Editor

ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ| 40% ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ಕಟ್ಟಾಳು

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧಿಸಿದಂತೆ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಕ್ಕೆ ಕೆ.ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ತೆರಳಿ ಅಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಶುಕ್ರವಾರ ಸಿಎಂ ಭೇಟಿಯಾಗಿ ತಮ್ಮ ಸಚಿವ

ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ| 40% ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ಕಟ್ಟಾಳು Read More »

ಮಗನ ಒಂದು ವಿಡಿಯೋ ಕ್ಲಿಪ್ ನಿಂದ ಅಪ್ಪನ ಅಂಗಡಿ ಮುಂದೆ ಗ್ರಾಹಕರ ಕ್ಯೂ| ಇದೀಗ ವಿಡಿಯೋ ಜಾಲತಾಣದಲ್ಲಿ ಭಾರೀ ಭಾರೀ ವೈರಲ್|

ಸಮಗ್ರ ನ್ಯೂಸ್: ಬಾಲಕನೊಬ್ಬ ತನ್ನ ತಂದೆಯ ರಸ್ತೆ ಬದಿ ವ್ಯಾಪಾರಕ್ಕೆ ಬೆಂಬಲಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮಾಡಿ ಬಳಿಕ ಅಂಗಡಿ ಮುಂದೆ ಗ್ರಾಹಕರು ಕ್ಯೂ ನಿಂತಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇದು ತಂದೆಯ ವ್ಯಾಪಾರಕ್ಕೆ ಉತ್ತಮ ಗ್ರಾಹಕರನ್ನು ಸೆಳೆಯಲು ಕಾರಣವಾಗಿದೆ. ಹೈದರಾಬಾದಿನ ಮೋತಿ ನಗರದಲ್ಲಿ ಹಲೀಮ್‌ ಸ್ಟಾಲ್‌ ಇಟ್ಟುಕೊಂಡಿರುವ ವರ್ತಕರೊಬ್ಬರ ಮಗ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ದಲ್ಲಿ ತನ್ನ ತಂದೆಯ ವ್ಯಾಪಾರವನ್ನು ವಿವರಿಸಿ, ಬೆಂಬಲಿಸುವಂತೆ ಜಾಹಿರಾತು ಮಾಡಿದ್ದಾನೆ. ಬಾಲಕನ ಈ ವಿಡಿಯೋ ಹೈದರಬಾದ್‌ ನಿವಾಸಿಗಳ

ಮಗನ ಒಂದು ವಿಡಿಯೋ ಕ್ಲಿಪ್ ನಿಂದ ಅಪ್ಪನ ಅಂಗಡಿ ಮುಂದೆ ಗ್ರಾಹಕರ ಕ್ಯೂ| ಇದೀಗ ವಿಡಿಯೋ ಜಾಲತಾಣದಲ್ಲಿ ಭಾರೀ ಭಾರೀ ವೈರಲ್| Read More »

ಮಂಗಳೂರು: ಬುರ್ಖಾದೊಳಗೆ ಸಾಗಾಟವಾಗ್ತಿತ್ತು ಲಕ್ಷಮೌಲ್ಯದ ಚಿನ್ನಾಭರಣ| ವಿದೇಶಿ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಕೈ ವಶ

ಸಮಗ್ರ ನ್ಯೂಸ್: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಪ್ರಯಾಣಿಕನಿಂದ 5.34 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಬುರ್ಖಾಗಳಲ್ಲಿ ಪ್ರೆಸ್ ಬಟನ್‌ನಲ್ಲಿ ಬಚ್ಚಿಟ್ಟ ಸಣ್ಣ ಉಂಗುರದ ಆಕಾರದ ವೃತ್ತಾಕಾರದ ಸ್ಪ್ಲಿಟ್ ವಾಷರ್ ಮಾದರಿಯ ವಸ್ತುಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕ ಯತ್ನಿಸಿದ್ದ. ಈ ಘಟನೆ ಏಪ್ರಿಲ್ 14 ರಂದು ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು: ಬುರ್ಖಾದೊಳಗೆ ಸಾಗಾಟವಾಗ್ತಿತ್ತು ಲಕ್ಷಮೌಲ್ಯದ ಚಿನ್ನಾಭರಣ| ವಿದೇಶಿ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಕೈ ವಶ Read More »

