ಜೆಡಿಎಸ್‌ ಪಕ್ಷ ಸೇರ್ಪಡೆಗೊಂಡ BBK ಮಾಜಿ ಸ್ಪರ್ಧಿ ಜಾಹ್ನವಿ

ಸಮಗ್ರ ನ್ಯೂಸ್ :  ಬಿಗ್‌ ಬಾಸ್‌ ಕನ್ನಡ ಮಾಜಿ ಸ್ಪರ್ಧಿ ಜಾಹ್ನವಿ ಅವರು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಜೆಡಿಎಸ್‌ ಪಕ್ಷ ಸೇರ್ಪಡೆ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿಗೆ ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಸ್ವಾಗತಿಸಲಾಗಿದೆ. 

Ad Widget ... ..

ಬಿಗ್‌ ಬಾಸ್‌ನಿಂದ ಹೊರಬಂದ ನಂತರ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜಾಹ್ನವಿ, ಇದೀಗ ತಮ್ಮ ಜೀವನದ ಹೊಸ ಕಾರ್ಯ ಆರಂಭಿಸಿದ್ದಾರೆ. ಜೆಡಿಎಸ್ ಮಹಿಳಾ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇವರು ಪಕ್ಷಕ್ಕೆ ಸೇರ್ಪಡೆಯಾಗಿದ್ದು,  ಸದ್ಯಕ್ಕೆ ಯಾವುದೇ ಪದಾಧಿಕಾರಿ ಹುದ್ದೆ, ಸಂಘಟನಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಪಕ್ಷದ ಮೂಲಕಗಳು ತಿಳಿಸಿವೆ. 

Ad Widget

“ಬಿಗ್‌ಬಾಸ್‌ನಲ್ಲಿ ಭಾಗಹಿಸಿರುವಂತಹವರು, ಕನ್ನಡ ಸಿನಿಮಾದಲ್ಲಿ ನಟಿಸಿದ, ಟಿವಿ ಮಾಧ್ಯಮದ ನಿರೂಪಕಿ ಜಾಹ್ನವಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಒಂದು ಉತ್ತರ ಹೆಸರು ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅವರನ್ನು ನಗರ ಘಟಕದ ಅಧ್ಯಕ್ಷರು ಸ್ವಾಗತಿಸುತ್ತಿದ್ದಾರೆ ” ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.

Leave a Comment

Your email address will not be published. Required fields are marked *