ಕೈ-ಕಾಲು ಕತ್ತರಿಸುವ ಶಿಕ್ಷೆ ವಿಧಿಸುವಂತಾದ್ರೆ ಮಾತ್ರ ಜನರು ಕಾನೂನು ಪಾಲಿಸುತ್ತಾರೆ: ಹೈಕೋರ್ಟ್‌ ನ್ಯಾಯಮೂರ್ತಿ

ಸಮಗ್ರ ನ್ಯೂಸ್ : ಕೈ-ಕಾಲು ಕತ್ತರಿಸುವಂತಹ ಶಿಕ್ಷೆ ವಿಧಿಸಿದರೆ ಮಾತ್ರ ಜನರು ಕಾನೂನು ಪಾಲನೆ ಮಾಡುತ್ತಾರೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಆರ್‌.ನಟರಾಜ್‌ ಮೌಖಿಕವಾಗಿ ಅಭಿಪ್ರಾಯಪಟ್ಟಿದ್ದಾರೆ.

. Ad Widget . Ad Widget . Ad Widget .

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಲಭ್ಯವಿರುವ ಹಕ್ಕುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಧ್ಯಪ್ರಾಚ್ಯ ದೇಶಗಳ ರೀತಿಯಲ್ಲಿಯೇ ನಮ್ಮಲ್ಲೂ ಕೈ-ಕಾಲು ಕತ್ತರಿಸುವ ಶಿಕ್ಷೆ ವಿಧಿಸಿ ಜನರು ಕಾನೂನು ಪಾಲಿಸುತ್ತಾರೆಂದು ನ್ಯಾಯಮೂರ್ತಿ ಹೇಳಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಅತ್ಯಾಚಾರ ಆರೋಪದಲ್ಲಿ ಬಂಧಿನಕ್ಕೊಳಗಾಗಿರುವ ತೆಲಂಗಾಣದ ಯುವಕನೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವೇಳೆ ಈ ಮಾತುಗಳನ್ನಾಡಿದ್ದಾರೆ.
ನಾವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಅಪರಾಧ ಎಸಗುವುದು ಸುಲಭ ಎನ್ನುವಂತಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನೀಡುವ ಕಠಿಣ ಶಿಕ್ಷೆಯನ್ನು ನಮ್ಮಲ್ಲೂ ತಪ್ಪಿತಸ್ಥರಿಗೆ ನೀಡುವಂತಾದರೆ, ಜನರು ತಕ್ಕ ರೀತಿಯಲ್ಲಿ ಕಾನೂನು ಪಾಲಿಸುತ್ತಾರೆಂದು ನುಡಿದಿದ್ದಾರೆ.

Leave a Comment

Your email address will not be published. Required fields are marked *