Editor

ಹಾವೇರಿಯಲ್ಲಿ ಕೈಗಾರಿಕಾ ಟೌನ್‌ಶಿಪ್- ಸಿ.ಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿ ಮಾಡಲಾಗುವುದು. ಜಿಲ್ಲೆಯಲ್ಲಿ ಒಂದು ಸಾವಿರ ಎಕರೆಯ ಕೈಗಾರಿಕಾ ಟೌನ್ ಶಿಪ್‌ನ್ನು ಪ್ರಾರಂಭ ಆಗಲಿದೆ. ಹೆಚ್ಚು ಉದ್ಯೋಗ ನೀಡುವ ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಹೆಚ್ಚೆಚ್ಚು ಜಿಲ್ಲೆಗೆ ತರಲಾಗುವುದು. ಶಿಗ್ಗಾಂವಿ ತಾಲೂಕನ್ನು ಭಾರತ ದೇಶದಲ್ಲೇ ಟೆಕ್ಸಟೈಲ್ಸ್ ಹಬ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಮೆಗಾ ಡೈರಿ ಅನುಮೋದನೆ ಕೊಟ್ಟಿದ್ದೇವೆ. ಹಾವೇರಿಯ ಹಾಲು ಒಕ್ಕೂಟದ ಕೆಲಸ ಈಗಾಗಲೆ ಪ್ರಾರಂಭ ಆಗಿದೆ. ಹಾಲು ಒಕ್ಕೂಟಕ್ಕಾಗಿ ನಾನು ಹೋರಾಟ ಮಾಡಿದ್ದೆ.

ಹಾವೇರಿಯಲ್ಲಿ ಕೈಗಾರಿಕಾ ಟೌನ್‌ಶಿಪ್- ಸಿ.ಎಂ ಬೊಮ್ಮಾಯಿ Read More »

ರಷ್ಯಾ ಉಕ್ರೇನ್ ಯುದ್ಧ – ಖೆರ್ಸಾನ್ ರಷ್ಯಾ ವಶ| ರುಬೆಲ್ ಖೆರ್ಸಾನ್ ಹೊಸ‌ ಕರೆನ್ಸಿ

ಸಮಗ್ರ ನ್ಯೂಸ್: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದ ಗುರುವಾರದ ಘೋಷಣೆಯ ಪ್ರಕಾರ ಖೆರ್ಸಾನ್ ರಷ್ಯಾ ಪಡೆಯ ಸಂಪೂರ್ಣ ನಿಯಂತ್ರಣದಲ್ಲಿದೆ. ಹೀಗಾಗಿ ಮೇ 1ರಿಂದ ರಷ್ಯಾದ ರುಬೆಲ್‌ ಖೆರ್ಸಾನ್‌ನ ಅಧಿಕೃತ ಕರೆನ್ಸಿಯಾಗಿರಲಿದೆ. ಅಲ್ಲಿನ ಜನರಿಗೆ ಕರೆನ್ಸಿ ಬದಲಾವಣೆ ಮಾಡಿಕೊಳ್ಳಲು 4 ತಿಂಗಳ ಕಾಲಾವಕಾಶ ಕೊಡಲಾಗುವುದು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧ – ಖೆರ್ಸಾನ್ ರಷ್ಯಾ ವಶ| ರುಬೆಲ್ ಖೆರ್ಸಾನ್ ಹೊಸ‌ ಕರೆನ್ಸಿ Read More »

ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಿಧಿವಶ

ಸಮಗ್ರ ನ್ಯೂಸ್: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಯೋಸಹಜ ಖಾಯಿಲೆಗಳಿಂದಾಗಿ ಮಂಗಳವಾರ(ಎ.26) ಬೆಳಿಗ್ಗೆ ನಿಧನರಾಗಿದ್ದಾರೆ. 81 ವರ್ಷದ ಎಲ್ವೆರಾ, 60ರ ದಶಕದ ಭಾರತ ಹಾಕಿ ವಲಯದಲ್ಲಿ ಬ್ರಿಟ್ಟೊ ಸಹೋದರಿಯರೆಂದೇ (ರೀತಾ ಮತ್ತು ಮೇ) ಪ್ರಸಿದ್ಧಿಯಾಗಿದ್ದ ಮೂವರು ಸಹೋದರಿಯರಲ್ಲಿ ಹಿರಿಯವರು. ಈ ಮೂವರು 1960-67ರವರೆಗ ದೇಶಿ ಟೂರ್ನಿಗಳಲ್ಲಿ ತಮ್ಮದೇ ಪ್ರಾಬಲ್ಯ ಸಾಧಿಸಿ ಕರ್ನಾಟಕ ತಂಡಕ್ಕೆ 7 ರಾಷ್ಟ್ರೀಯ ಚಾಂಪಿಯನ್​ಶಿಪ್ ತಂದುಕೊಟ್ಟಿದ್ದರು. ಎಲ್ವಿರಾ ಭಾರತ ತಂಡವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ್ದಾರೆ.

ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಿಧಿವಶ Read More »

ಮಂಗಳೂರು: ಗುಟ್ಕಾ ಜಗಿದ ಬಸ್ ಚಾಲಕರಿಗೆ 5000 ದಂಡ ವಿಧಿಸಿದ ಆರ್ ಟಿಒ ಅಧಿಕಾರಿಗಳು!

ಸಮಗ್ರ ನ್ಯೂಸ್: ಚಾಲನೆ ವೇಳೆ ಗುಟ್ಕಾ ಜಗಿಯುತ್ತಿದ್ದ ಬಸ್‌ ಚಾಲಕರಿಗೆ‌ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ.ಬಿಜೈ ಬಳಿ ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ ಜಗಿಯುತ್ತ ಅಧಿಕಾರಿಗಳ ಮುಂದೆ ಬಂದರು. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ಇಬ್ಬರು ಚಾಲಕರಿಗೂ ತಲಾ 5,000 ರೂ. ದಂಡ ವಿಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಟಿಒ ಆರ್‌.ಎಂ. ವರ್ಣೇಕರ್‌, “ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ

ಮಂಗಳೂರು: ಗುಟ್ಕಾ ಜಗಿದ ಬಸ್ ಚಾಲಕರಿಗೆ 5000 ದಂಡ ವಿಧಿಸಿದ ಆರ್ ಟಿಒ ಅಧಿಕಾರಿಗಳು! Read More »

ಕೊನೆಗೂ ಬಂಧಿಯಾದ ದಿವ್ಯಾ ಹಾಗರಗಿ| ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆದಿದೆ ಎನ್ನಲಾದ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ದಿವ್ಯ ಹಾಗರಗಿ ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಆಕೆಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದಳು. ದಿವ್ಯಾ ಅವರಿಗಾಗಿ ಸಿಐಡಿ ತಂಡ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿತ್ತು. ಸಾಕಷ್ಟು ದಿನಗಳವರೆಗೆ

ಕೊನೆಗೂ ಬಂಧಿಯಾದ ದಿವ್ಯಾ ಹಾಗರಗಿ| ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ Read More »

ಹಾಡುಹಗಲೇ ಯುವತಿಯ ಮೇಲೆರಗಿದೆ ಕಾಮುಕ ಆಟೋಡ್ರೈವರ್

ಸಮಗ್ರ ನ್ಯೂಸ್: ಯುವತಿ ಮೇಲೆ ಹಾಡಹಗಲೇ ಅತ್ಯಾಚಾರವೆಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಹಳ್ಳಿಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಯುವತಿ ಏಪ್ರಿಲ್​ 26ರಂದು ಕೆಲಸ ಮುಗಿಸಿ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಡಿಸೇಲ್​ ಹಾಕಿಸಬೇಕು ಎಂದು ಆಟೋ ಬೇರೆ ಕಡೆ ತಿರುಗಿಸಿದ್ದ ಆರೋಪಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಯುವತಿ ಮೇಲೆ ಅತ್ಯಾಚಾರ ನಡೆಸುವ ದ್ಯಶ್ಯವನ್ನು ಆಟೋ ಚಾಲಕನ ಸ್ನೇಹಿತ ವಿಡಿಯೋ ಸೆರೆ ಹಿಡಿದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಯುವತಿ

ಹಾಡುಹಗಲೇ ಯುವತಿಯ ಮೇಲೆರಗಿದೆ ಕಾಮುಕ ಆಟೋಡ್ರೈವರ್ Read More »

10 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಾಟ: ಆರೋಪಿ ಅಂದರ್

ಸಮಗ್ರ ನ್ಯೂಸ್: ಕಾಸರಗೋಡು ಡಿ ವೈ ಎಸ್ಪಿ.ವಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಹವಾಜ್ ಕೆ.ಪಿ (28) ಯವರನ್ನು ಬಂಧಿಸಿದ್ದಾರೆ. ಹವಾಜ್ ಕೆ.ಪಿ ಕಾಸರಗೋಡು ರೈಲ್ವೆ ನಿಲ್ದಾಣ ಸಮೀಪದ ನಿವಾಸಿ ಎಂದು ಗುರುತಿಸಲಾಗಿದೆ ಗುರುತಿಸಲಾಗಿದೆ. ಈತ ಕಾಸರಗೋಡಿಗೆ ಮಾದಕ ವಸ್ತುವನ್ನು ದೆಹಲಿಯಿಂದ ತಲಪಿಸುತ್ತಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

10 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಾಟ: ಆರೋಪಿ ಅಂದರ್ Read More »

ಮಂಗಳೂರು: ಬಾಟಲ್, ಚಾಕುವಿನಿಂದ ತಿವಿದು ರೌಡಿಶೀಟರ್ ನ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಮಂಗಳೂರಿನ‌ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ಯುವಕನನ್ನು ತಂಡವೊಂದು ಕೊಲೆಗೈದ ಘಟನೆ ಗುರುವಾರ ನಡೆದಿದೆ. ಕೊಲೆಯಾದ ಯುವಕನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್ ಎನ್ನಲಾಗುತ್ತಿದ್ದು ವೈಯಕ್ತಿಕ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಲ್ಕು ಮಂದಿ ದುಷ್ಕರ್ಮಿಗಳು ಪೂರ್ವದ್ವೇಷದ ಹಿನ್ನೆಲೆಯಲ್ಲಿ ಚಾಕು, ಬಾಟಲಿಯಲ್ಲಿ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು: ಬಾಟಲ್, ಚಾಕುವಿನಿಂದ ತಿವಿದು ರೌಡಿಶೀಟರ್ ನ ಬರ್ಬರ ಹತ್ಯೆ Read More »

ಹೊಸ ಇಲೆಕ್ಟಿಕ್ ಬೈಕ್ ಬಿಡುಗಡೆ ಮಾಡಬೇಡಿ| ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ|

ಸಮಗ್ರ ನ್ಯೂಸ್: ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬೇಡಿ ಎಂದು ಸರ್ಕಾರ ಬೈಕ್ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. ಬೈಕ್‌ಗಳಿಗೆ ಬೆಂಕಿ ತಗುಲುತ್ತಿರುವ, ಕೆಲವರು ಸಾವನ್ನಪ್ಪಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ತಗುಲಿದ ಪ್ರಕರಣಗಳ ಬಗ್ಗೆ ಪ್ರತ್ಯೇಕ ತನಿಖೆಯಾಗಬೇಕು. ಈ ತನಿಖೆ ಪೂರ್ಣಗೊಳ್ಳುವ ತನಕ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದೆ. ಈ

ಹೊಸ ಇಲೆಕ್ಟಿಕ್ ಬೈಕ್ ಬಿಡುಗಡೆ ಮಾಡಬೇಡಿ| ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ| Read More »

ಬಂಟ್ವಾಳ: ಅಕ್ರಮ ದನ ಸಾಗಾಟ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದ ಕುಕ್ಕೆಬೆಟ್ಟು ಎಂಬಲ್ಲಿ ದನಗಳನ್ನು ಪಿಕಪ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾಗ ರಕ್ಷಣೆ ಮಾಡಿದ ಘಟನೆ ತಿಳಿದು ಬಂದಿದೆ. ಜಾನುವಾರುಗಳನ್ನು ಪಿಕಪ್ ವಾಹನವೊಂದರಲ್ಲಿ ಪುತ್ತೂರಿನ ಸಾಜಾ ಎಂಬಲ್ಲಿಂದ ಅಕ್ರಮವಾಗಿ ಸಾಗಿಸುತ್ತಿದ್ದದರ ಬಗ್ಗೆ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದ್ದು, ವಾಹನವನ್ನು ತಡೆದ ಪೊಲೀಸರು ದನಗಳನ್ನು ರಕ್ಷಣೆ ಮಾಡಿದ್ದಾರೆ.

ಬಂಟ್ವಾಳ: ಅಕ್ರಮ ದನ ಸಾಗಾಟ Read More »