ಅರಣ್ಯಕ್ಕೆ ಬೆಂಕಿ ಹಾಕಿದವರು ಸರ್ವನಾಶವಾಗಲೆಂದು ದೇವರಿಗೆ ಹರಕೆ ಹೊತ್ತ ಗ್ರಾಮಸ್ಥರು| ಸಿಂಧಿಗೆರೆ ಪರಿಸರಾಸಕ್ತರಿಂದ ವಿಶಿಷ್ಟ ಬ್ಯಾನರ್ ಅಳವಡಿಕೆ
ಸಮಗ್ರ ನ್ಯೂಸ್: ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಇಲಾಖೆ ವ್ಯಾಪ್ತಿಯ ಕಾರ್ಯಗಳ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ. ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಢನಂಬಿಕೆಯ ಕಾರಣಕ್ಕೆ ಇನ್ನು ಅಲ್ಲಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿದ್ದು ತಾಲೂಕಿನ ಸಿಂದಿಗೆರೆ ಗ್ರಾಮಸ್ಥರ ಪರಿಸರಾಸಕ್ತರು ಈಗ ದೇವರ ಮೊರೆ ಹೋಗಿದ್ದಾರೆ. ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ದೇವರ ಮೊರೆ ಅಂದುಕೊಂಡರೆ ಇದು ನಿಜಕ್ಕೂ ಸತ್ಯ. ಇತ್ತೀಚೆಗೆ ಅರಣ್ಯ ಇಲಾಖೆ ಚಿಕ್ಕಮಗಳೂರು ವಲಯ ತಮ್ಮ