ಮಂಗಳೂರು: ಹಂಪನಕಟ್ಟೆ ಅಪಘಾತ ಪ್ರಕರಣ| ಬಸ್ ಚಾಲಕನ ಬಂಧನ

ಸಮಗ್ರ ನ್ಯೂಸ್: ನಗರದ ಹಂಪನಕಟ್ಟೆ ಬಳಿ ಬೈಕ್‌ಗೆ ಖಾಸಗಿ ಬಸ್ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಸ್ ಚಾಲಕ ಬಿಜು ಮೋನುವಿನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಾಲಕನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಎ.26ರ ವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುರತ್ಕಲ್ ಜನತಾ ಕಾಲನಿಯಿಂದ ರೂಟ್ ನಂಬರ್ 45 ಜಿ ಸಂಖ್ಯೆಯ ಖಾಸಗಿ ಬಸ್‌ನ್ನು

ಮಂಗಳೂರು: ಹಂಪನಕಟ್ಟೆ ಅಪಘಾತ ಪ್ರಕರಣ| ಬಸ್ ಚಾಲಕನ ಬಂಧನ Read More »

ಒಮ್ಮೆ ನಡೆಸುವ ವ್ಯಭಿಚಾರಕ್ಕೆ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

ಸಮಗ್ರ ನ್ಯೂಸ್: ಯಾವಾಗಲಾದರೂ ಒಮ್ಮೆ ಪ್ರತ್ಯೇಕವಾಗಿ ನಡೆಸುವ ವ್ಯಭಿಚಾರವು, ವ್ಯಭಿಚಾರದ ಜೀವನವೆಂದು (ಲಿವಿಂಗ್ ಇನ್ ಅಡಲ್ಟ್ರಿ) ಪರಿಗಣನೆಯಾಗುವುದಿಲ್ಲ. ಹಾಗಾಗಿ, ವಿಚ್ಛೇದನದ ಬಳಿಕವೂ ಮಹಿಳೆಯನ್ನು ಜೀವನಾಂಶದಿಂದ ದೂರವಿಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಚ್ಛೇದನದ ಬಳಿಕ ಸಿಆರ್‌ಪಿಸಿ (ಕ್ರಿಮಿನಲ್‌ ಪ್ರೊಸಿಜರ್‌ ಕೋಡ್‌) ಸೆಕ್ಷನ್ 125ರ ಅಡಿ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲು ಕೋರಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ನಿರಂತರವಾಗಿ ನಡೆಸುವ

ಒಮ್ಮೆ ನಡೆಸುವ ವ್ಯಭಿಚಾರಕ್ಕೆ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್ Read More »

ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ನಾಮಕರಣ

ಶ್ರೀ ನಾರಾಯಣ ಗುರುಗಳ ವಿಚಾರಧಾರೆಯೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದು: ಸುನಿಲ್ ಕುಮಾರ್ ಮಂಗಳೂರು: ಮಹಾನಗರ ಪಾಲಿಕೆಯ (ಎಂಸಿಸಿ) ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ ನಂತರ ಲೇಡಿಹಿಲ್ ವೃತ್ತವನ್ನು ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡಲಾಗಿದ್ದು, ಏಪ್ರಿಲ್ 14 ರಂದು ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ಕುಮಾರ್‌ ಫಲಕ ಅನಾವರಣಗೊಳಿಸಿದರು. ಸುನೀಲ್ ಕುಮಾರ್ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಚಾರಧಾರೆಯೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದು, ಲೇಡಿಹಿಲ್ ವೃತ್ತವನ್ನು ಬ್ರಹ್ಮ

ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ನಾಮಕರಣ Read More »

ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ

ಸುಳ್ಯ: ಟಿವಿ ಚಾನಲ್ ಗೆ ಸೇರಿದ ಕಾರ್ ಅಜ್ಜಾವರ ಗ್ರಾಮದ ಎಂಬಲ್ಲಿ ಇಂದು ಮುಂಜಾನೆ ಪಲ್ಟಿ ಯಾಗಿ ಸವಾರರು ಜೀವಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಕಾರು ಸುವರ್ಣ ಟಿವಿ ಚಾನೆಲ್ ಮಲಯಾಳಂ ಸಂಸ್ಥೆಗೆ ಸೇರಿದಾಗಿದ್ದು, ಬೆಂಗಳೂರಿನಿಂದ ಸುಳ್ಯ, ಅಜ್ಜಾವರ ಮಾರ್ಗವಾಗಿ ಕೇರಳದ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದಿಂದ ಸವಾರರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ Read More »

ಸುಳ್ಯ: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ – ಜ್ಯೋತಿಷಿ ಸಹಿತ ಮೂವರಿಗೆ ಗಂಭೀರ ಗಾಯ

ಸುಳ್ಯ: ಕಲ್ಲುಗುಂಡಿ ಪೇಟೆಯ ಬಳಿ ಸೇತುವೆಯ ತಡೆಗೋಡೆಗೆ ಮಾರುತಿ 800 ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯ ಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕಲ್ಲುಗುಂಡಿ ನಿವಾಸಿ ಜ್ಯೋತಿಷಿ ಗುರುರಾಜ್, ಸಂಪಾಜೆ ಮೂಲದ ಪ್ರೇಮ್, ಹಾಗೂ ಮಾತೋರ್ವರೂ ಸೇರಿ ಮೂವರಿಗೆ ಗಂಭೀರ ಗಾಯಗೊಂಡವರು. ಸಂಪಾಜೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಇದಾಗಿದ್ದು, ಮಳೆ ಬರುತ್ತಿದ್ದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಗಾಯಾಗೊಂಡ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಸುಳ್ಯ: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ – ಜ್ಯೋತಿಷಿ ಸಹಿತ ಮೂವರಿಗೆ ಗಂಭೀರ ಗಾಯ Read More »

ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ವಿದಿವಶ

ಸಮಗ್ರ ನ್ಯೂಸ್: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(67) ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮನೆಯಲ್ಲಿ ಬೆಳಗ್ಗೆ 6.45ಕ್ಕೆ ಹೃದಯಾಘಾತದಿಂದ ಕುಸಿದುಬಿದ್ದು ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದಾರೆ. ತಕ್ಷಣವೇ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಪಿಐಎಂ ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು. ಇತ್ತೀಚೆಗೆ CPIM ಪಕ್ಷ ತೊರೆದು ತಮ್ಮದೆ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿ, ಸಾಮಾಜಿಕ ಹೋರಾಟ ಆರಂಭಿಸಿದ್ದರು. ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದ ಜಿ.ವಿ.ಎಸ್ ನಿಧನದಿಂದ ಅಪಾರ ಬೆಂಬಲಿಗರಲ್ಲಿ ದುಃಖ ಮಡುಗಟ್ಟಿದೆ.

ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ವಿದಿವಶ Read More »

“ಮಧ್ಯಂತರ” ಕಿರುಚಿತ್ರ ಟೀಸರ್ ರಿಲೀಸ್

ಸಮಗ್ರ ನ್ಯೂಸ್: ಹವ್ಯಾಸಿ ಕಲಾಬಳಗದ ನೇತೃತ್ವದಲ್ಲಿ ತಯಾರಾಗುತ್ತಿರುವ “ಮಧ್ಯಂತರ” ಕಿರುಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರವನ್ನು “ಐಡಿಯಾ ಬಾಸ್ಕೆಟ್” ಯೂ ಟ್ಯೂಬ್ ಚಾನಲ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕೆ ಡಾ. ಆದಿತ್ಯ ಭಟ್ ಚಣಿಲ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಕುತೂಹಲ ಸೃಷ್ಟಿಸುತ್ತಿದ್ದು, ನಿರೀಕ್ಷೆ ಹುಟ್ಟಿಸುವಂತಿದೆ. ಎರಡು ನಿಮಿಷಗಳ ಟೀಸರ್ ಉತ್ತಮ ಕ್ಯಾಮೆರಾ ವರ್ಕ್ ಹೊಂದಿದೆ.

“ಮಧ್ಯಂತರ” ಕಿರುಚಿತ್ರ ಟೀಸರ್ ರಿಲೀಸ್ Read More »