ಸೌಜನ್ಯ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್| ತಾಯಿ ಕುಸುಮಾವತಿ ತನಿಖೆ ನಡೆಸುವಂತೆ ದೂರು

ಸಮಗ್ರ ನ್ಯೂಸ್: ಸೌಜನ್ಯ ಕೇಸ್ ಮರುತನಿಖೆ ಪ್ರಕರಣ ಮತ್ತೊಂದು ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಸೌಜನ್ಯ ಹಾಗೂ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ತನಿಖೆ ನಡೆಸುವಂತೆ ದೂರು ಕೇಳಿಬಂದಿದೆ. ಮಂಗಳೂರು ಎಸ್‌ಐಟಿ ಕಚೇರಿಗೆ ಆಗಮಿಸಿ ಕಿಶೋರ್ ಎಂಬುವರು ದೂರು ಸಲ್ಲಿಸಿದ್ದಾರೆ.

. Ad Widget . Ad Widget . Ad Widget

ಕುಸುಮಾವತಿಯವರು ಸೌಜನ್ಯ ತಾಯಿ ಹೌದೋ ಎಂಬ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಹಲವು ಪುಟಗಳ ದಾಖಲೆ ಸಹಿತ ದೂರು ನೀಡಿದ್ದಾರೆ.

. Ad Widget .

2015ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಕೋಂ ಚಂದಪ್ಪ ಗೌಡರಿಗೆ ಜಾಗ ಮಂಜೂರು ಆಗಿದೆ. ಸದ್ಯ ಈ ಜಾಗ ಕುಸುಮಾವತಿ ಹೆಸರಿನಲ್ಲಿ ಸ್ವಾಧೀನ ಇರುವ ಬಗ್ಗೆ ದಾಖಲೆ ಇದೆ. ಆದರೆ ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸ್ತವ್ಯ ಇಲ್ಲ ಎಂದು ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಎಸ್‌ಐಟಿ ರಚನೆಗೂ ಮೊದಲೇ ಕಿಶೋರ್​​ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೂ ದೂರು ಸಲ್ಲಿಸಿ ಇಂದಿರಾವತಿ ಇರುವಿಕೆ ಹಾಗೂ ಮತ್ತೊಬ್ಬರ ಗುರುತಿನ ವಂಚನೆ ಬಗ್ಗೆ ತನಿಖೆಗೆ ಮನವಿ ಮಾಡಿದ್ದರು.

ದೂರಿನಲ್ಲಿ ಏನಿದೆ?
ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂದು ಕುಸುಮಾವತಿ ಸಲ್ಲಿಸಿರೋ ಪ್ರಮಾಣಪತ್ರವೇ ಸುಳ್ಳು, ಆಧಾರ್ ದಾಖಲೆ, ಪಡಿತರ ಚೀಟಿ ದಾಖಲೆಗಳಲ್ಲಿ ವ್ಯತ್ಯಾಸ ಇದೆ. ಸೌಜನ್ಯ ಹಾಗೂ ಸಹೋದರಿ ಸೌಮ್ಯ ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಸಂಶಯ ವ್ಯಕ್ತಪಡಿಸಿರುವ ಕಿಶೋರ್​, ಅನೇಕ ಅನುಮಾನಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿ ಎಸ್‌ಐಟಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಸೌಜನ್ಯ ಯಾರು?
ಶ್ರೀಮತಿ ಇಂದಿರಾವತಿ W/o ಚಂದ್ರಪ್ಪ ಗೌಡ ಇವರ ಇರುವಿಕೆ ಬಗ್ಗೆ ತಕ್ಷಣ ತನಿಖೆ ನಡೆಸುವುದು, ಸೌಜನ್ಯ ವಾಸ್ತವವಾಗಿ ಯಾರ ಮಗಳು? ಇಂದಿರಾವತಿಯವರದ್ದೇ ಅಥವಾ ಕುಸುಮಾವತಿಯವರದ್ದೇ? ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳು ಮತ್ತು ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆಯ ಮೂಲಕ ತನಿಖೆ ನಡೆಸಲು ಮನವಿ ಮಾಡಲಾಗಿದೆ.

