Editor

ಡಬಲ್ ಆಯ್ತು ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ|ಕಾಂಗ್ರೆಸ್ ಧರಣಿ ಮಧ್ಯೆಯೇ ಬಿಲ್ ಪಾಸ್ |ಇಲ್ಲಿದೆ ಸಂಬಳದ ಮಾಹಿತಿ

ಸಮಗ್ರ ನ್ಯೂಸ್ ಡೆಸ್ಕ್: ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. 5 ದಿನ ಕಲಾಪ ವ್ಯರ್ಥ ಆಯಿತು. ಆದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಮಾತ್ರ ಹೆಚ್ಚಾಗಬೇಕು. ಇವತ್ತು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆಯೇ ಎರಡು ವಿಧೇಯಕಗಳು ಮಂಡನೆಯಾಗಿ ಅಂಗೀಕಾರವೂ ಆಯಿತು. ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ ಹೆಚ್ಚಳ ಆಗಿದೆ. ಬರೋಬ್ಬರಿ ಶೇಕಡಾ 50%ರಷ್ಟು ಸಂಬಳ, ಭತ್ಯೆ ಹೆಚ್ಚಳ

ಡಬಲ್ ಆಯ್ತು ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ|ಕಾಂಗ್ರೆಸ್ ಧರಣಿ ಮಧ್ಯೆಯೇ ಬಿಲ್ ಪಾಸ್ |ಇಲ್ಲಿದೆ ಸಂಬಳದ ಮಾಹಿತಿ Read More »

ಬೆಂಗಳೂರು: ಹೃದಯಾಘಾತದಿಂದ ಆರ್.ಜೆ ರಚನಾ ಸಾವು| ಲೀನವಾದ ಮದುರ ಧ್ವನಿ

ಸಮಗ್ರ ನ್ಯೂಸ್: ಎಫ್.ಎಂ. ಕೇಳುಗರ ಪ್ರೀತಿಯ ಆರ್.ಜೆ., ನಟಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರೇಡಿಯೋ ಜಾಕಿಯಾಗಿ ರಚನಾ ರೇಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಮುದ್ದಾದ ಮಾತಿನ ಮೂಲಕ ಅನೇಕ ಕೇಳುಗರನ್ನು ಸೆರೆಹಿಡಿದಿದ್ದರು. ಹೀಗೆ ಕೆಲಸ ಮಾಡಿ ಕೆಲಸ ಬಿಟ್ಟು ಮನೆಯಲ್ಲಿದ್ದಂತ ಅವರು ಡಿಪ್ರೆಷನ್ ಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾದ ಕಾರಣ, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಜೆ.ಪಿ.ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಖ್ಯಾತ ರೆಡಿಯೋ ಜಾಕಿ

ಬೆಂಗಳೂರು: ಹೃದಯಾಘಾತದಿಂದ ಆರ್.ಜೆ ರಚನಾ ಸಾವು| ಲೀನವಾದ ಮದುರ ಧ್ವನಿ Read More »

ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ – ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಭಾರತಿ ಶೆಟ್ಟಿ ಪ್ರಶ್ನೆ

ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು ಅಥವಾ ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರ ಹತ್ಯೆ ಆದ್ರೂ ಕೂಡ ಎಲ್ಲಾ ಪಕ್ಷ ಹೇಳೋದು ಒಂದೇ ಮಾತು ಕಠಿಣ ಶಿಕ್ಷೆ ಆಗಬೇಕು ಅಂತ. ಹರ್ಷನ ಜೀವನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಮೇಲೆ ಅನೇಕ ಕೇಸ್ ಇತ್ತು. ಹರ್ಷ ಮೇಲೆ ವೈಯಕ್ತಿಕ ಕೇಸ್ ಇಲ್ಲ.

ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ – ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಭಾರತಿ ಶೆಟ್ಟಿ ಪ್ರಶ್ನೆ Read More »

ಹರ್ಷ ಕುಟುಂಬಕ್ಕಾಗಿ ಒಂದು ತಿಂಗಳ ವೇತನ ಮೀಸಲಿರಿಸಿದ ಶಾಸಕ ಭರತ್ ಶೆಟ್ಟಿ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ತಮ್ಮ ಒಂದು ತಿಂಗಳ ವೇತನವನ್ನು ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಮತಾಂಧರ ದುಷ್ಕೃತ್ಯಕ್ಕೆ ಇಂದು ನಾವು ನಮ್ಮ ಯುವ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ನಾವು ಮಾಡಬಹುದಾದ ಕನಿಷ್ಠವೆಂದರೆ ಅವರ ಕುಟುಂಬವನ್ನು ಬೆಂಬಲಿಸುವುದು. ನನ್ನ 1 ತಿಂಗಳ ಸಂಬಳ ಮತ್ತು ಭತ್ಯೆಯನ್ನು ಹರ್ಷ ಅವರ ಕುಟುಂಬಕ್ಕೆ ನೀಡುತ್ತಿದ್ದೇನೆ.

ಹರ್ಷ ಕುಟುಂಬಕ್ಕಾಗಿ ಒಂದು ತಿಂಗಳ ವೇತನ ಮೀಸಲಿರಿಸಿದ ಶಾಸಕ ಭರತ್ ಶೆಟ್ಟಿ Read More »

ಇವರೇ ಹರ್ಷ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು , ಆರೋಪಿಗಳ ವಿವಿರ ಬಹಿರಂಗಪಡಿಸಿದ ಗೃಹ ಸಚಿವ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಇಬ್ಬರ ಹೆಸರನ್ನು ಬಹಿರಂಗಪಡಿಸಿದೆ. ಕೊಲೆಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೊಲೆ ಪ್ರಕರಣದಲ್ಲಿ ಐವರು ಭಾಗಿಯಾಗಿದ್ದಾರೆಂಬ ಮಾಹಿತಿ ಇದೆ. ಶಿವಮೊಗ್ಗ ಬುದ್ಧನಗರದ ಖಾಸಿಫ್‌ (30), ಜೆಪಿ ನಗರದ ಸೈಯದ್ ನದೀಂ (20) ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವರದಿಗಳ ಪ್ರಕಾರ ಐವರನ್ನೂ ವಶಕ್ಕೆ ಪಡೆದಿದ್ದು, ಇಬ್ಬರ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿದೆ. ವಾತಾವರಣ ತಿಳಿಯಾಗದ ಕಾರಣ ಬುಧವಾರ ಬೆಳಗಿನ

ಇವರೇ ಹರ್ಷ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು , ಆರೋಪಿಗಳ ವಿವಿರ ಬಹಿರಂಗಪಡಿಸಿದ ಗೃಹ ಸಚಿವ Read More »

ಬಿಜೆಪಿ ಸರ್ಕಾರದಲ್ಲೂ ಬಲಿಬೀಳುತ್ತಿರುವ ಹಿಂದೂ ಕಾರ್ಯಕರ್ತರು| ಎಸ್ಡಿಪಿಐ, ಪಿಎಫ್ಐ ನಿಷೇಧಿಸಲು ಇನ್ನೆಷ್ಟು ಹೆಣ ಬೀಳಬೇಕು| ಸರ್ಕಾರದ ನಡೆಗೆ ಸಂಸದ ಪ್ರತಾಪ ಸಿಂಹ ಹತಾಷೆ|

ಸಮಗ್ರ ನ್ಯೂಸ್ ಡೆಸ್ಕ್: ಶಿವಮೊಗ್ಗದಲ್ಲಿ ನಮ್ಮ ಭಜರಂಗದಳ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿ ಬಿದ್ದಿರುವುದನ್ನು ನೋಡಿದಾಗ ನನ್ನ ಮನಸ್ಸಿಗೆ ಅತೀವ ವೇದನೆಯಾಗುತ್ತಿದೆ. ಅದೇ ರೀತಿ ನಮ್ಮ ಸರ್ಕಾರ ಬಂದ ಮೇಲೆಯೂ ಕೂಡ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಹೀಗಾಗುತ್ತಿದೆಯಲ್ಲ ಎಂದು ನಾಚಿಯಾಗುತ್ತಿದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ. ಭಜರಂಗದಳ ಕಾರ್ಯಕರ್ತನ ಕೊಲೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಂಟ್ವಾಳದಲ್ಲಿ ಪ್ರಶಾಂತ್​ ಪೂಜಾರಿ ಹತ್ಯೆಯಾಗಿತ್ತು. ಅದಾದ ನಂತರ ಸೂರತ್ಕಲ್​ನಲ್ಲಿ ದೀಪಕ್​ ರಾವ್​ ಕೊಲೆಯಾಯ್ತು. ಬೆಂಗಳೂರಿನಲ್ಲಿ ಸಂತೋಷ್​​

