ಅಬ್ಬಬ್ಬಾ..! ಆತನ ಕಿಡ್ನಿಯಲ್ಲಿತ್ತು 156 ಕಿಡ್ನಿಕಲ್ಲು!| ಹುಬ್ಬಳ್ಳಿ ಮೂಲದ ವ್ಯಕ್ತಿಯ ಕೀಹೋಲ್ ಶಸ್ತ್ರಚಿಕಿತ್ಸೆ ಮಾಡಿ ಕಲ್ಲು ಹೊರತೆಗೆದ ವೈದ್ಯರು|
ಹೈದರಾಬಾದ್:ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರಿಗೆ ಕೀಹೋಲ್ ಶಸ್ತ್ರಚಿಕಿತ್ಸೆ ನಡೆಸಿ 156 ಕಿಡ್ನಿ ಕಲ್ಲುಗಳನ್ನು ಹೊರತೆಗೆದ ಅಪರೂಪದ ಪ್ರಕರಣ ವರದಿಯಾಗಿದೆ. ದೊಡ್ಡ ಶಸ್ತ್ರಚಿಕಿತ್ಸೆ ಬದಲಾಗಿ ಲ್ಯಾಪ್ರೊಸ್ಕೋಪಿ ಮತ್ತು ಎಂಡೋಸ್ಕೋಪಿ ಬಳಸಿ ವೈದ್ಯರು ಈ ದಾಖಲೆ ಸಂಖ್ಯೆಯ ಕಿಡ್ನಿ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಇದು ಈ ವಿಧಾನದ ಮೂಲಕ ಗರಿಷ್ಠ ಸಂಖ್ಯೆಯ ಕಿಡ್ನಿಕಲ್ಲುಗಳನ್ನು ಹೊರತೆಗೆದ ಪ್ರಕರಣ ಎನಿಸಿಕೊಂಡಿದೆ. ಈ ಶಸ್ತ್ರಚಿಕಿತ್ಸೆಗೆ ವೈದ್ಯರು ಸುಮಾರು 3 ಗಂಟೆ ಕಾಲ ತೆಗೆದುಕೊಂಡರು. ಹುಬ್ಬಳ್ಳಿ ಮೂಲದ ರೋಗಿ ಇದೀಗ ಚೇತರಿಸಿಕೊಂಡಿದ್ದು,










