ಸಮಗ್ರ ನ್ಯೂಸ್: ರಾಕಿಂಗ್‌ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಇಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 3 ಗಂಟೆ 14 ನಿಮಿಷಗಳು.
ಎಲ್ಲಾ ಭಾಗಗಳಲ್ಲಿಯೂ ಚಿತ್ರದ ಮೇಲೆ ನಿರೀಕ್ಷೆ ಇದ್ದು, ಟಿಕೆಟ್ ದರಗಳು ಹೆಚ್ಚಾಗಿವೆ. ಭಾರತದ ಸಿನಿಮಾರಂಗದ ಇತಿಹಾಸದಲ್ಲೇ ಅತ್ಯಧಿಕ ರು.3600 ಟಿಕೆಟ್ ದರ ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅಷ್ಟೂ ಟಿಕೆಟ್‌ಗಳೂ ಸೋಲ್ಡೌಟ್ ಆಗಿವೆ. ಹಿಂದೆ ‘ಧುರಂಧರ್’ ಸಿನಿಮಾಕ್ಕೆ 3100 ರು. ಟಿಕೆಟ್ ದರವಿದ್ದದ್ದು ಈವರೆಗಿನ ದಾಖಲೆಯಾಗಿತ್ತು.
ಬೆಳಗ್ಗೆ 6ಗಂಟೆಯಿಂದ ಶೋಗಳು ಆರಂಭವಾಗಲಿದ್ದು, ಮಧ್ಯರಾತ್ರಿ 11.45ರವರೆಗೆ ಮುಂದುವರಿಯಲಿವೆ. ವಿಶ್ವಾದ್ಯಂತ ಬರೋಬ್ಬರಿ 12 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಭಾರತ ಒಂದರಲ್ಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.
ರಿಲೀಸ್‌ಗೂ ಮುನ್ನ ಅಡ್ವಾನ್ಸ್ ಬುಕಿಂಗ್‌ನಿಂದಲೇ ಸುಮಾರು 50 ಕೋಟಿ ರು.ಗಳಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಿಡುಗಡೆ ಪೂರ್ವ ರೂ. 20 ಕೋಟಿ ಗಳಿಕೆಯಾಗಿದೆ ಎಂದು ವರದಿಯಾಗಿದೆ. ಚಿತ್ರತಂಡ ಮೊದಲ ದಿನವೇ ಅದ್ದೂರಿ ಗಳಿಕೆ ನಿರೀಕ್ಷೆ ಇಟ್ಟುಕೊಂಡಿದೆ.


















