ಸುಳ್ಯ| ಮಕ್ಕಳೊಂದಿಗೆ ಯುವಕನ ಜೊತೆ ಮಹಿಳೆ ಪರಾರಿ

Ad Widget ... ..

ಸುಳ್ಯ. ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಪರಿಚಿತ ಯುವಕನೊಬ್ಬನೊಂದಿಗೆ ಪರಾರಿಯಾಗಿರುವ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.

Ad Widget

ಜಯನಗರದ ಕೊಯಿಂಗೋಡಿ ಸಮೀಪದ ವಿವಾಹಿತ ಮಹಿಳೆಯೋರ್ವಳು ಆಕೆಯ ಮನೆಗೆ ಆಗಾಗ ಬರುತ್ತಿದ್ದ ಪುತ್ತೂರು ಮೂಲದ ಪ್ರದೀಪ್ ಎಂಬ ಯುವಕನೊಂದಿಗೆ ತೆರಳಿರುವುದಾಗಿ ಹೇಳಲಾಗಿದೆ. ಈ ಕುರಿತಂತೆ ಪತಿ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ನಡುವೆ ನಾಪತ್ತೆಯಾಗಿರುವ ಮಹಿಳೆ ಸ್ಥಳಿಯ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದು, ಸಂಘದಿಂದ ಸುಮಾರು 1 ಲಕ್ಷ ರೂ.ಗಳಷ್ಟು ಸಾಲ ತೆಗೆದಿದ್ದು, ಆಕೆ ಪರಾರಿಯಾಗಿರುವ ಸುದ್ದಿ ಹಬ್ಬುತ್ತಿದ್ದಂತೆ ಸ್ವಸಹಾಯ ಸಂಘದ ಮಹಿಳೆಯರು ದೂರು ನೀಡಲು ಸುಳ್ಯ ಠಾಣೆಗೆ ಬಂದಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *