Editor

ಎ.6 ಕ್ಕೆ ಕರ್ನಾಟಕದತ್ತ “ನಮೋ”| ಕರುನಾಡಲ್ಲಿ ಚುನಾವಣಾ ದಂಡಯಾತ್ರೆಗೆ ಸಜ್ಜಾದರಾ ಪ್ರಧಾನಿ?

ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದು ಉತ್ಸಾಹದಲ್ಲಿರುವ ಕಮಲ ಪಡೆ 2023ರ ರಾಜ್ಯ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಕರುನಾಡಿನಲ್ಲಿ ರಣಕಹಳೆ ಮೊಳಗಿಸಲು ಮೋದಿಯೂ ಸಜ್ಜಾಗಿದ್ದು, ಪ್ರಧಾನಿ ಕರ್ನಾಟಕ ದಂಡಯಾತ್ರೆಗೆ ಮುಹೂರ್ತ ನಿಗದಿಯಾಗಿದೆ. ಏಪ್ರಿಲ್​ 6ಕ್ಕೆ ಪ್ರಧಾನಿಗಳ ರಾಜ್ಯ ಪ್ರವಾಸ ಆರಂಭವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆಗೆ ಪ್ಲಾನ್ ರೂಪಿಸಲಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ರವಾನೆಯಾಗಿದ್ದು, ಸಿದ್ಧತೆ ಶುರು ಮಾಡಿಕೊಂಡಿದ್ದಾರೆ. ಏಪ್ರಿಲ್ 1ಕ್ಕೆ ರಾಜ್ಯಕ್ಕೆ ಅಮಿತ್​ ಶಾ ಭೇಟಿ ಕೊಡಲಿದ್ದಾರೆ.

ಎ.6 ಕ್ಕೆ ಕರ್ನಾಟಕದತ್ತ “ನಮೋ”| ಕರುನಾಡಲ್ಲಿ ಚುನಾವಣಾ ದಂಡಯಾತ್ರೆಗೆ ಸಜ್ಜಾದರಾ ಪ್ರಧಾನಿ? Read More »

ಪಂಜಾಬ್ ಜನಪ್ರತಿನಿಧಿಗಳಿಗೆ ಶಾಕ್ ನೀಡಿದ ‘ಭಗವಂತ’ | “ಒನ್ ಎಂಎಲ್ಎ ವನ್ ಪೆನ್ಷನ್” ಜಾರಿಗೆ ತಂದ ಸಿಎಂ

ಸಮಗ್ರ ನ್ಯೂಸ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಾ ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ಕಡಿತಗೊಳಿಸಿದ್ದು, ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ ಈ ವಿಚಾರ ತಿಳಿಸಿದ ಸಿಎಂ ಭಗವಂತ್‌ಮಾನ್ ಹಲವು ಶಾಸಕರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಪ್ರತಿ ಅವಧಿಗೆ ಬಹು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟು ಬಾರಿ

ಪಂಜಾಬ್ ಜನಪ್ರತಿನಿಧಿಗಳಿಗೆ ಶಾಕ್ ನೀಡಿದ ‘ಭಗವಂತ’ | “ಒನ್ ಎಂಎಲ್ಎ ವನ್ ಪೆನ್ಷನ್” ಜಾರಿಗೆ ತಂದ ಸಿಎಂ Read More »

ಔಷಧಿ ಬೆಲೆಯಲ್ಲಿ ಭಾರೀ ಏರಿಕೆ| ಅಗತ್ಯ ಔಷಧ ದರ ದುಪ್ಪಟ್ಟು

ಸಮಗ್ರ ನ್ಯೂಸ್: ಪ್ಯಾರಾಸಿಟಮಾಲ್, ಅಜಿಥ್ರೊಮೈಸಿನ್ ಸೇರಿದಂತೆ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ. ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ(ಡಬ್ಲ್ಯುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ NLEM ನಲ್ಲಿ ಸುಮಾರು 800 ನಿಗದಿತ

ಔಷಧಿ ಬೆಲೆಯಲ್ಲಿ ಭಾರೀ ಏರಿಕೆ| ಅಗತ್ಯ ಔಷಧ ದರ ದುಪ್ಪಟ್ಟು Read More »

ಮಂಗಳೂರು ವಿವಿ ಅತಿಥಿ ಉಪನ್ಯಾಸಕರ ವೇತನದಲ್ಲಿ ಹೆಚ್ಚಳ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾ ಸಕರಿಗೆ ಮಾಸಿಕ 40,000 ರೂ.ಹಾಗೂ ಯುಜಿಸಿ ವಿದ್ಯಾರ್ಹತೆ ಹೊಂದಿರದವರಿಗೆ 35,000 ರೂ. ನಿಗದಿಪಡಿಸಲಾಗಿದೆ. ಫೆಬ್ರವರಿಯಿಂದ ಜಾರಿಗೆ ಬರುವಂತೆ ಈ ಹಿಂದಿನ ವೇತನಕ್ಕಿಂತ ಸರಾಸರಿ 10ರಿಂದ 15 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಇದು ಮಂಗಳೂರು ವಿಶ್ವ ವಿದ್ಯಾನಿಲಯದ ಮಹತ್ವದ ಹಾಗೂ ಸ್ವಾಗತಾರ್ಹ ನಿರ್ಧಾರ ಎಂದು ಮಂಗಳೂರು

ಮಂಗಳೂರು ವಿವಿ ಅತಿಥಿ ಉಪನ್ಯಾಸಕರ ವೇತನದಲ್ಲಿ ಹೆಚ್ಚಳ Read More »

ಪ್ರೀತಿ ಮಾಯೆಯಾ? ; ತಮ್ಮನ ಜೊತೆಗೆ ವಿಧವೆ ಅಕ್ಕನ ಲವ್ವಿಡವ್ವಿ| ಪ್ರೇಮಪಾಶಕ್ಕೆ ಸಿಲುಕಿದ ಒಂದೇ ಬಳ್ಳಿಯ ಹೂಗಳು!

ಸಮಗ್ರ ಡಿಜಿಟಲ್ ಡೆಸ್ಕ್: ಮಲತಾಯಿಯನ್ನು ಮಗ ಪ್ರೀತಿಸುವುದು, ಮಲತಂಗಿಯನ್ನು ಅಣ್ಣ ಪ್ರೀತಿಸುವುದು ವಿದೇಶಗಳಲ್ಲಿ ಸಾಮಾನ್ಯ. ಆದರೆ ಸ್ವಂತ ಅಕ್ಕ- ತಮ್ಮ ಲವ್ವಿಗೆ ಬಿದ್ದು, ಗ್ರಾಮಸ್ಥರಿಂದ ಛೀಮಾರಿಗೊಳಪಟ್ಟ ಘಟನೆ ಭಾರತದ ಹಳ್ಳಿಯೊಂದರಲ್ಲಿ ನಡೆದಿರುವುದು ಆಶ್ಚರ್ಯ ಉಂಟುಮಾಡಿದೆ. ಇಂತಹದ್ದೊಂದು ವಿಚಿತ್ರ ಪ್ರೇಮಕಥೆ ಬೆಳಕಿಗೆ ಬಂದಿದ್ದು, ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ. ಇಲ್ಲಿನ ವಿಧವೆ ಸಹೋದರಿ ತನ್ನ ಕಿರಿಯ ಸಹೋದರನನ್ನು ಪ್ರೀತಿಸುತ್ತಿದ್ದಳು. ಇಬ್ಬರ ನಡುವಿನ ಪ್ರೇಮ ಸಂಬಂಧ ಎಷ್ಟರಮಟ್ಟಿಗೆ ಗಟ್ಟಿಯಾಯಿತು ಎಂದರೆ ಇಬ್ಬರೂ ಬೇರೆಯಾಗಲು ಒಪ್ಪಲಿಲ್ಲ. ಇಬ್ಬರೂ ಜೊತೆಯಾಗಿ ಬದುಕಿ ಸಾಯಬೇಕೆಂಬ

ಪ್ರೀತಿ ಮಾಯೆಯಾ? ; ತಮ್ಮನ ಜೊತೆಗೆ ವಿಧವೆ ಅಕ್ಕನ ಲವ್ವಿಡವ್ವಿ| ಪ್ರೇಮಪಾಶಕ್ಕೆ ಸಿಲುಕಿದ ಒಂದೇ ಬಳ್ಳಿಯ ಹೂಗಳು! Read More »

ಇಂದೂ ಏರಿಕೆ ಕಂಡ ತೈಲ ಬೆಲೆ| ನಾಲ್ಕೇ ದಿನದಲ್ಲಿ 3.6 ರೂ ಹೆಚ್ಚಳ

ಸಮಗ್ರ ನ್ಯೂಸ್: ದೇಶದಲ್ಲಿ ಕಳೆದ 5 ದಿನಗಳಲ್ಲಿ 4 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿದೆ. ಈ ಮೂಲಕ 4 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 3.6 . ರೂ ಹೆಚ್ಚಳವಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 98.61 ಮತ್ತು 89.87 ರೂ.ಏರಿಕೆಯಾದರೆ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.86 ರೂ. ಮತ್ತು ಡೀಸೆಲ್ ಬೆಲೆ 88.18 ರೂ.ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 113.27 ರೂ

ಇಂದೂ ಏರಿಕೆ ಕಂಡ ತೈಲ ಬೆಲೆ| ನಾಲ್ಕೇ ದಿನದಲ್ಲಿ 3.6 ರೂ ಹೆಚ್ಚಳ Read More »

