Editor

ದೇವಸ್ಥಾನವನ್ನು ಉಳಿಸಲು ಹಿಂದೂ ಸಮಾಜ ಉಳಿಯಬೇಕು -ಕಲ್ಲಡ್ಕ ಭಟ್

ಸಮಗ್ರ ನ್ಯೂಸ್ ಡೆಸ್ಕ್: ದೇವಸ್ಥಾನವನ್ನು ಉಳಿಸಬೇಕಿದ್ದರೆ, ಹಿಂದು ಸಮಾಜ ಉಳಿಯಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಬಂಟ್ವಾಳದಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ಮಾತನಾಡಿದ ಅವರು, ಹಿಂದುಗಳು ನಾವೆಲ್ಲ ಒಂದು ಎಂದರಷ್ಟೇ ಇದು ಸಾಧ್ಯ. ನಾವು ಅಲ್ಪಸಂಖ್ಯಾತರಾದರೆ, ದೇವಸ್ಥಾನವನ್ನು ರಕ್ಷಿಸುವುದು ಯಾರು ಎಂದು ಪ್ರಶ್ನಿಸಿದರು. ಹಿಂದೂ ಸಮಾಜಕ್ಕೆ ಆಕ್ರಮಣಗಳು ಎಲ್ಲ ಕಡೆಯಿಂದ ನಡೆಯುತ್ತಿದೆ. ಅವುಗಳನ್ನು ಎದುರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು

ದೇವಸ್ಥಾನವನ್ನು ಉಳಿಸಲು ಹಿಂದೂ ಸಮಾಜ ಉಳಿಯಬೇಕು -ಕಲ್ಲಡ್ಕ ಭಟ್ Read More »

SSLC ಪಾಸಾದವರಿಗೆ ಈಸ್ಟ್​ ಕೋಸ್ಟ್​ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ

ಸಮಗ್ರ ನ್ಯೂಸ್ ಡೆಸ್ಕ್: ಈಸ್ಟ್​ ಕೋಸ್ಟ್​ ರೈಲ್ವೆ ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 756 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 7 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತು

SSLC ಪಾಸಾದವರಿಗೆ ಈಸ್ಟ್​ ಕೋಸ್ಟ್​ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ Read More »

ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ಮಾರ್ಚ್​ 3 ಅರ್ಜಿ ಸಲ್ಲಿಸಲು ಕೊನೆಯ ದಿನ

ಸಮಗ್ರ ನ್ಯೂಸ್ ಡೆಸ್ಕ್: ಕೇಂದ್ರ ಲೋಕ ಸೇವಾ ಆಯೋಗವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 33 ಅಸಿಸ್ಟೆಂಟ್ ಪ್ರೊಫೆಸರ್, ಸ್ಟೋರ್ ಆಫೀಸರ್, ಅಸಿಸ್ಟೆಂಟ್ ಮಿನರಲ್ ಎಕನಾಮಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮಾರ್ಚ್​ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ

ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ಮಾರ್ಚ್​ 3 ಅರ್ಜಿ ಸಲ್ಲಿಸಲು ಕೊನೆಯ ದಿನ Read More »

ನಾಯಿಗೆ ಇರುವ ನಿಷ್ಠೆ ಸಿ.ಎಂ.ಇಬ್ರಾಹಿಂಗೆ ಇಲ್ಲ| ಈತ ಬೆಳಗ್ಗೆ ಸಿದ್ದರಾಮಯ್ಯ ಅಂತಾನೆ, ಮಧ್ಯಾಹ್ನ ಯಡಿಯೂರಪ್ಪ ಅಂತಾನೆ| ವಿ.ಎಸ್ ಉಗ್ರಪ್ಪ ವಾಗ್ದಾಳಿ

ಸಮಗ್ರ ನ್ಯೂಸ್ ಡೆಸ್ಕ್: ಸಿ.ಎಂ.ಇಬ್ರಾಹಿಂ ನನ್ನ ಗಂಡಸುತನದ ಬಗ್ಗೆ ಪ್ರಶ್ನಿಸಿದ್ದಾರೆ. ನನ್ನ ಗಂಡಸುತನ ಏನು ಎಂಬುದು ಯಾರಿಗೆ ಗೊತ್ತಿದೆಯೋ ಅವರಿಗೆ ತಿಳಿದಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಸಿ.ಎಂ.ಇಬ್ರಾಹಿಂ ವಿರುದ್ದ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ನನ್ನನ್ನು ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ನಿಯತ್ತು, ನಿಷ್ಠೆ ನಿನಗೆ ಇಲ್ಲ. ನಿನಗೆ ಜನ್ಮ ಕೊಟ್ಟಿರುವ ಸಮುದಾಯದ ನಿಷ್ಠೆ ಸಹ ಇಲ್ಲ. ನಿನಗೆ ಪಕ್ಷಕ್ಕಾಗಲಿ, ಧರ್ಮಕ್ಕಾಗಲಿ ನಿಷ್ಠೆ ಇದೆಯಾ ಎಂದು ಉಗ್ರಪ್ಪ ಏಕವಚನದಲ್ಲಿಯೇ ಇಬ್ರಾಹಿಂ ಅವರಿಗೆ

