ಬಟ್ಟೆ‌ತೊಳೆಯಲು ಹೊಳೆಗೆ ಹೋದ ಮಹಿಳೆ ನಾಪತ್ತೆ

ಸುಳ್ಯ: ಬಟ್ಟೆ ತೊಳೆಯಲೆಂದು ಹೊಳೆಗೆ ತೆರಳಿದ್ದ ಮಹಿಳೆ ನಾಪತ್ತೆಯಾದ ಘಟನೆ ತಾಲೂಕಿನ ಅರಂತೋಡು ಗ್ರಾಮದ ಸಣ್ಣಮನೆ ಎಂಬಲ್ಲಿ ನಡೆದಿದೆ.

Ad Widget ... ..


ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿ ಯವರು ಸೆ.11 ರಂದು ಸಂಜೆ ಅರಂತೋಡಿನ ಮಾಡದಕಾನ ಎಂಬಲ್ಲಿ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಮನೆಗೆ ಮರಳಿ ಬರಲಿಲ್ಲ. ಅನುಮಾನಗೊಂಡ ಮನೆಯವರು ರಾತ್ರಿಯಿಂದಲೇ ಗ್ರಾಮಸ್ಥರೊಂದಿಗೆ ಹುಡುಕಾಟ ನಡಸಿದರೂ ಪತ್ತೆಯಾಗಲಿಲ್ಲ.

Ad Widget

ಮರುದಿನ ಸುಳ್ಯ ಅಗ್ನಿಶಾಮಕದಳದವರು ಮತ್ತು ಊರವರು ಹುಡುಕಲು ಪ್ರಾರಂಭಿಸಿದರೂ ಸಂಜೆಯವರಗೆ ಮಹಿಳೆಯ ಶವ ಪತ್ತೆಯಾಗಲಿಲ್ಲ. ಭಾನುವಾರ ನಂತರ ಕಾರ್ಯಾಚರಣೆ ಮೊಟಕುಗೊಳಿಸಿ ಇಂದು ಮತ್ತೆ ಹುಡುಕಾಟದಲ್ಲಿ ತೊಡಗಿರುವುದಾಗಿ‌ ತಿಳಿದುಬಂದಿದೆ.

Leave a Comment

Your email address will not be published. Required fields are marked *