನದಿ ನೇತ್ರಾವತಿ| ಈಕೆಯ ಉಪನದಿಯಲ್ಲಿ ಪತ್ತೆಯಾಯ್ತು ಗೋಮಾಂಸ ತ್ಯಾಜ್ಯ| ರುಂಡ, ಮುಂಡ ಕತ್ತರಿಸಿ‌ ಎಸೆದ ದುರುಳರು Read More »