ಕುಸುಮಾವತಿಯವರನ್ನು ವಿಚಾರಣೆಗೆ ಒಳಪಡಿಸಿ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಿ ಸಂಶಯಗಳಿಗೆ ಸಮಗ್ರ ತನಿಖೆ ನಡೆಸುವುದು, ಆಧಾರ್ ನೋಂದಣಿ ದಾಖಲೆಗಳು, ಆಧಾರ್ ಇಲಾಖೆಯ ಪಡಿತರ ಚೀಟಿ ದಾಖಲೆಗಳು, ಮತದಾರರ ಪಟ್ಟಿಗಳು, ಜನನ-ಮರಣ ನೋಂದಣಿ, ಆಸ್ಪತ್ರೆ ದಾಖಲೆಗಳು ಹಾಗೂ ಸಾರ್ವಜನಿಕ ಮತ್ತು ಖಾಸಗಿ ಶಾಲಾ ದಾಖಲೆಗಳನ್ನು (ತಾಯಿ ಹೆಸರು ಮತ್ತು ಜನ್ಮ ದಿನಾಂಕ) ಪರಿಶೀಲಿಸುವುದು ಮತ್ತು ಸರಕಾರಕ್ಕೆ ಸಲ್ಲಿಸಿದ ದಾಖಲೆಗಳನ್ನು ನಿಜವಾದ ದಾಖಲೆಗಳೊಂದಿಗೆ ತಾಳೆ ಪರಿಶೀಲಿಸುವುದು ಮತ್ತು ಚಂದ್ರಪ್ಪ ಗೌಡರ ಕುಟುಂಬ ವಂಶವೃಕ್ಷವನ್ನು ಪರಿಶೀಲಿಸಿ, ಅವರ ಪತ್ನಿ/ಪತ್ನಿಯರ ಬಗ್ಗೆ ಹಾಗೂ ಪಾರಂಪರಿಕ ಹಕ್ಕು ಮತ್ತು ನೆರೆಯವರಿಂದ ಹೇಳಿಕೆಗಳನ್ನು ದಾಖಲಿಸುವುದು.

ವೃಕ್ಷ ಗುರುತಿನ ವಂಚನೆ, ದಾಖಲೆ ಫೋರ್ಜರಿ, ಸುಳ್ಳು ಪ್ರಮಾಣಪತ್ರ ಹಾಗೂ ಸರಕಾರಕ್ಕೆ ವಂಚನೆ ಸಂಬಂಧಪಟ್ಟವರ ಹಾಗೂ ಶಾಮೀಲಾದ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಿಸುವುದು, ಕುಸುಮಾವತಿಯವರು ನಿಜವಾದ ತಾಯಿ ಅಲ್ಲದಿದ್ದರೂ ಜನರ ಸಹಾನುಭೂತಿ ಪಡೆಯುವ ಉದ್ದೇಶದಿಂದ ತಾನು ಅವಳ ತಾಯಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವುದು, ಜಮೀನಿನ ವಿಚಾರಕ್ಕೆ ಕೊಲೆ ನಡೀತಾ ಎಂಬ ಬಗ್ಗೆಯೂ ತನಿಖೆಗೆ ಆಗ್ರಹಿಸಿದ್ದಾರೆ. ಜೊತೆಗೆ ಸೌಜನ್ಯ ಮಾವ ವಿಠಲ ಗೌಡ ವಿರುದ್ಧವೂ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಇನ್ನು, ಈ ಬಗ್ಗೆ ದೂರುದಾರ ಕಿಶೋರ್ ಮಾತನಾಡಿದ್ದು, ಸೌಜನ್ಯ ತಾಯಿ ಕುಸುಮಾವತಿಗೆ ಇಂದಿರಾವತಿ ಎಂಬ ಹೆಸರಿತ್ತು, ಎರಡೂ ಹೆಸರಿನ ಜನ್ಮ ದಿನಾಂಕಗಳು ಬೇರೆ ಬೇರೆ ಇದೆ. ಹೀಗಾಗಿ ಸೌಜನ್ಯ ತಾಯಿ ಕುಸುಮಾವತಿ ಹೌದಾ ಅಲ್ವಾ ಎಂಬ ಬಗ್ಗೆ ಅನುಮಾನ ಇದೆ. ನಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಎಸ್​​ಐಟಿಗೆ ಸಲ್ಲಿಸಿದ್ದೇನೆ. ದಾಖಲೆಗಳ ಪ್ರಕಾರ ಕುಸುಮಾವತಿಗೆ 14 ವರ್ಷ ಇರುವಾಗ ಸೌಜನ್ಯ ಹುಟ್ಟಿದ್ದಳು, 14 ವರ್ಷ ಇರುವಾಗ ಮಗಳು ಆಗೋಕೆ ಸಾಧ್ಯಾನಾ? ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *