ಸುಳ್ಯ : ಲಾರಿ ಹಾಗೂ ಕಾರು ನಡುವೆ ಬೀಕರ ಅಪಘಾತ| 10 ವರ್ಷದ ಬಾಲಕ ಸಾವು 

ಸಮಗ್ರ ನ್ಯೂಸ್: ಮಾಣಿ ಮೈಸೂರು ಹೆದ್ದಾರಿಯ ಸುಳ್ಯದ ಗೂನಡ್ಕ ಶಾಲೆಯ  ಬಳಿ ಲಾರಿ ಮತ್ತು ಕಾರು ಪರಸ್ಪರ ಡಿಕ್ಕಿಯಾಗಿ 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಅ.25 ರಂದು ಮುಂಜಾನೆ ಸಂಭವಿಸಿದೆ.

. Ad Widget . Ad Widget . Ad Widget

ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ತನುಷ್ (10) ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಹಾಗೂ ಮತ್ತೊಂದು ಮಗು ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

. Ad Widget .

ಅಪಘಾತವು ಚಾಲಕನ ನಿಯಂತ್ರಣ ತಪ್ಪಿ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಟನ್ ವೀಲ್ ಲಾರಿಗೆ ಪರಸ್ಪರ ಡಿಕ್ಕಿ ಆಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *