ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ಸಂಘರ್ಷ – ಕಾಲೇಜುಗಳ ಮುಂದೆ ಹಿಜಾಬ್ ಮುಸ್ಲಿಂ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬೆಂಗಳೂರು: ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು ಇಂದು ಕೂಡ ಹಿಜಾಬ್ ಧರಿಸಿಯೇ ಕಾಲೇಜುಗಳಿಗೆ ಆಗಮಿಸಿದ್ದಾರೆ. ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿಗಳು ಪ್ರಾಂಶುಪಾಲರು, ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸಿರೋದು, ಗಲಾಟೆ ಮಾಡಿರೋ ಘಟನೆಗಳು ರಾಜ್ಯಾಧ್ಯಂತ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಇಂದು ಆರಂಭಗೊಂಡಂತ ಪಿಯು, ಪದವಿ ಕಾಲೇಜು ಮೊದಲ ದಿನವೇ ಹಿಜಾಬ್ ಸಂಘರ್ಷ ತಾರಕಕ್ಕೇರಿದೆ. ವಿಜಯಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿಗಳು, ತರಗತಿಗೂ









