Ad Widget .

ಇಡಾ ಚಂಡಮಾರುತಕ್ಕೆ ಅಮೇರಿಕಾ ತತ್ತರ| 41 ಮಂದಿ ಬಲಿ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇಡಾ ಚಂಡಮಾರುತವು ಉಂಟು ಮಾಡಿದ ಪ್ರವಾಹ ಪರಿಸ್ಥಿತಿಯಲ್ಲಿ ನ್ಯೂಯಾರ್ಕ್​ನಲ್ಲಿ ರಾತ್ರೋರಾತ್ರಿ ಕನಿಷ್ಟ 41 ಮಂದಿಯನ್ನು ಬಲಿ ಪಡೆದಿದೆ.

Ad Widget . Ad Widget . Ad Widget .

ಹ್ಯುರಿಕೇನ್​ ಇಡಾ ಚಂಡಮಾರುತದ ಬಳಿಕ ನ್ಯೂಯಾರ್ಕ್​ನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನ್ಯೂಯಾರ್ಕ್​ನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಿದೆ. ನ್ಯೂಯಾರ್ಕ್​ ನಗರದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು ಕಟ್ಟಡಗಳು, ಎಲೆಕ್ಟ್ರಿಕ್​ ಕಂಬಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ.

ಪ್ರವಾಹದಿಂದಾಗಿ ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್​ನ ಮುಖ್ಯ ರಸ್ತೆಗಳು ಬಂದ್​ ಆಗಿವೆ. ಅಗ್ನಿಶಾಮಕದಳ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳೀಯ ಮಾಧ್ಯಮದ ಮಾಹಿತಿಯ ಪ್ರಕಾರ ನ್ಯೂಜೆರ್ಸಿಯಲ್ಲಿ ಕನಿಷ್ಟ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಸಂಖ್ಯೆಯ ಜನರು ವಾಹನದೊಳಗೆ ಸಿಲುಕಿ ಸಾವನ್ನಪ್ಪಿದವರೇ ಇದ್ದಾರೆ ಎಂದು ಅಂದಾಜಿಸಲಾಗಿದೆ.

Leave a Comment

Your email address will not be published. Required fields are marked *