ಬೆಂಗಳೂರು : ವಿಧಾನಮಂಡಲ ಅಧಿವೇಶನ ಇಂದು ಆರಂಭವಾಗಿದ್ದು, ಕಲಾಪದಲ್ಲಿ ಇಂದು ಸ್ವಾರಸ್ಯಕರ ಘಟನೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಈಶ್ವರಪ್ಪ ಅವರ ಕುರಿತು ಈಶ್ವರಪ್ಪ ಮತ್ತು ನಂದು ಲವ್ ಅಂಡ್ ಹೇಟ್ ಸಂಬಂಧ ಎಂದು ಹೇಳಿದ್ದು, ಕಲಾಪದಲ್ಲಿ ಸ್ವಾರಸ್ಯ ಸೃಷ್ಟಿಸಿತು.
ವಿಧಾನಸಭೆ ಕಲಾಪದ ವೇಳೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು, ಈ ವೇಳೆ ಅವರು ಮಾತನಾಡಿದ್ದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಆಗ ಸ್ಪೀಕರ್ ಕಾಗೇರಿ ಮೈಕ್ ಸರಿ ಮಾಡಿಕೊಳ್ಳುವಂತೆ ಸೂಚಿಸಿದರಲ್ಲದೇ, ನೀವು ಮಾತನಾಡುತ್ತಿರುವುದು ಈಶ್ವರಪ್ಪ ಅವರಿಗೆ ಕೇಳಿಸುತ್ತಿಲ್ಲ. ನಿಮಗೂ ಈಶ್ವರಪ್ಪಗೂ ಏನಾದರೂ ಸಿಟ್ಟಿದೆಯಾ ಎಂದು ಹೇಳಿದರು. ಆಗ ಸಿದ್ದರಾಮಯ್ಯ ಈಶ್ವರಪ್ಪದು ನಂದು ಲವ್ ಅಂಡ್ ಹೇಟ್ ಸಂಬಂಧ ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು.