Editor

ಮಗುವನ್ನೂ ಚಿವುಟಿ ತೊಟ್ಟಿಲು ತೂಗುತ್ತಿರುವ ರಾಜಕೀಯ ನಾಯಕರು| ವಿಕೋಪಕ್ಕೆ ತಿರುಗಿದ ಮೇಲೆ ಹಿಂದೂ – ಮುಸ್ಲಿಂ ಭಾಯಿಭಾಯಿ ಮಂತ್ರ!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸೃಷ್ಟಿಯಾದ ಕೋಮುವೈಷಮ್ಯ ವಿಕೋಪಕ್ಕೆ ತಿರುಗುತ್ತಿದ್ದು, ಇದೀಗ ರಾಜಕೀಯ ನಾಯಕರು ಶಾಂತಿಮಂತ್ರ ಜಪಿಸುತ್ತಿದ್ದಾರೆ. ತಾವೇ ಸೃಷ್ಟಿ ಮಾಡಿದ ಈ ಕೋಮುದ್ವೇಷವನ್ನು ಅತ್ತ ಆರಲೂ ಬಿಡದೆ ಇತ್ತ ಜೋರಾಗಲೂ ಬಿಡದೆ ಮಗುವನ್ನೂ ಚಿವುಟುತ್ತಾ ತೊಟ್ಟಿಲು ತೂಗುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ವಿವಾದ ಸೃಷ್ಟಿಯಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವಿಚಾರ ವಿದ್ಯಾರ್ಥಿಗಳ ಮಧ್ಯೆ, ಧರ್ಮಗಳ ಮಧ್ಯೆ ದ್ವೇಷ ಉಂಟಾಗುವಂತೆ ಮಾಡಿತ್ತು. ಮೇಲ್ನೋಟಕ್ಕೆ ಇದು

ಮಗುವನ್ನೂ ಚಿವುಟಿ ತೊಟ್ಟಿಲು ತೂಗುತ್ತಿರುವ ರಾಜಕೀಯ ನಾಯಕರು| ವಿಕೋಪಕ್ಕೆ ತಿರುಗಿದ ಮೇಲೆ ಹಿಂದೂ – ಮುಸ್ಲಿಂ ಭಾಯಿಭಾಯಿ ಮಂತ್ರ! Read More »

ಕರ್ನಾಟಕದಲ್ಲಿ ಇಂದಿನಿಂದ ಬಿಜೆಪಿ ಚುನಾವಣೆ ಶಸ್ತ್ರಾಭ್ಯಾಸ| ಮೂರು ತಂಡದಲ್ಲಿ ರಾಜ್ಯ ಪ್ರವಾಸಕ್ಕೆ ಕೇಸರಿ ಪಡೆ ಸನ್ನದ್ಧ

ಸಮಗ್ರ ನ್ಯೂಸ್: ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಮೂರು ತಂಡಗಳ ನೇತೃತ್ವದ ರಾಜ್ಯ ಪ್ರವಾಸ ಮಂಗಳವಾರದಿಂದ ಆರಂಭವಾಗಲಿದೆ. ಮಂಗಳವಾರದಿಂದ ಈ ತಿಂಗಳ 24ರವರೆಗೆ ಅಂದರೆ, 12 ದಿನಗಳ ಕಾಲ ಮೂರು ತಂಡಗಳು ಪ್ರವಾಸ ನಡೆಸಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೂರು ತಂಡಗಳು ರಚನೆಯಾಗಿದ್ದು, ಅವುಗಳಲ್ಲಿ ಹಿರಿಯ ನಾಯಕರು ಇದ್ದಾರೆ. ಈ ತಂಡಗಳು

ಕರ್ನಾಟಕದಲ್ಲಿ ಇಂದಿನಿಂದ ಬಿಜೆಪಿ ಚುನಾವಣೆ ಶಸ್ತ್ರಾಭ್ಯಾಸ| ಮೂರು ತಂಡದಲ್ಲಿ ರಾಜ್ಯ ಪ್ರವಾಸಕ್ಕೆ ಕೇಸರಿ ಪಡೆ ಸನ್ನದ್ಧ Read More »

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ವೃದ್ಧ| ಪಂಚಾಯತಿ ನಡೆಸಿ ಮುಚ್ಚಿಹಾಕಲು ಯತ್ನ!

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಗೆ ಸಂಬಂಧಿ ವೃದ್ಧನೋರ್ವ ಲೈಂಗಿಕ ಕಿರುಕುಳ ನೀಡಿ ಗರ್ಭವತಿಯಾಗಿರುವ ಘಟನೆ ಪಶ್ಚಿಮ ಚಂಪಾರನ್ ಜಿಲ್ಲೆಯ ಬಗಾಹ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಈ ವಿಷಯವನ್ನು ಮುಚ್ಚಿಡಲು ಸಂತ್ರಸ್ತೆಯ ಮನೆಯವರ ಮೇಲೆ ಒತ್ತಡ ಹೇರಿ ಪಂಚಾಯಿತಿ ನಡೆಸಿರುವುದಾಗಿ ತಿಳಿದುಬಂದಿದೆ. ವೃದ್ಧ ತನ್ನ ಮನೆಯಲ್ಲಿ ಯಾರೂ ಇಲ್ಲ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಹಾರ ತಯಾರಿಸಿಕೊಡಲು ಕರೆಸಿಕೊಂಡಿದ್ದ. ಬಾಲಕಿ ತಂದೆಯ ಒಪ್ಪಿಗೆಯಂತೆ ಆಹಾರ ಮಾಡಿಕೊಡಲು ಸಂಬಂಧಿ ವೃಧ್ದನ ಮನೆಗೆ

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ವೃದ್ಧ| ಪಂಚಾಯತಿ ನಡೆಸಿ ಮುಚ್ಚಿಹಾಕಲು ಯತ್ನ! Read More »

ಮಹಿಳೆಯಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಹತ್ಯೆಗೈಯಲು ಯತ್ನಿಸಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ದುಷ್ಕರ್ಮಿಗಳು ಆಕೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯ್ಯಲು ಯತ್ನಿಸಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಮಕ್ಕಾನ ಪೊಲೀಸ್ ಠಾಣೆಯ ದಕ್ಷಿಣ 24 ಪ್ಯಾರಗಾನ್ಸ್ ನಲ್ಲಿ ಏಪ್ರಿಲ್ 8ರಂದು ಈ ಘಟನೆ ನಡೆದಿದೆ. ಮನೆಯಲ್ಲಿ ಒಬ್ಬಳೇ ಇದ್ದ ಮಹಿಳೆ ಶೌಚಾಲಯಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಆಕೆಯನ್ನು 5 ಮಂದಿ ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಎರಡನೇ ಮಹಡಿ ಮೇಲೆ ಹೊತ್ತೊಯ್ದ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ

ಮಹಿಳೆಯಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಹತ್ಯೆಗೈಯಲು ಯತ್ನಿಸಿದ ದುಷ್ಕರ್ಮಿಗಳು Read More »

“ಮಧ್ಯಂತರ” ಕಿರುಚಿತ್ರ ಪೋಸ್ಟರ್ ರಿಲೀಸ್

ಸಮಗ್ರ ನ್ಯೂಸ್: ಹವ್ಯಾಸಿ ಕಲಾಬಳಗದ ನೇತೃತ್ವದಲ್ಲಿ ತಯಾರಾಗುತ್ತಿರುವ “ಮಧ್ಯಂತರ” ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು “ಐಡಿಯಾ ಬಾಸ್ಕೆಟ್” ಯೂ ಟ್ಯೂಬ್ ಚಾನಲ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕೆ ಡಾ. ಆದಿತ್ಯ ಭಟ್ ಚಣಿಲ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಇದೇ 14ರಂದು ರಿಲೀಸ್ ಆಗಲಿದೆ.

“ಮಧ್ಯಂತರ” ಕಿರುಚಿತ್ರ ಪೋಸ್ಟರ್ ರಿಲೀಸ್ Read More »

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ

ಸಮಗ್ರ ನ್ಯೂಸ್: ಯಕ್ಷಗಾನ ರಂಗದ ತೆಂಕುತಿಟ್ಟಿನ ಅಗ್ರಗಣ್ಯ ಬಲಿಪ ಪರಂಪರೆಯ ಕೊಂಡಿಯೊಂದು ಕಳಚಿ ಹೋಗಿದ್ದು, ಭಾಗವತಿಕೆಯಲ್ಲಿ ಹೆಸರಾಗಿದ್ದ ಬಲಿಪ ಪ್ರಸಾದ ಭಾಗವತರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತನ್ನ ಪರಂಪರೆಯ ವಿಶಿಷ್ಟ ಕಂಚಿನ ಕಂಠದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಪ್ರಸಾದ್ ಅವರು ತಂದೆ ಖ್ಯಾತ

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ Read More »

17ರ ಯುವತಿಯ ಮೇಲೆ‌ ಕೆಲಸದ ಆಮಿಷ ಒಡ್ಡಿ‌ ಒಂದೂವರೆ ವರ್ಷದಿಂದ ನಿರಂತರ ಅತ್ಯಾಚಾರ| 15 ಮಂದಿಯಿಂದ ಅಮಾನವೀಯ ದೌರ್ಜನ್ಯ, ಕೆಲ ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಕೆಲಸ ಕೊಡಿಸುವುದಾಗಿ ನಂಬಿಸಿ 17 ವರ್ಷದ ಅಪ್ರಾಪ್ತೆಯ ಮೇಲೆ ಒಂದೂವರೆ ವರ್ಷ ಅತ್ಯಾಚಾರ ಎಸಗಿರುವ ಆರೋಪದ ಮೇಲೆ 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಒಟ್ಟು 15 ಮಂದಿ ಹುಡುಗಿಯ ಮೇಲೆ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ. ಸಂತ್ರಸ್ತೆ ಬಡ ಕುಟುಂಬದವಳಾಗಿದ್ದು, ಇದೀಗ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ. ಬಂಧಿತರನ್ನು ಕುಮಾರಮಂಗಳಂ ಮೂಲದ ಬ್ರೋಕರ್​​ ರಘು (ಬೇಬಿ 51), ವೆಲ್ಲರಮ್​ಕುಲು ಮೂಲದ ಕೆಎಸ್​ಇಬಿ ಉದ್ಯೋಗಿ ವಲಂಪಿಲಿಲ್ ಸಜೀವ್​ (55), ಕೊಟ್ಟಾಯಂ, ರಾಮಪುರಂನ ಮನಿಯಾದುಪರದ ಕಲ್ಲುರ್ಕಾಡು ಕೊಟ್ಟೂರು ಥಾಂಕಚನ್​

17ರ ಯುವತಿಯ ಮೇಲೆ‌ ಕೆಲಸದ ಆಮಿಷ ಒಡ್ಡಿ‌ ಒಂದೂವರೆ ವರ್ಷದಿಂದ ನಿರಂತರ ಅತ್ಯಾಚಾರ| 15 ಮಂದಿಯಿಂದ ಅಮಾನವೀಯ ದೌರ್ಜನ್ಯ, ಕೆಲ ಆರೋಪಿಗಳ ಬಂಧನ Read More »