ನಾಯಿಗೆ ಇರುವ ನಿಷ್ಠೆ ಸಿ.ಎಂ.ಇಬ್ರಾಹಿಂಗೆ ಇಲ್ಲ| ಈತ ಬೆಳಗ್ಗೆ ಸಿದ್ದರಾಮಯ್ಯ ಅಂತಾನೆ, ಮಧ್ಯಾಹ್ನ ಯಡಿಯೂರಪ್ಪ ಅಂತಾನೆ| ವಿ.ಎಸ್ ಉಗ್ರಪ್ಪ ವಾಗ್ದಾಳಿ Read More »

ಬುಧವಾರ(ಫೆ.16)ದಿಂದ ಕಾಲೇಜುಗಳು ಮತ್ತೆ ಆರಂಭ – ಸಚಿವ ಆರಗ ಜ್ಞಾನೇಂದ್ರ

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಮುಚ್ಚಲ್ಪಟ್ಟಿದ್ದ ಕಾಲೇಜುಗಳನ್ನು ಬುಧವಾರದಿಂದ ಮತ್ತೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮುಖ್ಯಮಂತ್ರಿಗಳ ಸಭೆ ಬಳಿಕ ಮಾತನಾಡಿದ ಅವರು ಹೈಕೋರ್ಟ್ ಆದೇಶದಂತೆ ಈಗಿರುವ ವಸ್ತ್ರ ಸಂಹಿತೆ ಆದೇಶ ಕಡ್ಡಾಯಗೊಳಿಸಿ ತರಗತಿಗಳನ್ನು ಪುನರಾರಂಭಗೊಳಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಶಾಲಾ ಕಾಲೇಜುಗಳ ಆವರಣದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹೈಸ್ಕೂಲ್ ವರೆಗಿನ ತರಗತಿಗಳು ಆರಂಭವಾಗಿದ್ದು, ಸುಸೂತ್ರವಾಗಿ ನಡೆಯುತ್ತಿವೆ.

ಬುಧವಾರ(ಫೆ.16)ದಿಂದ ಕಾಲೇಜುಗಳು ಮತ್ತೆ ಆರಂಭ – ಸಚಿವ ಆರಗ ಜ್ಞಾನೇಂದ್ರ Read More »

ಸ್ಯಾಂಡಲ್ ವುಡ್ ಹಿರಿಯ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ

ಸಮಗ್ರ ನ್ಯೂಸ್ ಡೆಸ್ಕ್: ಅನಾರೋಗ್ಯದಿಂದ ಬಳಲುತ್ತಿದ್ದ ಚಂದನವನದ ಹಿರಿಯ ನಟಿ ಭಾರ್ಗವಿ ನಾರಾಯಣ್ ಇದೀಗ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಹಾಗೂ ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಭಾರ್ಗವಿ ನಾರಾಯಣ್ ಪ್ರಸಿದ್ಧ ಟಿವಿ ಧಾರಾವಾಹಿಗಳಾದ ‘ಮಂಥನಾ’ ಮತ್ತು ‘ಮುಕ್ತಾ’ ಸೇರಿದಂತೆ ಕನ್ನಡದ ಅನೇಕ ನಾಟಕಗಳನ್ನು ನಟಿಸಿದ್ದಾರೆ. ಅವರು

ಸ್ಯಾಂಡಲ್ ವುಡ್ ಹಿರಿಯ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ Read More »

ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು – ಓರ್ವ ಯುವತಿ ದುರ್ಮರಣ

ಕಾರವಾರ: ದಾಂಡೇಲಿ ನಗರದ ಜೆ. ಎನ್. ಎಸ್ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮಾವನನ್ನು ಬೆಂಗಳೂರಿಗೆ ಬಿಡಲು ತನ್ನ ಅಕ್ಕನೊಂದಿಗೆ ಬಂದಿದ್ದ ಬಿಂದು ಗುಡಿ ಎಂಬ 24 ವರ್ಷದ ಯುವತಿ ಸಾವಿಗೀಡಾದ ನತದೃಷ್ಟೆ. ಬಸ್‌ ನಿಲ್ದಾಣದಿಂದ ವಾಪಾಸ್ ಬರುವಾಗ ರಸ್ತೆ ದಾಟಿ ಡಿವೈಡರ್ ಮೇಲೆ ಆ ನಾಲ್ವರೂ ಒಟ್ಟುಗೂಡಿ ನಿಂತಿದ್ದರು. ಏಕಾಏಕಿ ಬಂದ ಕಾರು ಆ ನಾಲ್ವರ ಮೇಲೆ ಹತ್ತಿ, ಡಿಕ್ಕಿ

ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು – ಓರ್ವ ಯುವತಿ ದುರ್ಮರಣ Read More »

ಬೆಂಗಳೂರು : ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ

ಬೆಂಗಳೂರು: ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾ ಹಿಜಬ್ ಧರಿಸಿಯೇ ಇಂದು ಕಲಾಪಕ್ಕೆ ಆಗಮಿಸಿದ್ದಾರೆ. ಈ ಹಿಂದೆ ಹಿಜಬ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿ, ಹಿಜಬ್ ಧರಿಸುವುದು ಮುಸ್ಲಿಂ ಮಹಿಳೆಯರ ಸಂಪ್ರದಾಯ, ಅದು ಹಕ್ಕಾಗಿದೆ. ನಾನು ಹಿಜಬ್ ಧರಿಸಿಯೇ ವಿಧಾನ ಸಭೆಗೆ ಹೋಗುತ್ತೇನೆ. ಧೈರ್ಯ ಇದ್ದರೇ ತಡೆಯಲಿ ಎಂದು ಶಾಸಕಿ ಸವಾಲೊಡ್ಡಿದ್ದರು. ಅದರಂತೆ ಇಂದು ಹಿಜಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದಿನ ಅಧಿವೇಶನಗಳಲ್ಲೂ ಹಿಜಬ್ ಧರಿಸಿಯೇ ಕಲಾಪದಲ್ಲಿ ಪಾಲ್ಗೊಂಡಿದ್ದರು. ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಬ್

ಬೆಂಗಳೂರು : ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ Read More »

ಸುರತ್ಕಲ್‌ ಟೋಲ್‌ಗೇಟ್‌ ಪ್ರತಿಭಟನೆ – ಆಪತ್ಬಾಂಧವ ಆಸೀಫ್ ಆರೋಗ್ಯದಲ್ಲಿ ಏರುಪೇರು

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಆಪತ್ಬಾಂಧವ ಆಸೀಫ್ ನಡೆಸುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಸ್ಥಳೀಯ ಆಡಳಿತದ ಗಮನ ಸೆಳೆಯುವ ಸಲುವಾಗಿ ಆಸಿಫ್ ತನ್ನ ದೇಹಕ್ಕೆ ಕಬ್ಬಿಣದ ಸರಪಳಿಯನ್ನು ಕಟ್ಟಿಕೊಂಡು ಫೆಬ್ರವರಿ 14 ರಂದು ಎರಡು ಗಂಟೆಗಳ ಕಾಲ ಕಂಬಕ್ಕೆ ಕಟ್ಟಿಕೊಂಡಿದ್ದಾರೆ. ಹಾಗಾಗಿ ಬಿಸಿಲಿನಿಂದಾಗಿ ಅವರ ಆರೋಗ್ಯ ಹದಗೆಟ್ಟಿದ್ದು, ಸುರತ್ಕಲ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರೂ ಆಸಿಫ್

ಸುರತ್ಕಲ್‌ ಟೋಲ್‌ಗೇಟ್‌ ಪ್ರತಿಭಟನೆ – ಆಪತ್ಬಾಂಧವ ಆಸೀಫ್ ಆರೋಗ್ಯದಲ್ಲಿ ಏರುಪೇರು Read More »

ಮಂಗಳೂರು: ಚೂರಿ ಇರಿತ ಪ್ರಕರಣ – ಐವರ ಬಂಧನ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಆರನೇ ಬ್ಲಾಕ್‌ನಲ್ಲಿ ಫೆಬ್ರವರಿ 1 ರಂದು ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಶರೋಜ್ ಚಾರು (24), ಮೊಹಮ್ಮದ್ ಮುಸ್ತಫಾ (22), ಅಬ್ದುಲ್ ಅಮೀನ್ (19), ಹಲ್ಲೆ ನಡೆಸಲು ಕಾರು ಒದಗಿಸಿದ ಸಿದ್ದಿಕ್ ಸಮದ್ (25) ಮತ್ತು ಮೊಹಮ್ಮದ್ ನೌಫಿಲ್ (18) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಫೆ.1ರ ರಾತ್ರಿ ತನ್ನ ಸ್ನೇಹಿತರಾದ ಅಬೂಬಕ್ಕರ್ ಮತ್ತು ಹಾರಿಸ್ ಜತೆ ಮಾತನಾಡುತ್ತಿದ್ದ

ಮಂಗಳೂರು: ಚೂರಿ ಇರಿತ ಪ್ರಕರಣ – ಐವರ ಬಂಧನ Read More »