ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದಲ್ಲಿ ರಾಶಿ ಚಕ್ರದಲ್ಲಿ ಹಲವು ಬದಲಾವಣೆಗಳಾಗಲಿವೆ. ಈ ಬದಲಾವಣೆ ನಿತ್ಯ ಜೀವನದಲ್ಲಿ ಹಲವು ಪರಿಣಾಮಗಳಿಗೆ ಕಾರಣವಾಗಬಹುದು. ಆ.1ರಿಂದ 8ರವರೆಗೆ ದ್ವಾದಶ ರಾಶಿಗಳ ಫಲಾಫಲಗಳೇನು? ಎಂಬುದನ್ನು ನೋಡೋಣ…

Ad Widget ... .. Ad Widget .

ಮೇಷ:
ಆ. 1ರಂದು ಶುಕ್ರನು ತನ್ನ ರಾಶಿಗೆ ಬಂದು ಆ. 2ರಂದು ಅಂಗಾರಕನು ಬುಧನ ಮನೆಗೆ ಬರುತ್ತಾನೆ. 5ರಂದು ಬುಧನು ಕಟಕ ರಾಶಿಗೆ ಗುರುವಿನ ಉಚ್ಚ ಸ್ಥಾನಕ್ಕೆ ಬಂದು ಸೇರುವನು. ಈ ಗ್ರಹಗಳ ಬದಲಾವಣೆಯಿಂದ ಹೆಚ್ಚು ಅನುಕೂಲ ಪಡೆಯಲು ಸಾಧ್ಯವಾಗುತ್ತದೆ. ಕೇತುವು ಪಂಚಮ ಸ್ಥಾನದಲ್ಲಿ ಇರುವುದರಿಂದ ಷಣ್ಮುಖ ನಾಗದೇವರಿಗೆ ನಮಸ್ಕರಿಸಿ ನಾಗರಾಜನ ಅಷ್ಟೋತ್ತರ ಪಠಿಸಿ. ಕೆಲಸಗಳು ಲಾಭಾಂಶ ಮುಟ್ಟಿ ಅಗತ್ಯ ಪೂರೈಸುತ್ತಾನೆ.

Ad Widget

ವೃಷಭ:
ವೃಷಭ ರಾಶಿಗೆ ಒಂದನೇ ಮನೆಯಲ್ಲಿ ಶನಿಯೇ ಸಾಕು ಇಷ್ಟಾರ್ಥಗಳನ್ನು ನೀಡಲು. ಕುಜನು ರಾಶಿಯಲ್ಲಿ ಕುಳಿತಿರುವುದರಿಂದ ಸತ್ಯನಾರಾಯಣನನ್ನು ಪ್ರಾರ್ಥಿಸಿದರೆ ನೀವು ಅಂದುಕೊಂಡ ಕಾರ್ಯಗಳು ನಡೆದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಮಿಥುನ:
ಆ. 5ರಂದು ರಾಶಿಯಲ್ಲಿದ್ದ ಬುಧನು ಅಲ್ಲಿಂದ ಕಟಕ ರಾಶಿಗೆ ಹೊರಡುತ್ತಾನೆ. ಗುರು ಹಾಗೂ ಬುಧನು ಏಕ ರಾಶಿಯಲ್ಲಿ ಬರುವ ಸಂದರ್ಭದಲ್ಲಿ ನೀವು ದೃಢತೆಯನ್ನು ಸಾಧಿಸಬೇಕಾದರೆ ಅನಂತವಾಗಿ ಮೊಟ್ಟ ಮೊದಲ ಗುರುವಾದ ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

ಕಟಕ:
ಕರ್ಕಾಟಕ ರಾಶಿಯಲ್ಲಿಯೇ ಉಚ್ಚ ಗುರುವಿದ್ದಾನೆ. ನಿಮಗೆ ಅಸಾಧ್ಯವಾದ ಕಾರ್ಯಗಳನ್ನು ದೇವರೇ ಮಾಡಿಕೊಡುವ ಸಮಯವು ಒದಗಿ ಬಂದಿದೆ. ರಾಗ – ತಾಳ – ಭಾವ ಸೇರುವಂತೆ ಪಾಂಡುರಂಗ ವಿಠ್ಠಲನನ್ನು ಒಳ್ಳೆಯ ಭಾವದಿಂದ ನೆನೆದು ಅವನ ಹಾಡನ್ನು ಹಾಡಿರಿ. ಇವೆಲ್ಲವನ್ನೂ ಪಡೆದು ಸಂತೋಷದಿಂದಿರುವ ಕಾಲವಿದು.

