ಫರ್ಪಾರ್ಮೆನ್ಸ್ ನೋಡಿ ಸ್ಪರ್ಧಿಯ ಕೆನ್ನೆ ಕಚ್ಚಿದ ನಟಿ| ವೇದಿಕೆಯ‌ ಮೇಲೆಯೇ‌ ನಡೆಯಿತು ಖುಲ್ಲಂಖುಲ್ಲಾ ಸನ್ನಿವೇಶ…!

Ad Widget ... ..

ಕಿರುತೆರೆಗಳಲ್ಲಿ ದಿನಕ್ಕೊಂದು ರಿಯಾಲಿಟಿ ಶೋಗಳು ಅತಿ ವೇಗದಲ್ಲಿ‌ಶುರುವಾಗುತ್ತಾ ಕಾಂಪಿಟೇಷನ್ ಎನ್ನೋ ಹಾಗಾಗಿದೆ. ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ತರಹೇವಾರಿ ಪ್ರಯತ್ನಗಳು ವಾಹಿನಿಗಳಲ್ಲಿ ನಡೆಯುತ್ತಿವೆ.

Ad Widget

ಇದೀಗ ರಿಯಾಲಿಟಿ ಶೋವೊಂದರಲ್ಲಿ ಕನ್ನಡದ ನಟಿಯೊಬ್ಬರು ಸ್ಪರ್ಧಿಗೆ ಮುತ್ತು ಕೊಟ್ಟು, ಕೆನ್ನೆ ಕಚ್ಚಿರುವ ಘಟನೆ ನಡೆದಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ.

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಶಿಮ್ನಾ ಕಾಸಿಂ ಇದೀಗ ಖಾಸಗಿ ಚಾನೆಲ್ ವೊಂದರ ‘ದಿ ಚಾಂಪಿಯನ್’ ಅನ್ನೋ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಭಾಗಿಯಾಗಿದ್ದಾರೆ. ಆ ಶೋನಲ್ಲಿ ಜಡ್ಜ್ ಗಳಿಗೆ ಇಷ್ಟವಾಗೋ ಪರ್ಫಾಮೆನ್ಸ್ ಕೊಟ್ಟ ಖುಷಿಗೆ ಆ ನಟಿ, ಸ್ಪರ್ಧಿಯ ಕೆನ್ನೆ ಕಚ್ಚಿದ್ದಾರೆ.

ಸಾಮಾನ್ಯವಾಗಿ ಯಾವುದೇ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ತುಂಬಾ ಚೆನ್ನಾಗಿ ಅಭಿನಯಿಸಿದ್ರೆ ಚಪ್ಪಾಳೆ, ಹೊಗಳಿಕೆ, ಗಿಫ್ಟ್ ಗಳು ಸಿಗುತ್ತವೆ. ಆದ್ರೆ ಈ ನಟಿಯ ನಡವಳಿಕೆಗೆ ಒಂದಷ್ಟು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ಜಡ್ಜ್ ಆಗಿ ಈ ರೀತಿ ನಡೆದುಕೊಳ್ಳಬಾರದು ಎಂದು ಕಮೆಂಟ್ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *