ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್| ಸೊರಗುತ್ತಿರುವ ದಾಸನ ಕಂಡು ಮರುಗಿದ ಜನ

ಸಮಗ್ರ ನ್ಯೂಸ್ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರದ್ದು ಎನ್ನಲಾದ ಫೋಟೋ ಒಂದು ವೈರಲ್‌ ಆಗಿದೆ. ತಮ್ಮ ಹಿಂದಿನ ಎಲ್ಲಾ ವರ್ಚಸ್ಸು, ದೇಹದಾರ್ಢ್ಯತೆಗಳನ್ನು ಕಳೆದುಕೊಂಡಂತೆ ಕಾಣುತ್ತಿರುವ ನಟ ದರ್ಶನ್‌ , ತೀವ್ರವಾಗಿ ಸೊರಗಿದಂತೆ ಕಂಡು ಬರುತ್ತಿದ್ದು ಈ ಫೋಟೋ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ.

Ad Widget ... .. Ad Widget .

ನಟ ದರ್ಶನ್‌ ಗೆ ಜೈಲಿನಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಆರೋಪಿಸಿ ದರ್ಶನ್‌ ಪರ ವಕೀಲರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಒಂದು ವರ್ಷದೊಳಗೆ ಪ್ರಕರಣದ ವಿಚಾರಣೆ ಮುಗಿಸುವಂತೆ ತೀರ್ಪು ನೀಡಿದ್ದರು.

Ad Widget

ಈ ಹಿಂದೆ ನಟ ದರ್ಶನ್‌ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದೂ ಸಹ ಆರೋಪಿಸಲಾಗಿತ್ತು. ರೌಢಿಶೀಟರ್‌ ಜೊತೆಯಲ್ಲಿ ಕುಳಿತು ಕಾಫಿ ,ಸಿಗರೇಟು ಸೇವಿಸುತ್ತಿರುವ ದೃಶ್ಯಗಳು ವೈರಲ್ ಆಗಿತ್ತು .ಜೊತೆಯಲ್ಲೇ ನಟ ದರ್ಶನ್‌ ಜೈಲಿನಲ್ಲಿ ವಿಡಿಯೋ ಕಾಲ್‌ ಮಾಡಲು ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದ ವಿಷಯವೂ ಸಹ ಹೊರಬಿದ್ದಿತ್ತು. ಈ ಬೆನ್ನಲ್ಲೇ ನಟ ದರ್ಶನ್‌ ಸೇರಿದಂತೆ ಕೊಲೆ ಪ್ರಕರಣದ ಎಲಾ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು.

Leave a Comment

Your email address will not be published. Required fields are marked *