ಪುತ್ತೂರು: ಮೂರು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೆ ಶೀಘ್ರ ಮುಕ್ತಿ

ಸಮಗ್ರ ನ್ಯೂಸ್: ಪುತ್ತೂರಿನ ಮೂರು ಕಡೆಗಳಲ್ಲಿ ರೈಲ್ವೇ ಹಳಿಗಳನ್ನು ದಾಟಿ ಸಾಗುವ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯ ದೃಷ್ಟಿಯಿಂದ ಹಳೆಯ ಕಾಲದ ಲೆವೆಲ್ ಕ್ರಾಸಿಂಗ್ ಗೇಟ್ ವ್ಯವಸ್ಥೆಗೆ ಮುಕ್ತಿ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ.

. Ad Widget . Ad Widget . Ad Widget

ಪುತ್ತೂರು ನಗರದ ಸಮೀಪ ಇರುವ ಮುಕ್ವೆ ಗೇಟ್ ಲೆವೆಲ್ ಕ್ರಾಸಿಂಗ್ 102, ಬೆದ್ರಾಳ ಗೇಟ್ ಪುತ್ತೂರು ಕ್ಲಬ್ ಬಳಿ ಲೆವೆಲ್ ಕ್ರಾಸಿಂಗ್ 103 ಹಾಗೂ ಸಾಮೆತ್ತಡ್ಕ ಬಳಿ ಪುತ್ತೂರು ಗೇಟ್ ಲೆವೆಲ್ ಕ್ರಾಸಿಂಗ್ 104 ಪ್ರದೇಶಗಳಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ನಡೆಯಲಿದೆ.

. Ad Widget .

ಪ್ರಸ್ತುತ ಈ ಜಾಗಗಳಲ್ಲಿ ರೈಲ್ವೇ ಗೇಟ್ ಗಳಿದ್ದು, ರೈಲು ಸಂಚಾರದ ಸಂದರ್ಭದಲ್ಲಿ ಗೇಟ್ ಗಳನ್ನು ಹಾಕುವುದರಿಂದ ಸಾಕಷ್ಟು ಹೊತ್ತು ಕಾದು ಸಂಚರಿಸಬೇಕಾದ ಸ್ಥಿತಿ ಇದ್ದು, ಮುಂದೆ ಮೇಲ್ಸೇತುವೆ ನಿರ್ಮಾಣಗೊಂಡರೆ ನೇರವಾಗಿ ಸಾಗುವುದಕ್ಕೆ ಅನುಕೂಲವಾಗಲಿದೆ. ಮೂರು ಕಡೆ ಮೇಲ್ಸೇತುವೆ ನಿರ್ಮಾಣಕ್ಕಾಗಿ 21.24 ಕೋಟಿ ರೂಪಾಯಿ ವೆಚ್ಚ ನಿಗದಿಯಾಗಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.

ಕಳೆದ ಹಲವು ವರ್ಷಗಳ ಬೇಡಿಕೆಯಾಗಿ ಈ ಕಾಮಗಾರಿ ನಡೆಯುತ್ತಿದ್ದು, ಕಳೆದ ಜೂನ್ ತಿಂಗಳಲ್ಲಿ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿಯ ಶಿಲಾನ್ಯಾಸಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ವಿಚಾರವನ್ನು ತಿಳಿಸಿದ್ದರು. ಪ್ರಸ್ತುತ ಅದರ ಪ್ರಕ್ರಿಯೆಗಳು ಪೂರ್ಣಗೊಂಡು ಶೀಘ್ರ ಕಾಮಗಾರಿ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ ಎನ್ನಲಾಗಿದೆ. ಮೂರು ರೈಲ್ವೇ ಮೇಲ್ಸೇತುವೆಗಳ ಕಾಮಗಾರಿ ಒಟ್ಟು 21,24,65,000 ರೂಪಾಯಿ ವೆಚ್ಚದಲ್ಲಿ ನಡೆಯಲಿದ್ದು, 2028ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *