ಕುಕ್ಕೆಯಲ್ಲಿಂದು ಪಂಚಮಿ ರಥೋತ್ಸವ ಸಂಭ್ರಮ| ನಾಳೆ ಬ್ರಹ್ಮರಥದಲ್ಲಿ ವಿರಾಜಿಸಲಿದ್ದಾನೆ ಸುಬ್ರಹ್ಮಣ್ಯ| ಭಕ್ತಿ ಪರಾಕಾಷ್ಠೆಯಲ್ಲಿ ಭಕ್ತಗಣ|
ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ದ ನಾಗಸನ್ನಿದಿ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಮಾರ್ಗಶಿರ ಶುದ್ದ ಪಂಚಮಿಯ ದಿನವಾದ ಇಂದು(ಡಿ.8)ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ. ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ. ರಾತ್ರಿ ಪಂಚಮಿ ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆಬೆಡಿ” ಪ್ರದರ್ಶಿತವಾಗಲಿದೆ. ನಾಳೆ (ಡಿ.9) ಪ್ರಾತಃಕಾಲ 6.58ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ವೈಭವದ ಚಂಪಾಷಷ್ಟಿ ಮಹಾರಥೋತ್ಸವ ನೆರವೇರಲಿದ್ದು,