ನ್ಯಾಶನಲ್ ಹೆರಾಲ್ಡ್‌ ಪ್ರಕರಣ; ಕಾಂಗ್ರೆಸ್ ನಾಯಕ ಖರ್ಗೆಗೆ ಇಡಿ ಶಾಕ್

ಸಮಗ್ರ ನ್ಯೂಸ್: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೋಮವಾರ ನೋಟಿಸ್ ಜಾರಿಗೊಳಿಸಿದ್ದಾರೆ. ಕಳೆದ 1937ರ ನವೆಂಬರ್ 20ರಂದು ಅಸೋಸಿಯೇಟೆಡ್‌ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯು ಬಹಾದ್ದೂರ್ ಶಾ ಜಫರ್ ಮಾರ್ಗ್, ನವದೆಹಲಿ ನೊಂದಾಣಿ ವಿಳಾಸ ಮತ್ತು 5 ಲಕ್ಷ ರೂಪಾಯಿ ಬಂಡವಾಳದ ಮೂಲಕ ಅಸ್ತಿತ್ವಕ್ಕೆ ಬಂದಿತ್ತು. ಈ ಸಂಸ್ಥೆಗೆ ಜವಾಹರ್ ಲಾಲ್ ನೆಹರೂ ಮಾರ್ಗದರ್ಶಿ ಹಾಗೂ ಮುಖ್ಯಸ್ಥರಾಗಿದ್ದರು. ಐದು ಸಾವಿರ ಸ್ವಾತಂತ್ರ್ಯ

ನ್ಯಾಶನಲ್ ಹೆರಾಲ್ಡ್‌ ಪ್ರಕರಣ; ಕಾಂಗ್ರೆಸ್ ನಾಯಕ ಖರ್ಗೆಗೆ ಇಡಿ ಶಾಕ್ Read More »

ಉತ್ತರಾಖಂಡ : ಭೀಕರ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ವನ್ಯಸಂಕುಲ ನಾಶ

ಸಮಗ್ರ ನ್ಯೂಸ್: ಉತ್ತರಾಖಂಡ್ ನ ತೆಹ್ರಿ ಜಿಲ್ಲೆಯ ತಿವಾರ್ಗಾಂವ್ ಮೇಲಿನ ಕಾಡುಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಅರಣ್ಯ ಸಂಪತ್ತು ನಾಶವಾಗಿದೆ. ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಸಂಜೆಯ ವೇಳೆಗೆ ಇಡೀ ಕಾಡನ್ನು ಆವರಿಸಿದೆ ಎಂದು ತಿಳಿದುಬಂದಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ‌ ಕಾರಣ ಕಾಳ್ಗಿಚ್ಚು ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದಾಗ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ರೇಂಜರ್ ಆಶಿಶ್ ಡಿಮ್ರಿ ನೇತೃತ್ವದಲ್ಲಿ ಬೆಂಕಿ ನಂದಿಸಲು ಯತ್ನಿಸಿದ್ದು, ಈ ವೇಳೆ ಹತ್ತು ಹೆಕ್ಟೇರ್

ಉತ್ತರಾಖಂಡ : ಭೀಕರ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ವನ್ಯಸಂಕುಲ ನಾಶ Read More »

ಸುಳ್ಯ: ನಿಯಂತ್ರಣ ತಪ್ಪಿದ ಕಾರು ಪಲ್ಟಿ; ನಾಲ್ಕು ಮಂದಿ ಜಖಂ

ಸಮಗ್ರ ನ್ಯೂಸ್: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸುಳ್ಯದ ಹಳೆಗೇಟು ಬೆಟ್ಟಂಪಾಡಿ ಮೂಲದ ನಾಲ್ವರು ಗಾಯಗೊಂಡ ಘಟನೆ ಇಂದು ವರದಿಯಾಗಿದೆ. ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್ ಎಂಬುವವರು ತಮ್ಮ ಸಂಬಂಧಿಕರನ್ನು ವಿದೇಶಕ್ಕೆ ಬೀಳ್ಕೊಡಲು ಕಣ್ಣೂರು ಏರ್ಪೋರ್ಟಿಗೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರಿನಲ್ಲಿ ಚಾಲಕ ಶರೀಫ್ ಹಾಗೂ ಬಶೀರ್, ಅವರ ಪತ್ನಿ, ಮತ್ತೋರ್ವ ಕುಟುಂಬದ ಮಹಿಳೆ, ಹಾಗೂ ಏಳು ವರ್ಷದ ಮಗುವೊಂದು ಇದ್ದರು.ಕಾರು ಅಪಘಾತದಿಂದ ನಾಲ್ವರಿಗೆ ಸಣ್ಣಪುಟ್ಟ

ಸುಳ್ಯ: ನಿಯಂತ್ರಣ ತಪ್ಪಿದ ಕಾರು ಪಲ್ಟಿ; ನಾಲ್ಕು ಮಂದಿ ಜಖಂ Read More »