ಮಂಗಳೂರು: ಯಕ್ಷಗಾನ ಒಂದು ಅದ್ಭುತ ಕಲೆ.ನಮ್ಮ ನಾಡಿನ ಸುವಿಧತೆಯನ್ನು ಎತ್ತಿ ಹಿಡಿಯುವ ಕಲೆ . ಇದು ಖಾಲಿ ಪ್ರದರ್ಶನ ಮಾಡಿದರೆ ಸಾಕು.ಈ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ತರಬೇತಿ ನೀಡುವುದು ವಿದ್ಯಾರ್ಥಿಗಳನ್ನು ತಯಾರು ಮಾಡುವಂತಹ ಆಸಕ್ತರನ್ನು ಕೇಂದ್ರಕ್ಕೆ ಆಕರ್ಷಿಸಿ ಪೂರಕ ವಾತಾವರಣ ಸೃಷ್ಟಿ ಮಾಡುವಂತದ್ದು ಮಂಗಳೂರು ವಿಶ್ವವಿದ್ಯಾನಿಲಯದ ಆದ್ಯ ಕರ್ತವ್ಯ. ಎಂದು ಮಂಗಳೂರು ವಿವಿಯ ಮಾನ್ಯ ಕುಲಪತಿಗಳಾದ ಶ್ರೀ ಪಿ ಸುಬ್ರಹ್ಮಣ್ಯ ಎಡಪಡಿತ್ತಾಯ ರವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ” ಯಕ್ಷಬಣ್ಣ” ಯಕ್ಷಗಾನ ಬಣ್ಣಗಾರಿಕೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಸಾಮರ್ಥ್ಯ, ಇಚ್ಚಾ ಶಕ್ತಿ, ಆಸಕ್ತಿ, ಕೌಶಲ್ಯ, ಇದ್ದರೆ ಮಾತ್ರ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಹೆಚ್ಚು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಫೋ ಶ್ರೀಪತಿ ಕಲ್ಲೂರಾಯರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಯಕ್ಷಗಾನ ಕಲಾವಿದರಾದ ಶ್ರೀ ಕೃಷ್ಣ ದೇವಕಾನ ಮತ್ತು ಶ್ರೀ ಜನಾರ್ಧನ ಮಲ್ಲರವರು ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಬಗ್ಗೆ ಮಾಹಿತಿ ನೀಡಿದರು .
ಕೇಂದ್ರದ ಸಿಬ್ಬಂದಿಗಳಾದ ಸತೀಶ್ ಕೊಣಾಜೆ ಧನ್ಯವಾದ ಸಮರ್ಪಿಸಿದರು. ಕೇಂದ್ರದ ವಿದ್ಯಾರ್ಥಿಗಳಾದ ಸೌಮ್ಯ ಪ್ರಾರ್ಥಿಸಿದರು.ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು .ಈ ಸಂದರ್ಭದಲ್ಲಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