ಇಂದಿನಿಂದ ಐಪಿಎಲ್ ಕಲರವ| ಚುಟುಕು ಮಹಾಸಮರಕ್ಕೆ ಕ್ರಿಕೆಟ್ ಕಲಿಗಳು ರೆಡಿ|

ಸಮಗ್ರ ನ್ಯೂಸ್: ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ ಇಂದು ಆರಂಭವಾಗಲಿದ್ದು, ಈ ಬಾರಿ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ, ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಕ ಇಂದು ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಎರಡನೇ ದಿನದ ಆಟದಲ್ಲಿ ಕಳೆದ ಋತುವಿನ ರನ್ನರ್ಸ್ ಅಪ್ ದೆಹಲಿ ಕ್ಯಾಪಿಟಲ್ಸ್ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಐದು ಬಾರಿ ಚಾಂಪಿಯನ್ ಮುಂಬಾ ಇಂಡಿಯನ್ಸ್ ವಿರುದ್ಧ

ಇಂದಿನಿಂದ ಐಪಿಎಲ್ ಕಲರವ| ಚುಟುಕು ಮಹಾಸಮರಕ್ಕೆ ಕ್ರಿಕೆಟ್ ಕಲಿಗಳು ರೆಡಿ| Read More »

ಕುಕ್ಕೆ ಕ್ಷೇತ್ರಕ್ಕೂ ಲಗ್ಗೆ ಇಟ್ಟ ಗೋಕಳ್ಳರು| ಸ್ವಲ್ಪದರಲ್ಲೇ ಕಟುಕರ ಕೈಯಿಂದ ಬಚಾಚಾದ ಗೋಮಾತೆ| ಸಿಸಿ ಟಿವಿಯಲ್ಲಿ ದೃಶ್ಯ ಸೆರೆ|

ಸಮಗ್ರ ಸಮಾಚಾರ: ರಾಜ್ಯದಲ್ಲಿ ಗೊ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೊ ಕಳ್ಳರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ರಾಜ್ಯದ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಬಾಗದಲ್ಲಿ ದನ ಮಲಗಿದ್ದ ಗೋವನ್ನು ಕದ್ದೊಯ್ಯಲೆತ್ನಿಸಿ ವಿಫಲರಾದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಮಾ.23ರಂದು ಈ ಘಟನೆ ನಡೆದಿದ್ದು, ಮುಂಜಾನೆ ಸುಮಾರು 3.30ರ ವೇಳೆಗೆ ಇನ್ನೋವಾ ಕಾರಿನಲ್ಲಿ ಬಂದ ಗೋಕಳ್ಳರು ಮಲಗಿದ್ದ ಹಸುವನ್ನು ತುಂಬಿಸಿ ಕದ್ದೊಯ್ಯಲು ಯತ್ನಿಸಿದ್ದಾರೆ. ಮಾ

ಕುಕ್ಕೆ ಕ್ಷೇತ್ರಕ್ಕೂ ಲಗ್ಗೆ ಇಟ್ಟ ಗೋಕಳ್ಳರು| ಸ್ವಲ್ಪದರಲ್ಲೇ ಕಟುಕರ ಕೈಯಿಂದ ಬಚಾಚಾದ ಗೋಮಾತೆ| ಸಿಸಿ ಟಿವಿಯಲ್ಲಿ ದೃಶ್ಯ ಸೆರೆ| Read More »

ಹಿಜಾಬ್ ವಿವಾದ; ದಿಢೀರ್ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಸಮನ್ವಯ ಸಮಿತಿ| ಹೈಕೋರ್ಟ್ ತೀರ್ಪು ವಿರೋಧಿಸಿ ಘೋಷಣೆ|

ಸಮಗ್ರ ನ್ಯೂಸ್ : ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾಗಿದ್ದ ಹಿಜಾಬ್ ಬಗ್ಗೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಮಂಗಳೂರಿನಲ್ಲಿ ವಿದ್ಯಾರ್ಥಿ ಸಮನ್ವಯ ಸಮಿತಿ ಹೆಸರಿನ ವಿದ್ಯಾರ್ಥಿಗಳ ತಂಡವೊಂದು ಮಾ 25 ರಂದು ಸಂಜೆ ದಿಢೀರ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ 100ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ನಗರದ ಕ್ಲಾಕ್‌ ಟವರ್‌ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದು, ನ್ಯಾಯಕ್ಕಾಗಿ ಅಗ್ರಹಿಸುತ್ತಿದ್ದ ಅವರು ‘ಅಲ್ಲಾಹೋ ಅಕ್ಬರ್‌’ ಘೋಷಣೆಯನ್ನು

ಹಿಜಾಬ್ ವಿವಾದ; ದಿಢೀರ್ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಸಮನ್ವಯ ಸಮಿತಿ| ಹೈಕೋರ್ಟ್ ತೀರ್ಪು ವಿರೋಧಿಸಿ ಘೋಷಣೆ| Read More »

ಮಾ.28ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ| ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

ಸಮಗ್ರ ನ್ಯೂಸ್: ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಹಿಜಾಬ್‌ ವಿವಾದ ಪಸರಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದರು ವಿದ್ಯಾರ್ಥಿಗಳು ಹಿಜಾಬ್ ಧರಿಸಿ

ಮಾ.28ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ| ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ Read More »