ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಎರ್ನಾಕುಳಂ ಮಾರ್ಗದಲ್ಲಿ ವೋಲ್ವೊ ಮಲ್ಟಿ ಆ್ಯಕ್ಸಲ್ ಬಸ್ ಹಾಗೂ ಮಂಗಳೂರು-ತಿರುಪತಿ, ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸೋಮವಾರ ಪ್ರಾರಂಭಿಸಲಾಗಿದ್ದು ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು-ಎರ್ನಾಕುಳಂ (ಮಲ್ಟಿ ಆಯಕ್ಸಲ್) ಬಸ್ ರಾತ್ರಿ 9 ಗಂಟೆಗೆ ಹೊರಡಲಿದ್ದು ಎರ್ನಾಕುಳಂನಿಂದ ರಾತ್ರಿ 8.30ಕ್ಕೆ ಹೊರಡಲಿದೆ. ₹1000 ಪ್ರಯಾಣ ದರ ನಿಗದಿ ಮಾಡಲಾಗಿದೆ. ಮಂಗಳೂರು-ತಿರುಪತಿ (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಬಸ್ ಮಧ್ಯಾಹ್ನ 12ಕ್ಕೆ ಮತ್ತು ತಿರುಪತಿಯಿಂದ ಸಂಜೆ 5.30ಕ್ಕೆ ಹೊರಡಲಿದ್ದು ಪ್ರಯಾಣ ದರ ₹1600 ಇದೆ. ಮಂಗಳೂರು-ಹೈದರಾಬಾದ್ (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು ಹೈದರಾಬಾದ್‌ನಿಂದ ಮಧ್ಯಾಹ್ನ 4 ಗಂಟೆಗೆ ಹೊರಡಲಿದ್ದು ಪ್ರಯಾಣ ದರ ₹1800 ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.








