Editor

ಕಾರ್ಕಳ: ಅಂಗೈಯಗಲ ಜಾಗಕ್ಕಾಗಿ ಒಡಹುಟ್ಟಿದ ಅಣ್ಣನ ಇರಿದು ಕೊಂದ ತಮ್ಮ

ಸಮಗ್ರ ನ್ಯೂಸ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಒಡಹುಟ್ಟಿದ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳದಲ್ಲಿ ಸಂಭವಿಸಿದೆ. ಬಜಕಳದ ಶೇಖರ್ (50) ಕೊಲೆಯಾದವರು. ಆತನ ಕಿರಿಯ ಸಹೋದರ ರಾಜು (35) ಕೊಲೆ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಕೊಲೆ ನಡೆದಿದೆ. ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದರು. ಶೇಖರ್ ತನ್ನ ತಾಯಿಗೆ ಮಂಜೂರಾದ ಜಮೀನಿನಲ್ಲಿ ವಾಸವಾಗಿದ್ದರು. ಈ ಹಿಂದೆ ಶೇಖರ್ ಜತೆ ವಾಸವಾಗಿದ್ದ ರಾಜು ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ

ಕಾರ್ಕಳ: ಅಂಗೈಯಗಲ ಜಾಗಕ್ಕಾಗಿ ಒಡಹುಟ್ಟಿದ ಅಣ್ಣನ ಇರಿದು ಕೊಂದ ತಮ್ಮ Read More »

ಶಿಕ್ಷಕರು ಹೊಡೆಯುತ್ತಾರೆಂದು ಪೊಲೀಸ್ ಗೆ ದೂರು ಕೊಟ್ಟ ಎರಡನೇ ಕ್ಲಾಸ್ ವಿದ್ಯಾರ್ಥಿ

ಸಮಗ್ರ ನ್ಯೂಸ್: ಶಾಲೆಯಲ್ಲಿ ಶಿಕ್ಷಕರು ಹೊಡೆಯುತ್ತಾರೆ ಎಂದು ಎರಡನೇ ಕ್ಲಾಸ್ ಬಾಲಕನೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್, ಮೆಹಬೂಬ್ ನಗರದ ಖಾಸಗಿ ಶಾಲಾ ಶಿಕ್ಷಕನ ವಿರುದ್ಧ ದೂರು ನೀಡಿದ್ದು, ಈ ವೇಳೆ ಮಹಿಳಾ ಇನ್ಸ್ ಪೆಕ್ಟರ್ ರಮಾದೇವಿ ವಿದ್ಯಾರ್ಥಿಯನ್ನು ವಿಚಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನನಗೆ ಶಿಕ್ಷಕರು ಶಾಲೆಯಲ್ಲಿ ಹೊಡೆಯುತ್ತಿದ್ದಾರೆ. ಅವರನ್ನು ಬಂಧಿಸುವಂತೆ ಹೇಳಿದ್ದಾನೆ. ಬಳಿಕ ಇನ್ಸ್ ಪೆಕ್ಟರ್ ರಮಾದೇವಿ, ವಿದ್ಯಾರ್ಥಿಯ ಜತೆ ಶಾಲೆಗೆ

ಶಿಕ್ಷಕರು ಹೊಡೆಯುತ್ತಾರೆಂದು ಪೊಲೀಸ್ ಗೆ ದೂರು ಕೊಟ್ಟ ಎರಡನೇ ಕ್ಲಾಸ್ ವಿದ್ಯಾರ್ಥಿ Read More »

ಸುಳ್ಯ : ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳ ಕಳವು|
ಹಿಂತಿರುಗಿಸದಿದ್ದಲ್ಲಿ ಕಾರ್ಣಿಕ ಸ್ಥಳ ಕ್ಕೆ ಹರಕೆ ಹೊರಲಾಗುವುದು| ಸ್ಟೇಟಸ್ ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ತಾಲೂಕಿನ ಅಮರ ಮುಡ್ನೂರು ಸಮೀಪದ ಪೈಲಾರಿನಲ್ಲಿ‌ ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳನ್ನು ಕಳವು ಆಗಿರುವ ಘಟನೆ ಮಾ. 5 ರ ಶನಿವಾರ ನಡೆದಿದೆ. “ಗಮನಿಸಿ:ದಿನಾಂಕ 5 ಮಾರ್ಚ್ 2022ನೇ ಶನಿವಾರದಂದು ರಾತ್ರಿ ಪೈಲಾರಿನ ಮಡಪ್ಪಾಡಿ ಬಳಿ ನಿಲ್ಲಿಸಿದ್ದ ಜೀಪಿನಿಂದ ನಗದು ಮತ್ತು ಜೀಪಿನ ದಾಖಲೆಗಳು ಕಳವಾಗಿವೆ. ಜೀಪಿನ ಲಾಕರನ್ನು ಒಡೆದು ಸುಮಾರು ರೂ 30,000.00 ನಗದು ಮತ್ತು ದಾಖಲೆಗಳನ್ನು ಅಪರಿಚಿತರು ಲಪಟಾಯಿಸಿದ್ದು, ಈ ಕೃತ್ಯವೆಸಗಿದವರು ಕೂಡಲೇ ನಗದು ಮತ್ತು ದಾಖಲೆಗಳನ್ನು ಹಿಂದಿರುಗಿಸತಕ್ಕದ್ದು

ಸುಳ್ಯ : ನಿಲ್ಲಿಸಿದ್ದ ಜೀಪ್ ನಿಂದ ನಗದು ಸಹಿತ ದಾಖಲೆಗಳ ಕಳವು|
ಹಿಂತಿರುಗಿಸದಿದ್ದಲ್ಲಿ ಕಾರ್ಣಿಕ ಸ್ಥಳ ಕ್ಕೆ ಹರಕೆ ಹೊರಲಾಗುವುದು| ಸ್ಟೇಟಸ್ ಪೋಸ್ಟರ್ ವೈರಲ್
Read More »

ಪ್ಯಾಲೇಸ್ತೀನ್ ನ ಭಾರತೀಯ ಪ್ರತಿನಿಧಿ ಮುಕುಲ್ ರಾಯ್ ಕಚೇರಿಯಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ರಮಲ್ಲಾದಲ್ಲಿರುವ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರು ಪ್ಯಾಲೆಸ್ತೀನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮುಕುಲ್ ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿ ಶ್ರೀ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಯಿತು. ಅವರು ಪ್ರತಿಭಾವಂತ ಅಧಿಕಾರಿಯಾಗಿದ್ದರು. ಓಂ ಶಾಂತಿ’ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಭಾರತೀಯ ರಾಯಭಾರಿಯು ರಮಲ್ಲಾದಲ್ಲಿನ ಅವರ

ಪ್ಯಾಲೇಸ್ತೀನ್ ನ ಭಾರತೀಯ ಪ್ರತಿನಿಧಿ ಮುಕುಲ್ ರಾಯ್ ಕಚೇರಿಯಲ್ಲಿ ಶವವಾಗಿ ಪತ್ತೆ Read More »

ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲೇ ಶವ ಸುಟ್ಟ ಅಕೌಂಟೆಂಟ್

ಸಮಗ್ರ ನ್ಯೂಸ್: ನರ್ಸಿಂಗ್ ಕಾಲೇಜೊಂದರ ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲಿ ಆಕೆಯ ಶವವನ್ನು ಸುಟ್ಟುಹಾಕಿದ ಆರೋಪದ ಮೇಲೆ ನೌಕರನನ್ನು ಬಂಧಿಸಲಾಗಿರುವ ಘಟನೆ ದಮನ್ ನ ದಾದ್ರಾ ನಗರದಲ್ಲಿ ನಡೆದಿದೆ 45ರ ಹರೆಯದ ಕನಿಮೊಳಿ ಆರ್ಮುಗಂ ಎಂಬಾಕೆ ನಾಪತ್ತೆಯಾಗಿರುವ ಕುರಿತು ಮಾರ್ಚ್ 1ರಂದು ಸಿಲ್ವಾಸ್ಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ದಮನ್‌ನ ಕಾಲೇಜಿನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸವನ್ ಪಟೇಲ್‌ನ ಮೇಲೆ ತಾಂತ್ರಿಕ ಕಣ್ಗಾವಲು ಮತ್ತು ಇತರ ರೀತಿಯ ಇನ್‌ಪುಟ್‌ಗಳನ್ನು ಬಳಸುವ ತಂಡಗಳು ಆರೋಪಿ ಎಂದು ಖಚಿತಪಡಿಸಿಕೊಂಡು ಬಂಧಿಸಿದ್ದಾರೆ.

ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲೇ ಶವ ಸುಟ್ಟ ಅಕೌಂಟೆಂಟ್ Read More »

“ಯುದ್ದ ಆಗುತ್ತೆ ಅಂತ ಗೊತ್ತಿದ್ರೂ ಮೊದಲೇ ಯಾಕೆ ರಕ್ಷಣೆ‌ ಮಾಡಿಲ್ಲ?| ಗಡಿ ದಾಟಿ ಬಂದವರನ್ನು ಕರೆ ತಂದು ಪೋಸ್ ಕೊಡುತ್ತಿದೆ ಸರ್ಕಾರ” – ಯು.ಟಿ‌ ಖಾದರ್ ಆರೋಪ

ಸಮಗ್ರ ನ್ಯೂಸ್: ” ಉಕ್ರೇನ್ ಗಡಿದಾಟಿದ ವಿದ್ಯಾರ್ಥಿಗಳನ್ನು ಕರೆತಂದು ಕೇಂದ್ರ ಸರ್ಕಾರ ರಕ್ಷಣೆ ಮಾಡಿದ ಫೋಸ್ ನೀಡುತ್ತಿದೆ” ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆರೋಪಿಸಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಿರ್ಣಯ ಆಗಿರೋದು ರಾತ್ರಿ ಹಗಲಿನ ನಡುವೆ ನಿರ್ಧಾರ ಆಗಿರೋದು ಅಲ್ಲ. ಒಂದು ತಿಂಗಳ ಮೊದಲೇ ಯುದ್ಧ ಆಗುತ್ತದೆ ಅಂತಾ ಗೊತ್ತಿತ್ತು. ಆದರೂ ಭಾರತೀಯ ರಾಯಭಾರಿ ಕಛೇರಿ ಮೊದಲೇ ಮಕ್ಕಳನ್ನು ರಕ್ಷಣೆ ಮಾಡಲಿಲ್ಲ ಏಕೆ?” ಎಂದು

“ಯುದ್ದ ಆಗುತ್ತೆ ಅಂತ ಗೊತ್ತಿದ್ರೂ ಮೊದಲೇ ಯಾಕೆ ರಕ್ಷಣೆ‌ ಮಾಡಿಲ್ಲ?| ಗಡಿ ದಾಟಿ ಬಂದವರನ್ನು ಕರೆ ತಂದು ಪೋಸ್ ಕೊಡುತ್ತಿದೆ ಸರ್ಕಾರ” – ಯು.ಟಿ‌ ಖಾದರ್ ಆರೋಪ Read More »

ಉಕ್ರೇನ್ ನಿಂದ ತವರಿಗೆ ಮರಳಿದ ಹೀನಾರಿಂದ ಮೋದಿಗೆ ಧನ್ಯವಾದ

ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಕಳೆದ ಹಲವು ದಿನಗಳಿಂದ ಜೀವಭಯದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಹೀನಾ ಫಾತಿಮಾ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಕೊನೆಗೂ ತವರಿಗೆ ಮರಳಿದ್ದಾರೆ. ಉಕ್ರೇನ್‌ನ ಭಯಾನಕ ಸ್ಥಿತಿ, ಭಾರತೀಯ ರಾಯಭಾರಿ ಕಚೇರಿ ನೆರವಾದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹೀನಾ ಫಾತಿಮಾ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಖಾರ್ಕೀವ್‌ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹೀನಾ ಫಾತಿಮಾ, ಖಾರ್ಕೀವ್‌ನಿಂದ ಪೋಲೆಂಡ್‌ಗೆ ಬಂದು ಅಲ್ಲಿಂದ ದೆಹಲಿ ತಲುಪಿ. ಬೆಂಗಳೂರಿಗೆ ಆಗಮಿಸಿದ ಅಲ್ಲಿಂದ

ಉಕ್ರೇನ್ ನಿಂದ ತವರಿಗೆ ಮರಳಿದ ಹೀನಾರಿಂದ ಮೋದಿಗೆ ಧನ್ಯವಾದ Read More »

ವಾಯುಭಾರ ಕುಸಿತ; ಎರಡು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾಳೆಯಿಂದ ಎರಡು ದಿನಗಳ ಕಾಲ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದ ಪರಿಣಾಮದಿಂದಾಗಿ, ಮಾರ್ಚ್ 7 ಹಾಗೂ 8 ರಂದು ರಾಜ್ಯದಲ್ಲಿ ಮಳೆ ಆಗಲಿದೆ. ಕಳೆದೆರಡು ತಿಂಗಳಿನಿಂದ ಇದ್ದ ಒಣ ಹವೆ ಕೊನೆಗೊಳ್ಳುತ್ತಿದ್ದು, ಮಾರ್ಚ್ 7ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಕೊಡಗು, ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ

ವಾಯುಭಾರ ಕುಸಿತ; ಎರಡು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ Read More »

2022 ರ ಐಪಿಎಲ್ ವೇಳಾಪಟ್ಟಿ ಪ್ರಕಟ| ಮಾ.26 ರಿಂದ ಪಂದ್ಯಾರಂಭ|

ಸಮಗ್ರ ನ್ಯೂಸ್: ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಾಟಾ ಐಪಿಎಲ್ 2022 ರ ಪಂದ್ಯದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹಣಾಹಣಿಯೊಂದಿಗೆ 2022 ರ ಐಪಿಎಲ್ ನ 15 ನೇ ಸೀಸನ್ ಮಾರ್ಚ್ 26 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 27 ರಂದು, ಲೀಗ್ ತನ್ನ ಮೊದಲ ಡಬಲ್ ಹೆಡರ್ ಅನ್ನು ಪ್ರದರ್ಶಿಸಲಿದೆ, ಬ್ರಬೋರ್ನ್ ನಲ್ಲಿ ಡೇ ಆಟದೊಂದಿಗೆ ಪ್ರಾರಂಭವಾಗಲಿದೆ,

2022 ರ ಐಪಿಎಲ್ ವೇಳಾಪಟ್ಟಿ ಪ್ರಕಟ| ಮಾ.26 ರಿಂದ ಪಂದ್ಯಾರಂಭ| Read More »

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್|

ಸಮಗ್ರ ನ್ಯೂಸ್: ರಷ್ಯಾ ಸೇನೆ ಉಕ್ರೇನ್​ನ ಮತ್ತೊಂದು ಅಣುಸ್ಥಾವರವೊಂದನ್ನು ವಶಕ್ಕೆ ಪಡೆದಿದ್ದು, ಝೆಪೋರಿಝಿಯಾ ಬಳಿಕ ಚೆರ್ನೋಬಿಲ್ ಅಣುಸ್ಥಾವರ ವಶಕ್ಕೆ ಪಡೆದಿದೆ.ಸದ್ಯ ಚೆರ್ನೋಬಿಲ್ ಅಣುಸ್ಥಾವರ ಕಾರ್ಯ ನಿರ್ವಹಿಸುತ್ತಿಲ್ಲ, ಆದರೆ ಅಲ್ಲಿನ್ನೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಚೆರ್ನೋಬಿಲ್​ ಬೆನ್ನಲ್ಲೇ ರಷ್ಯಾ ಸೇನೆಯು ಮತ್ತೊಂದು ಅಣುಸ್ಥಾವರ ಮೇಲೆ ಕಣ್ಣು ಇಟ್ಟಿದ್ದು, ಒಂದೊಂದೇ ಅಣುಸ್ಥಾವರ ವಶಕ್ಕೆ ಪಡೆಯುತ್ತಿದೆ. ಇದೇ ವೇಳೆ ಉಕ್ರೇನ್ ಚೆರ್ನೊಬೆಲ್ ನಲ್ಲಿ ಅಣುಬಾಂಬ್ ಉತ್ಪಾದಿಸಲು ಪ್ರಯತ್ನಿಸುತ್ತಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ.

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್| Read More »