ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ಗ್ರಹಗಳ ಚಲನವಲನ ಹಲವು ರಾಶಿಗಳ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲಿದೆ. ಕೆಲವರಿಗೆ ಉದ್ಯೋಗ ಮತ್ತು ಹಣಕಾಸಿನಲ್ಲಿ ಲಾಭ ದೊರಕಲಿದ್ದು, ಇನ್ನು ಕೆಲವರು ಆರೋಗ್ಯ ಹಾಗೂ ಸಂಬಂಧಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕಾಗುತ್ತದೆ. ಹಾಗಾದರೆ ನಿಮ್ಮ ರಾಶಿಗೆ ಈ ವಾರ (ಮೇ.24 ರಿಂದ 30ರವರೆಗೆ) ಹೇಗಿದೆ? ನೋಡೋಣ…

Ad Widget ... ..

ಮೇಷ: ದ್ವಾದಶದಲ್ಲಿ ಶನಿ, ಲಗ್ನದಲ್ಲಿ ಕುಜ, ತೃತೀಯದಲ್ಲಿ ಗುರುವಿದ್ದು, ಗುರುವಿನ ಕರುಣೆ ಮಾತ್ರದಿಂದಲೇ ಅನೇಕ ಸಂಕಟಗಳಿಂದ ಪಾರಾಗಿದ್ದೀರಿ. ದ್ವಾದಶ ಶನಿ ಸಾಮಾನ್ಯವಾದ ಗ್ರಹದಲ್ಲಿ ಹಾಗೂ ಏಳೂವರೆ ವರ್ಷ ಶನಿ ಸಂಚಾರ ಆರಂಭವಾಗಿ ಹತ್ತಿರ ಒಂದೂವರೆ ವರ್ಷ ಮುಗಿದಿದೆ. ದೈವಭಕ್ತಿ ಮಾರ್ಗದಲ್ಲಿ ಸಾಗಿ ದೈವಬಲ ಪಡೆದರೆ ಬುದ್ಧಿಬಲ, ಗ್ರಹಬಲ ಬಂದು ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿದರೆ ಆಶ್ಚರ್ಯಕರವಾದ ಘಟನೆಯೊಂದು ನಡೆದು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ.

Ad Widget

ವೃಷಭ:
ವೃಷಭ ರಾಶಿಯವರಿಗೆ ದ್ವಿತೀಯ ಗುರುವಿದ್ದು, ಶುಕ್ರ ಬುಧನ ಸಂಯೋಗದಿಂದ ಆರ್ಥಿಕ ಬಿಕ್ಕಟ್ಟು ಪರಿಹಾರವಾಗಿ ಆತ್ಮಸ್ಥೈರ್ಯ, ಧೈರ್ಯ ಬಂದು ಕೆಲಸ ಮಾಡಲು ಅನುಕೂಲವಾಗುತ್ತದೆ. ಜೂನ್ 1ರ ನಂತರ ಗುರುವು ರಾಶಿಗೆ ಬರುವುದರಿಂದ ತಾಳ್ಮೆಯಿಂದ ಇದ್ದರೆ ಚಾಣಕ್ಷತನದಿಂದ ಕೆಲಸ ಮಾಡಿಕೊಳ್ಳಬಹುದು. ಸಂತಸ ಪಡೆಯಬಹುದು. ಸರ್ವಸಂಕಟ ಪರಿಹಾರಕ್ಕಾಗಿ ಗುರು ಚರಿತ್ರೆ 14ನೇ ಅಧ್ಯಾಯ ಪಾರಾಯಣ ಮಾಡಿರಿ.

