ಮಂಗಳೂರಿನ ಅಶ್ಮಿತ್ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್

ಸಮಗ್ರ ನ್ಯೂಸ್: ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಲಿಟಲ್‌ ಚಾಂಪ್ಸ್‌ ಗೆ ತೆರೆ ಬಿದ್ದಿದೆ. ಅದ್ಧೂರಿ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮದಲ್ಲಿ ಮಂಗಳೂರಿನ ಅಶ್ಮಿತ್‌ ಗೆದ್ದು ಚಾಂಪಿಯನ್‌ ಆಗಿದ್ದಾರೆ. ಫಿನಾಲೆಯಲ್ಲಿ ಶಿವಶಂಕರಿ ಹಾಡನ್ನು ಹಾಡಿದ್ದ ಅಶ್ಮಿತ್‌ ಸರಿಗಮಪ ಲಿಟಲ್‌ ಚಾಂಪ್ಸ್‌ ಟ್ರೋಫಿಯೊಂದಿಗೆ 20 ಲಕ್ಷ ರೂ ಗೆದ್ದು ಬೀಗಿದ್ದಾರೆ.

. Ad Widget . Ad Widget . Ad Widget

ಅಶ್ಮಿತ್‌, ಅಚಿಂತ್ಯ, ಮಹನ್ಯಾ, ಹರುಷ್‌, ಜಯಲಕ್ಷ್ಮೀ, ಅವ್ಯುಕ್ತ್‌ ಫಿನಾಲೆ ಸ್ಪರ್ಧೆಯಲ್ಲಿದ್ದರು. ಇಂದು ನಾಗರಾಜ್‌ ತಂಡದಲ್ಲಿದ್ದ ಅಶ್ಮಿತ್‌ ಚಾಂಪಿಯನ್‌ ಪಟ್ಟಕ್ಕೇರಿದರೆ, ಮಂಗಳೂರಿನ ಮತ್ತೊಬ್ಬ ಸ್ಪರ್ಧಿ ಅಚಿಂತ್ಯ ದ್ವಿತೀಯ ಸ್ಥಾನ ಪಡೆದರು. ಅವರಿಗೆ 15 ಲಕ್ಷ ರೂ ಬಹುಮಾನ ರೂಪದಲ್ಲಿ ನೀಡಲಾಯಿತು.

. Ad Widget .

Leave a Comment

Your email address will not be published. Required fields are marked *