Editor

ಭೀಕರ ಅಪಘಾತ; ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸಾವು

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನ ಟೈರ್ ಸಿಡಿದು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಜರಾತ್ ಮೂಲದ ಕಾರು ದಾವಣಗೆರೆ ಕಡೆಯಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಕಾರಿನ ಟೈರ್ ಬ್ಲಾಸ್ಟ್

ಭೀಕರ ಅಪಘಾತ; ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸಾವು Read More »

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ| ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಾಮಾಣಿಕ ಅಭ್ಯರ್ಥಿಗಳು

ಸಮಗ್ರ ನ್ಯೂಸ್: ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿರುವ ಪ್ರಾಮಾಣಿಕ ಪಿಎಸ್​ಐ ಅಭ್ಯರ್ಥಿಗಳು ನಮಗೆ ನ್ಯಾಯಬೇಕು ಯಾರೋ ಮಾಡಿರುವ ತಪ್ಪಿಗೆ, ನಮಗೆ ಈ ರೀತಿ ಯಾಕೆ ಅನ್ಯಾಯ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತಂತೆ ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್​ ಬಳಿ ಉಪವಾಸ ಕೈಗೊಳ್ಳಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಪಿಎಸ್‌ಐ ಎಕ್ಸಾಂನಲ್ಲಿ ನಡೆದಿದೆ ಎನ್ನಲಾಗಿರುವ

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ| ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಾಮಾಣಿಕ ಅಭ್ಯರ್ಥಿಗಳು Read More »

ಇಂದು ವರ್ಷದ ಮೊದಲ ಸೂರ್ಯಗ್ರಹಣ| ಗ್ರಹಣದಂದೇ ಶನಿ ಅಮಾವಾಸ್ಯೆ|

ಸಮಗ್ರ ನ್ಯೂಸ್: ನಭೋಮಂಡಲದ ಕೌತುಕ, ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಕೆಟ್ಟ ಪರಿಣಾಮ ಬೀರುತ್ತದೆ ಅಂತಾರೆ. ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ. ಏಪ್ರಿಲ್ 30ರಂದು ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ.

ಇಂದು ವರ್ಷದ ಮೊದಲ ಸೂರ್ಯಗ್ರಹಣ| ಗ್ರಹಣದಂದೇ ಶನಿ ಅಮಾವಾಸ್ಯೆ| Read More »

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ‌ ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರನ್ನು ವಗ್ಗ ಸಮೀಪದ ಕಾಡಬೆಟ್ಟು‌ನಿವಾಸಿ ಯೋಗೀಶ್ ಎಂದು ಗುರುತಿಸಲಾಗಿದೆ ಇವರು ಎ.28 ರಂದು ಸಂಜೆ ವೇಳೆ‌ ಮನೆಯ‌ ಅಂಗಳದಲ್ಲಿದ್ದ ತೆಂಗಿನ ಮರದಿಂದ ಕಾಯಿ ಕೊಯ್ಯಲೆಂದು ಮರ ಏರಿದ್ದವರು, ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣ‌ ಅವರನ್ನು ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ‌ಪ್ರಕರಣ ದಾಖಲಾಗಿದೆ.

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು Read More »

ತುಮಕೂರು: ಭೀಕರ ಅಪಘಾತದಲ್ಲಿ ನವವಿವಾಹಿತ ಸೇರಿ ಮೂವರು ಸಾವು| ನವವಧು ಗಂಭೀರ

ಸಮಗ್ರ ನ್ಯೂಸ್: ಲಾರಿ ಹಾಗೂ ಇವೋವಾ ಕಾರಿನ ನಡುವೆ ತುಮಕೂರಿನ ಚಿಕ್ಕ ಶೆಟ್ಟಿ ಕೆರೆ ಬಳಿ ಡಿಕ್ಕಿ ಸಂಭವಿಸಿದ್ದು, ದುರ್ಘಟನೆಯಲ್ಲಿ ನವ ವರ ಸೇರಿ ಮೂವರು ದರ್ಮರಣವನ್ನಪ್ಪಿದ್ದಾರೆ. ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರ್ತಿಸಲಾಗಿದೆ. ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್​ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ವಿವಾಹವಾಗಿತ್ತು. ಮನೆಗೆ

ತುಮಕೂರು: ಭೀಕರ ಅಪಘಾತದಲ್ಲಿ ನವವಿವಾಹಿತ ಸೇರಿ ಮೂವರು ಸಾವು| ನವವಧು ಗಂಭೀರ Read More »

ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ಮುಖಾಮುಖಿ – ಬೈಕ್ ಸವಾರನಿಗೆ ಗಾಯ

ಸಮಗ್ರ ನ್ಯೂಸ್: ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ತಾಯಿ, ಮಗ ಗಾಯಗೊಂಡಿರುವ ಘಟನೆ ಪುತ್ತೂರಿನ ನೆಹರೂನಗರ ಬಳಿ ನಡೆದಿದೆ. ನೆಹರೂ ನಗರ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿಯ ಸರ್ವಿಸ್ ಸ್ಟೇಷನ್ ಎದುರು ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ದಾರಂದಕುಕ್ಕು ನಿವಾಸಿ ಅಭಿಷೇಕ್ ಕೆ.ಎಸ್(24ವ)ಮತ್ತು ಹಿಂಬದಿ ಸವಾರೆಯಾಗಿದ್ದ ಅವರ ತಾಯಿ ಭಾರತಿ ಕೆ. ಎಸ್. (49)ರವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ

ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ಮುಖಾಮುಖಿ – ಬೈಕ್ ಸವಾರನಿಗೆ ಗಾಯ Read More »

ಮಣಿಪಾಲ: ಬಾಡಿಗೆ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ

ಸಮಗ್ರ ನ್ಯೂಸ್: :  ಕಾರಿನ ಚಾಲಕನನ್ನು ಬಾಡಿಗೆಗೆ ಕರೆದೊಯ್ದು ಬಳಿಕ ಬೆದರಿಸಿ , ಹಲ್ಲೆಗೈದು ಸುಲಿಗೆ ಮಾಡಿದ ಘಟನೆ ನಡೆದಿದೆ. ಬಡಗಬೆಟ್ಟುವಿನ ಶಾಂತಿನಗರದ ಶ್ರೀಧರ ಭಕ್ತ(61) ಕಾರು ಚಾಲಕರಾಗಿದ್ದು, ಎ.27 ರಂದು ರಾತ್ರಿ ಈ ಘಟನೆ ನಡೆದಿದೆ. ಶ್ರೀಧರ್ ಅವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ಸುಮಾರು 35ರಿಂದ 45 ವರ್ಷ ಪ್ರಾಯದ ತುಳು ಮಾತನಾಡುವ ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು.

ಮಣಿಪಾಲ: ಬಾಡಿಗೆ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ Read More »

ಠಾಣೆಯಲ್ಲೇ ದೂರುದಾರ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸಪ್ಪ

ಸಮಗ್ರ ನ್ಯೂಸ್: ಠಾಣೆಯೊಳಗೆ ಮಹಿಳಾ ದೂರುದಾರರಿಂದ ಮಸಾಜ್ ಮಾಡಿಸಿಕೊಂಡಿದ್ದ ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ರಾಜ್ಯದ ಸಹರ್ಸಾ ಜಿಲ್ಲೆಯಲ್ಲಿ ವರದಿಯಾಗಿದ್ದು, ಮಹಿಳಾ ದೂರುದಾರರಿಂದ ಪೊಲೀಸ್ ಮಸಾಜ್ ಮಾಡಿಸಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಔಟ್‍ಪೋಸ್ಟ್‌ನ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಅವರು ಫೋನ್‍ನಲ್ಲಿ ಮಾತನಾಡುತ್ತಾ ಮಹಿಳೆಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಪೊಲೀಸ್ ಔಟ್‍ಪೋಸ್ಟ್‌ನಲ್ಲಿರುವ ವಸತಿ ಕ್ವಾರ್ಟರ್‌ನಿಂದ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ.

ಠಾಣೆಯಲ್ಲೇ ದೂರುದಾರ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸಪ್ಪ Read More »

ಪಿಎಸ್ಐ ನೇಮಕಾತಿ ರದ್ದು; ಮರು ಪರೀಕ್ಷೆಗೆ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದುಗೊಳಿಸಿ ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ ಮಾಡಲಾಗಿದೆ. ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ,ಮರು ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಯಾರೇ ಇರಲಿ ಎಷ್ಟೇ ಪ್ರಭಾವಿಗಳು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 54289 ಮಂದಿ ಅರ್ಭಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಇದ್ದ ಆಪಾದಿತರನ್ನು ಬಿಟ್ಟು ,

ಪಿಎಸ್ಐ ನೇಮಕಾತಿ ರದ್ದು; ಮರು ಪರೀಕ್ಷೆಗೆ ಸರ್ಕಾರ ಆದೇಶ Read More »

ಗ್ರಾಮ ಪಂಚಾಯತ್ ಚುನಾವಣೆ-ಅಧಿಸೂಚನೆ ಪ್ರಕಟ

ಸಮಗ್ರ ನ್ಯೂಸ್: ಅವಧಿ ಮುಕ್ತಾಯವಾದ ಒಂದು ಗ್ರಾಮ ಪಂಚಾಯಿತಿ ಹಾಗೂ ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಯಾಗದ ಕಾರಣಕ್ಕೆ ಚುನಾವಣೆ ನಡೆಯದ 2 ಗ್ರಾಮ ಪಂಚಾಯಿತಿಗಳು ಸೇರಿದಂತೆ ವಿವಿಧ ಕಾರಣಗಳಿಗೆ ತೆರವಾಗಿದ್ದ 201 ಗ್ರಾ.ಪಂ. ಸದಸ್ಯ ಸ್ಥಾನಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಮೇ 5- ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ. ಮೇ 10- ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಮೇ 11-ನಾಮಪತ್ರಗಳ ಪರಿಶೀಲನೆ. ಮೇ 13-ನಾಮಪತ್ರ ವಾಪಸ್‌ ಪಡೆಯಲು ಕೊನೆ ದಿನ. ಮೇ

ಗ್ರಾಮ ಪಂಚಾಯತ್ ಚುನಾವಣೆ-ಅಧಿಸೂಚನೆ ಪ್ರಕಟ Read More »