ಸಿಂಹ:
ಸಿಂಹ ರಾಶಿಯವರಿಗೆ ದ್ವಾದಶ ಗುರುವು ಏನೂ ಕೆಡುಕನ್ನು ಉಂಟುಮಾಡನು. ಉಚ್ಚ ರಾಶಿಯಲ್ಲಿ ಇರುವ ಗುರುವು ಯಾವ ಸಂಕಟ ಕೊಡುವುದಿಲ್ಲ. ಆದರೂ ಲಗ್ನದಲ್ಲಿ ಕೇತುವಿದ್ದು, ಈ ಮಾಸದಲ್ಲಿ ಬರುವ ಸಂಕಷ್ಟಹರ ಗಣಪತಿಯನ್ನು ಪೂಜಿಸಿ. ಕೇತುವಿನಿಂದ ಬರುವ ಅಡೆತಡೆಯನ್ನು ಗಣನಾಯಕನೇ ನಿವಾರಿಸುತ್ತಾನೆ. ಕಡಲೆಕಾಳು, ಬೆಲ್ಲ, ಬೆಣ್ಣೆಯನ್ನು ದಾನನೀಡಿ. ಉತ್ತ್ತು ಫಲ ಸಿಕ್ಕಿ ನಿಮಗೆ ಒಳ್ಳೆಯದಾಗುತ್ತದೆ.

ಕನ್ಯಾ:
ದ್ವಾದಶ ಶುಕ್ರ, ಅಲ್ಲಿಯೇ ಕೇತುವಿದ್ದಾನೆ. ಒಳ್ಳೆಯ ಕೆಲಸಕ್ಕೆ ತಡೆಹಾಕಿ ಖರ್ಚನ್ನು ಜಾಸ್ತಿ ಮಾಡಿಸುತ್ತಾನೆ. ಹಾಗಿದ್ದರೆ ಸಾಗುವುದು ಹೇಗೆ? ಜತೆಯಲ್ಲಿ ಶನಿಯು ಸಪ್ತಮದಲ್ಲಿದ್ದಾನೆ. ಆದರೆ ಗುರುವು ಏಕಾದಶದಲ್ಲಿರುವನು. ನಿಮ್ಮ ಗತಿ-ಸ್ಥಿತಿಯನ್ನು ಸರಿಪಡಿಸಲು ಕುಲಗುರುಗಳ ಆಶೀರ್ವಾದ ಪಡೆಯಿರಿ. ಸರ್ವಸಂಕಟ ಪರಿಹಾರಕ್ಕಾಗಿ ಸತ್ಯನಾರಾಯಣ ವ್ರತಕಥೆಯನ್ನು ಓದಿರಿ.

ತುಲಾ:
ಜೀವನದಲ್ಲಿ ಏನಾದರೂ ಬರಲಿ, ಬಂದ ಸುಖ ಅನುಭವಿಸಿ, ಕಷ್ಟಪಟ್ಟು ಧನ ಸಂಪಾದಿಸಿ ಕೀರ್ತಿಯನ್ನು ಪಡೆದು ಲಾಭಾಂಶವನ್ನು ಮುಂದಿನ ದಿನಗಳಿಗೆ ಕೂಡಿಡಿ. ದುರ್ಗಾ ಲಕ್ಷ್ಮೀಯನ್ನು ಏಕಕಾಲದಲ್ಲಿ ಪೂಜಿಸಿ. ನಿಮಗೆ ಧನ-ಸಂಪತ್ತು ಕೊಟ್ಟು ಹರಸುತ್ತಾರೆ.

ವೃಶ್ಚಿಕ:
ಸಪ್ತಮದಲ್ಲಿ ಅಂಗಾರಕನಿದ್ದಾನೆ. ಒಂಬತ್ತರಲ್ಲಿ ಗುರು-ಆದಿತ್ಯರೂ ಇದ್ದಾರೆ. ನೀವು ಮಾಡುವ ಕೆಲಸದ ಬಗ್ಗೆ ಎಚ್ಚರವಿರಲಿ. ಮನಸ್ಸಿನಲ್ಲಿ ಚಿಂತೆ ಬೇಡ. ಆರೋಗ್ಯವನ್ನು ಹಾಳುಮಾಡಿಕೊಳ್ಳದಿರಿ. ಅದೊಂದು ಬಿಟ್ಟರೆ, ಗುರುವೇ ನಿಮಗೆ ಬೇಕಿದ್ದನ್ನು ಕೈತುಂಬಾ ಕೊಟ್ಟು ಹರಸುತ್ತಾನೆ. ಪಾರ್ವತಿ ಸಹಿತ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಪ್ರಾರ್ಥಿಸಿ.

ಧನಸ್ಸು:
ಸಪ್ತಮದಲ್ಲಿ ಬುಧನಿದ್ದಾನೆ. ವ್ಯಾಪಾರ ಮಾಡಬಹುದು ಅಥವಾ ದೀರ್ಘ ಕಾಲದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಂಡು ಸದುದ್ದೇಶದಿಂದ ಒಳ್ಳೆಯ ವ್ಯಾಪಾರವನ್ನು ಆರಂಭಿಸಿ. ಎಂಟರಲ್ಲಿ ಗುರುವಿದ್ದರೂ ಪರವಾಗಿಲ್ಲ. ಎಲ್ಲ ಆಗುಹೋಗುಗಳನ್ನು ದೇವರೇ ಸಂತೈಸಿ ನಿಮ್ಮನ್ನು ಬೆಳೆಯಲು ಬಿಡು ತ್ತಾನೆ. ಸರಿಯಾದ ನಿರ್ಣಯ ತೆಗೆದುಕೊಳ್ಳಿ. ರಾಮಾಯಣದಲ್ಲಿರುವ ರಾಮ ಹೃದಯವನ್ನು ಪಾರಾಯಣ ಮಾಡಿದರೆ ಜೀವನವನ್ನು ಗೆದ್ದು ಬರಬಹುದು.

ಮಕರ:
ಸಪ್ತಮದಲ್ಲಿ ಗುರು, 3ರಲ್ಲಿ ಶನಿ, ಅಷ್ಟಮದಲ್ಲಿ ಶುಕ್ರ, ಕೇತು, ದುಡ್ಡು ಸಂಪಾ ದಿಸುವುದು ಕಷ್ಟಕರ ಕೆಲಸ. ಚತುರ್ವಿಧಿ ಪುರುಷಾರ್ಥವನ್ನು ಕೊಡುವುದು. ಭಗವಂತನೇ ಆದ್ದರಿಂದ ಕೊಟ್ಟದ್ದನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗಿ, ಗುರು ನಿಮಗೆ ಫಲವನ್ನು ನೀಡುವುದರಲ್ಲಿ ಸಂದೇಹಬೇಡ. ಇಲ್ಲ ಎಂಬ ಶಬ್ದವು ನಿಮ್ಮ ಜೀವನದಲ್ಲಿ ಬರುವುದೇ ಇಲ್ಲ. ನಿಮ್ಮ ಮನೋಕಾಮನೆ ಈಡೇರಲು ಈಶ್ವರ ಪೂಜೆಯನ್ನು ಶನಿ ಅಷ್ಟೋತ್ತರ ಪಠಿಸಿ.

ಕುಂಭ:
ಲಗ್ನದಲ್ಲಿ ರಾಹುವಿದ್ದಾನೆ. ಷಷ್ಠದಲ್ಲಿ ಗುರು, ದ್ವಿತೀಯದಲ್ಲಿ ಶನಿಯಿದ್ದು, ಅತ್ಯಂತ ಚಂಚಲವಾದ ಸಮಯವಿದು. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯ. ನಿಮ್ಮ ತೊಳಲಾಟದ ಸ್ಥಿತಿಯಲ್ಲಿ ಏನನ್ನೂ ಪಡೆಯಲು ಹರಸಾಹಸ ಪಡಬೇಕು. ದೇವರಲ್ಲಿ ನಂಬಿಕೆಯಿರಲಿ. ನಿಮ್ಮ ಪ್ರಾರ್ಥನೆ ಪೂಜೆಯನ್ನು ಮುಂದುವರಿಸಿರಿ.

ಮೀನ:
ಲಗ್ನದಲ್ಲಿ ಶನಿಯಿದ್ದರೂ ಗುರುವು ತನ್ನ ಉಚ್ಛ ರಾಶಿಯಾದ ಕಟಕ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿದ್ದು, ನಿಮಗೆ ಸರ್ವಾರ್ಥ ಸಿದ್ಧಿಸುವ ವರವನ್ನು ನೀಡುತ್ತಾನೆ. ‘ಓಂ ನಮೋ ವೆಂಕಟೇಶಾಯ’ ಎಂದು ಸಂಕಟವನ್ನು ಪರಿಹರಿಸುವ ವೆಂಕಟೇಶ್ವರನ ಧ್ಯಾನವನ್ನು ಯಾವ ಮಡಿಯಿಲ್ಲದೆ ದಿನವಿಡೀ ಜಪಿಸಬಹುದು. ಸ್ಥಿರವಾದ ಮನಸ್ಸೊಂದಿದ್ದರೆ ದೇವರೇ ನಿಮಗೆ ಒಲಿಯುತ್ತಾನೆ.

Leave a Comment

Your email address will not be published. Required fields are marked *