ಕಾಸರಗೋಡು: ನಿಷೇಧಿತ ಎಂಡಿಎಂಎ ಸಾಗಾಟ; ಮೂವರ ಬಂಧನ

ಸಮಗ್ರ ನ್ಯೂಸ್: ನಿಷೇಧಿತ ಎಂಡಿಎಂಎ ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸೇರಿದಂತೆ ಮೂವರನ್ನು ಮಂಜೇಶ್ವರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದು, ಅವರಿಂದ 182 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಉದ್ಯಾವರ ಕುಂಡುಕೊಳಕ್ಕೆಯ ನಿವಾಸಿ ಮುಹಮ್ಮದ್ ಶಿಹಾಬ್ (33), ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠದ ನಿವಾಸಿ ಮುಹಮ್ಮದ್ ಸಫ್ವಾನ್ (23) ಹಾಗೂ ಮೂಡುಬಿದಿರೆ ಕೈಕಂಬದ ನಿವಾಸಿ ಮುಹಮ್ಮದ್ ರಸಲ್ ಅಲಿ (21) ಬಂಧಿತರು.

. Ad Widget . Ad Widget . Ad Widget

ಬಟ್ಟಿಪದವಿನಲ್ಲಿರುವ ಕಾಟೇಜ್ ಮೇಲೆ ದಾಳಿ ನಡೆಸಿದಾಗ ಮೂವರು ಅಲ್ಲಿದ್ದರು. ಹಲವು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಶಿಹಾಬ್, ಮಾದಕವಸ್ತುವನ್ನು ಅಡಗಿಸಿಡಲು ಯತ್ನಿಸಿದರೂ ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಆತನ ಬಳಿಯಿಂದ 9.780 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಯಿತು.

. Ad Widget .

ಕೊಠಡಿ ಹಾಗೂ ಹಾಸಿಗೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ, ದಿಂಬಿನ ಕೆಳಗೆ ದೊಡ್ಡ ಜಿಪ್‌ಲಾಕ್ ಚೀಲದಲ್ಲಿ ಅಡಗಿಸಿಟ್ಟಿದ್ದ ಹೆಚ್ಚುವರಿ 172.34 ಗ್ರಾಂ ಎಂಡಿಎಂಎ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಬೆಂಗಳೂರಿನಿಂದ ಮಾದಕವಸ್ತು ಖರೀದಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಮಾದಕವಸ್ತುವನ್ನು ವಿತರಿಸುವ ಉದ್ದೇಶದಿಂದ ಆರೋಪಿಗಳು ಅಲ್ಲಿಗೆ ಬಂದಿದ್ದರೇ ಹಾಗೂ ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕದ ಯಂತ್ರ ಹಾಗೂ ಐದು ಸಣ್ಣ ಜಿಪ್‌ಲಾಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕವಸ್ತು ನಿಯಂತ್ರಣ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸಾಗಾಟ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Comment

Your email address will not be published. Required fields are marked *