ಬಿಜೆಪಿ ಸರ್ಕಾರದಲ್ಲೂ ಬಲಿಬೀಳುತ್ತಿರುವ ಹಿಂದೂ ಕಾರ್ಯಕರ್ತರು| ಎಸ್ಡಿಪಿಐ, ಪಿಎಫ್ಐ ನಿಷೇಧಿಸಲು ಇನ್ನೆಷ್ಟು ಹೆಣ ಬೀಳಬೇಕು| ಸರ್ಕಾರದ ನಡೆಗೆ ಸಂಸದ ಪ್ರತಾಪ ಸಿಂಹ ಹತಾಷೆ| Read More »

ಮಲ್ಪೆ: ಹಿಜಾಬ್ ವಿವಾದ – ವಿದ್ಯಾರ್ಥಿನಿಯ ತಂದೆಯ ರೆಸ್ಟೋರೆಂಟ್ ಮೇಲೆ ಕಲ್ಲು ತೂರಾಟ, ಸಹೋದರನ ಮೇಲೆ ಹಲ್ಲೆ

ಮಲ್ಪೆ: ಹಿಜಾಬ್ ವಿವಾದ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ತಂದೆಗೆ ಸೇರಿದ ರೆಸ್ಟೋರೆಂಟ್ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಫೆಬ್ರವರಿ 21 ರ ಸೋಮವಾರ ರಾತ್ರಿ 9.30ರ ಸುಮಾರಿಗೆ ಮಲ್ಪೆಯಲ್ಲಿ ನಡೆದಿದೆ. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿದ್ದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಾಲೇಜು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ಶಿಫಾ ಅವರ ತಂದೆ ಹೈದರ್ ಅಲಿ ಅವರಿಗೆ ಸೇರಿದ ‘ಬಿಸ್ಮಿಲ್ಲಾ ಹೋಟೆಲ್’ ಮೇಲೆ ಸುಮಾರು 50 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ತಿಳಿದುಬಂದಿದೆ. ಇದರಿಂದ ರೆಸ್ಟೋರೆಂಟ್‌ನ

ಮಲ್ಪೆ: ಹಿಜಾಬ್ ವಿವಾದ – ವಿದ್ಯಾರ್ಥಿನಿಯ ತಂದೆಯ ರೆಸ್ಟೋರೆಂಟ್ ಮೇಲೆ ಕಲ್ಲು ತೂರಾಟ, ಸಹೋದರನ ಮೇಲೆ ಹಲ್ಲೆ Read More »

ಕೊಲೆಯಾದವನು ಶಿವಮೊಗ್ಗದ ಬೀದಿ ನಾಯಿ, ಕರಾವಳಿ ಜಿಲ್ಲೆಯಲ್ಲಿ ಕೋಮು ವಿಷ ಬೀಜ ಬಿತ್ತಲು ಮತ್ತೆ ತಲೆಯೆತ್ತಿದ ಮಂಗಳೂರು ಮುಸ್ಲಿಂ ಪೇಜ್, ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು

ಮಂಗಳೂರು: ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತನ ಹತ್ಯೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೃತ ಹರ್ಷ ವಿರುದ್ದ ಅವಹೇಳನಕಾರಿಯಾದಿ ಬರಹ ಪೋಸ್ಟ್ ಮಾಡಿದ ಮಂಗಳೂರು ಮುಸ್ಲಿಂ ಹೆಸರಿನ ಫೇಸ್ ಬುಕ್ ಪೇಜ್ ವಿರುದ್ದ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಮಂಗಳೂರು ಮುಸ್ಲಿಂ ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಕೊಲೆಯಾದವನು ಶಿವಮೊಗ್ಗದ ಬೀದಿ ನಾಯಿ ಎಂದು ಉಲ್ಲೇಖಿಸಿದ್ದು, 2015ರಲ್ಲಿ ಹರ್ಷ ಪ್ರವಾದಿಯನ್ನು‌ ನಿಂದನೆ ಮಾಡಿರುವುದಾಗಿ ಆರೋಪಿಸಲಾಗಿದ್ದು, ಪ್ರವಾದಿ

ಕೊಲೆಯಾದವನು ಶಿವಮೊಗ್ಗದ ಬೀದಿ ನಾಯಿ, ಕರಾವಳಿ ಜಿಲ್ಲೆಯಲ್ಲಿ ಕೋಮು ವಿಷ ಬೀಜ ಬಿತ್ತಲು ಮತ್ತೆ ತಲೆಯೆತ್ತಿದ ಮಂಗಳೂರು ಮುಸ್ಲಿಂ ಪೇಜ್, ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು Read More »

ಮಂಗಳೂರು: ಪ್ರಾರ್ಥನಾ ಮಂದಿರ ದ್ವಂಸ ಪ್ರಕರಣ – ಇಬ್ಬರ ಬಂಧನ

ಮಂಗಳೂರು: ಕೂಳೂರು ಸಮೀಪದ ಪಂಜಿನಮೊಗರು – ಉರುಂದಾಡಿ ಗುಡ್ಡೆಯಲ್ಲಿ ಪ್ರಾರ್ಥನಾ ಮಂದಿರ ದ್ವಂಸ ಪ್ರಕರಣದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಬಜಪೆ ನಿವಾಸಿ ಲತೀಶ್ (25) , ಕಾವೂರು ಉರುಂದಾಡಿ‌ ನಿವಾಸಿ ಧನಂಜಯ (36) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ‌ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.

ಮಂಗಳೂರು: ಪ್ರಾರ್ಥನಾ ಮಂದಿರ ದ್ವಂಸ ಪ್ರಕರಣ – ಇಬ್ಬರ ಬಂಧನ Read More »

ಮಂಗಳೂರು: ಟೋಲ್‌ಗೇಟ್ ವಿರೋಧಿ ಹೋರಾಟ – ಬಂಧನಕ್ಕೊಳಗಾದ ಆಸಿಫ್ ಆಪತ್ಭಾಂದವ ಬಿಡುಗಡೆ

ಮಂಗಳೂರು: ಸುರತ್ಕಲ್‌ನಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹದ ವಿರುದ್ಧ ಕಳೆದ 15 ದಿನಗಳಿಂದ ಟೋಲ್‌ಗೇಟ್ ಪಕ್ಕದಲ್ಲಿ ಆಹೋ ರಾತ್ರಿ ಹೋರಾಟ ನಡೆಸುತ್ತಿದ್ದ ಆಸಿಫ್ ಆಪತ್ಭ್ಬಾಂದವರನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಇದೀಗ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಂಧನದಿಂದ ಬಿಡುಗಡೆಗೊಳಿಸುವ ವಿಚಾರವಾಗಿ ಎಸ್‌ಡಿಪಿಐ ನಿಯೋಗವು ಪೊಲೀಸ್ ಆಯುಕ್ತರೊಂದಿಗೆ ಮಾತುಕತೆಯ ನಡೆಸಿ ಹೋರಾಟಗಾರ ಆಸಿಫ್ ಆಪತ್ಭ್ಬಾಂದವರನ್ನು ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಬೂಬಕ್ಕರ್ ಕುಳಾಯಿ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ,ಯಾಸೀನ್ ಅರ್ಕುಳ, ದಾವೂದ್, ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು: ಟೋಲ್‌ಗೇಟ್ ವಿರೋಧಿ ಹೋರಾಟ – ಬಂಧನಕ್ಕೊಳಗಾದ ಆಸಿಫ್ ಆಪತ್ಭಾಂದವ ಬಿಡುಗಡೆ Read More »