ಮಡಿಕೇರಿ: ಮಹಡಿಯಿಂದ ಬಿದ್ದು ಮಗು ಸಾವು
ಸಮಗ್ರ ನ್ಯೂಸ್: ಆಟವಾಡುತ್ತಿದ್ದ ಮಗುವೊಂದು ಮಹಡಿ ಮೇಲಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೂಕಿನ ವಿರಾಜಪೇಟೆಯಲ್ಲಿ ನಡೆದಿದೆ. ಇಲ್ಲಿನ ಗೌರಿಕೆರೆ ಬಡಾವಣೆ ನಿವಾಸಿ ಮುನೀರ್ ಎಂಬವರ ಪುತ್ರ ನಾಲ್ಕು ವರ್ಷದ ತಫೀನ್ ಮೃತಪಟ್ಟ ಬಾಲಕ. ಇಂದು ಮಧ್ಯಾಹ್ನ ಸುಮಾರಿಗೆ ಘಟನೆ ಸಂಭವಿಸಿದ್ದು, ಆಯತಪ್ಪಿ ಕೆಳಬಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಫಲಿಸದೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಮಡಿಕೇರಿ: ಮಹಡಿಯಿಂದ ಬಿದ್ದು ಮಗು ಸಾವು Read More »








