ಜೀಪ್- ಕ್ಯಾಂಟರ್ ಮುಖಾಮುಖಿ ಢಿಕ್ಕಿ| 8 ಮಂದಿ ದುರ್ಮರಣ

ಚಿಕ್ಕಬಳ್ಳಾಪುರ: ಜೀಪ್, ಕ್ಯಾಂಟರ್​ ನಡುವೆ ಡಿಕ್ಕಿ ಆಗಿ 8 ಜನರ ದುರ್ಮರಣ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮದಿನಾಯಕನಹಳ್ಳಿ ಬಳಿ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

Ad Widget ... ..

ಲಾರಿ ಹಾಗೂ ಜೀಪ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬಳ್ಳಾಪುರ ಎಸ್​ಪಿ ಜಿ.ಜೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಪಘಾತ ಆದ ಜೀಪ್‌ನಲ್ಲಿ 14 ಪ್ರಯಾಣಿಕರು ಇದ್ದರು. ಜೀಪ್​ನಲ್ಲಿ ಇದ್ದ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಜೀರೋ ಟ್ರಾಫಿಕ್‌ನಲ್ಲಿ ಕೋಲಾರಕ್ಕೆ ರವಾನೆ ಮಾಡಲಾಗಿದೆ. ಪ್ರಯಾಣಿಕರನ್ನು ಸಾಗಿಸುತ್ತಿದ್ದ ಜೀಪ್​ನಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು ಎಂದು ತಿಳಿಸಿದ್ದಾರೆ. ಮದಿನಾಯಕನಹಳ್ಳಿ ಬಳಿ ಭೀಕರ ಅಪಘಾತ ಘಟನಾಸ್ಥಳಕ್ಕೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ತೀವ್ರತೆಗೆ ಜೀಪ್ ನಜ್ಜುಗುಜ್ಜಾಗಿದೆ.

Ad Widget

ಮದಿನಾಯಕನಹಳ್ಳಿ ಬಳಿ ಭೀಕರ ಅಪಘಾತ ಪ್ರಕರಣದಲ್ಲಿ ಜೀಪ್ ಚಾಲಕ ರಮೇಶ್ (40), ಮುನಿರತ್ನಮ್ಮ (55), ನಾರಾಯಣಸ್ವಾಮಿ (55) ಸೇರಿದಂತೆ 8 ಜನರ ಸಾವು ಸಂಭವಿಸಿದೆ. ನಿಖಿಲ್, ವೆಂಕಟಲಕ್ಷ್ಮೀ, ಯಶೋಧಮ್ಮ, ಸತ್ಯಪ್ಪ, ಮುನಿಸ್ವಾಮಿ, ಮಂಜುನಾಥ, ಅಂಬರೀಶ್​ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Leave a Comment

Your email address will not be published. Required fields are marked *