ಮಿಥುನ:
ಲಗ್ನದಲ್ಲಿ ಗುರು, ಬುಧ, ಶುಕ್ರ, ದ್ವಾದಶದಲ್ಲಿ ಸೂರ್ಯನು ಇರುವುದು ಮುನ್ನೋಟಕ್ಕೆ ಗ್ರಹಸ್ಥಿತಿಯು ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಸಂತೋಷದ ಧ್ವಜಹಾರಿಸುವ ಸಮಯ. ಎರಡನೇ ಮನೆಗೆ ಗುರು ಬಂದಾಗ ಅಸಾಧ್ಯವಾದ ಕೆಲಸಗಳು ಸಾಧ್ಯವಾಗುವಂತೆ ಭಗವಂತನೇ ಫಲ ನೀಡುತ್ತಾನೆ. ಕಷ್ಟಪಟ್ಟು ಸಂಪಾದಿಸಬೇಕು. ನಿರ್ಧಾರಗಳನ್ನು ಮಾಡುವಾಗ ದೈವಭಕ್ತರು, ಜ್ಞಾನಿಗಳ ಜೊತೆ ಚರ್ಚಿಸಿ ಕ್ರಮಕ್ಕೆ ಮುಂದಾಗಿ.

ಕಟಕ:
ಇನ್ನೇನು ಜೂನ್ 1ನೇ ತಾರೀಖಿನಿಂದ ರಾಶಿಗೆ ಗುರು ಬರುವವನಿದ್ದಾನೆ. ದೈವಬಲವೂ ಜೊತೆಯಲ್ಲೇ ಇರುತ್ತದೆ. ನಿಮ್ಮ ದಿನನಿತ್ಯದ ಕಾರ್ಯವೈಖರಿಯನ್ನು ಒಟ್ಟಾರೆ ಲೆಕ್ಕ ಹಾಕಿದರೆ ಅತಿಯಾದ ದುಡಿತ ದೇಹಕ್ಕೆ ಶಿಕ್ಷೆಕೊಟ್ಟಂತೆ. ಆದ್ದರಿಂದ ಸಾಧ್ಯವಾದಷ್ಟು ಮಾತ್ರವೇ ಕೆಲಸ ಮಾಡಬೇಕು. ಶಾಂತವಾದ ಮನಸ್ಸು, ದೇವರ ಧ್ಯಾನ, ತೃಪ್ತಿಯಾದ ಜೀವನವನ್ನು ಗುರುವೇ ನೀಡುತ್ತಾನೆ.

ಸಿಂಹ:
ಸಿಂಹ ರಾಶಿಯವರಿಗೆ ಅಷ್ಟಮದಲ್ಲಿ ಶನಿಯಿದ್ದು, ಗುರುವು ದ್ವಾದಶಕ್ಕೆ ಬರುತ್ತಾನೆ. ಗುರು ತನ್ನ ಉಚ್ಚ ರಾಶಿಗೆ ಬರುವುದು ಶುಭ ಸಂಕೇತವೇ. ಹೆದರುವ ಸಮಯ ಬಂದಿಲ್ಲ. ಆದರೆ ದೃಢವಾದ ಮನಸ್ಸಿನಿಂದ ಗುರುವನ್ನು, ಗುರು ಸ್ವರೂಪನಾದ ತಂದೆ ತಾಯಿಯನ್ನು ಪೂಜಿಸಿದರೆ ಆಸೆಯ ಬಲವನ್ನು ಪಡೆದು ಗಜರಾಜನ ಗಾಂಭೀರ್ಯದಂತಹ ಜೀವನವನ್ನು ನಡೆಸಬಹುದು.

ಕನ್ಯಾ:
ಏಕಾದಶಕ್ಕೆ ಗುರು ಬರುತ್ತಾನೆ. ಗುರುಬಲ ಇರುತ್ತದೆ. ಆದರೆ ಸಪ್ತಮ ಶನಿ ಒಂದಲ್ಲಾ ಒಂದು ರೀತಿಯಲ್ಲಿ ಅಸ್ಥಿರವಾದ ಮನಸ್ಸು, ದೇಹಾರೋಗ್ಯದಲ್ಲಿ ತವಕ, ಚಿಂತೆ ಉಂಟು ಮಾಡುತ್ತಾನೆ. ಏನಿಲ್ಲವೆಂದರೂ ಏನಾದರೊಂದು ಹುಳುಕು ತೋರಿಸುತ್ತಾನೆ. ಅದಕ್ಕೆ ಪರಿಹಾರ-ಈಶ್ವರನ ದರ್ಶನ, ಪ್ರದೋಷ ಕಾಲದಲ್ಲಿ ಸಹಸ್ರನಾಮಾರ್ಚನೆ, ಪಂಚಾಮೃತ ಅಭಿಷೇಕ ಮಾಡಿಸಿ.

ತುಲಾ:
ಸಿಂಹವೆಂಬುದು ಕಾಡಿನಲ್ಲಿದ್ದರೂ ಭಯಪಡಿಸುತ್ತದೆ. ನಗರಕ್ಕೆ ಬಂದರಂತೂ ಇನ್ನೂ ಹೆದರಿಕೆ. ಕಷ್ಟ ಬಂತೆಂದು ಭಯದಿಂದ ಓಡದೆ ಹೆಚ್ಚಿನ ಕೆಲಸ ಮಾಡಲು ಮನಸ್ಸು ಮಾಡಿದರೆ ಕುಬೇರನ ಐಶ್ವರ್ಯವನ್ನೇ ಸಂಪಾದಿಸಬಹುದು. ಪ್ರಯತ್ನ ಮುಂದುವರಿಸಿ.

ವೃಶ್ಚಿಕ:
ವೃಶ್ಚಿಕ ರಾಶಿಯವರಿಗೆ ಈ ಸಮಯವು ನಿಂತ ನೀರಂತೆ ಕಾಣುವುದು. ಕೆಲಸವು ಸಾಗುವುದು ನಿಧಾನ. ಕೆಲಸಕ್ಕೆ ವೇಗವನ್ನು ಕೊಡಲು ಸುಬ್ರಹ್ಮಣ್ಯ ದೇವರೇ ಬೇಕು. ಕಾದು ನಿಲ್ಲದೆ ಪ್ರಯತ್ನವನ್ನು ಮುಂದುವರಿಸಿದರೆ ದೈವಬಲವನ್ನು ಪಡೆಯುವ ಕಾಲ ಹತ್ತಿರದಲ್ಲಿದೆ.

ಧನಸ್ಸು:
ಚತುರ್ಥದಲ್ಲಿ ಶನಿಯಿದ್ದು ನಿಮ್ಮ ಬಾಯಿಂದ ಹರಿತವಾದ ಮಾತನ್ನು ಆಡಿಸುತ್ತಾನೆ. ನಾಲಿಗೆಯು ಶುದ್ಧವಾಗಿರಬೇಕೇ ಹೊರತು ಆಯುಧ ಆಗಬಾರದು. ಗುರು ಅಷ್ಟಮಕ್ಕೆ ಬರುವುದರಿಂದ ಜಾಣ್ಮೆಯಿಂದ ಈ ಸಮಯದ ಸದುಪಯೋಗ ಪಡೆಯಿರಿ, ಸುಬ್ರಹ್ಮಣ್ಯ ಅಷ್ಟಕ ಪಠಿಸಿದರೆ ಒಳ್ಳೆಯ ಫಲ ಸಿಗುತ್ತದೆ.
ಮಕರ: ಶನಿಯು ತೃತೀಯದಲ್ಲಿದ್ದು, ಜೂನ್ 1 ರಿಂದ ಗುರುವು ಸಪ್ತಮಕ್ಕೆ ಬಂದು ದೈವ ಬಲದ ಕ್ಷಣವನ್ನು ನೀವು ಅನುಭವಿಸುವಂತೆ ಮಾಡುತ್ತಾನೆ. ಸರ್ವತ್ರ ವಿಜಯವನ್ನು ಕೊಡಲು ಮಂತ್ರಾಲಯದ ಗುರು ರಾಯರನ್ನು ಪೂಜಿಸಿ ಬೇಕಾದ ವರವನ್ನು ಪಡೆದುಕೊಳ್ಳಿ.

ಕುಂಭ:
ರಾಶ್ಯಾಧಿಪತಿ ಶನಿಯು ದ್ವಿತೀಯದಲ್ಲಿದ್ದಾನೆ, ಗುರುವು ಪಂಚಮದಲ್ಲಿದ್ದಾನೆ. ಗುರು ನಿಮ್ಮನ್ನು ಸಲುಹುತ್ತಾನೆ, ಶನಿ ಸಂಚಾರದಲ್ಲಿ ಯೋಚಿಸಿ ನಿರ್ಧರಿಸದೇ ಏಕಾಏಕಿ ಕೆಲಸ ಪ್ರಾರಂಭಿಸಿದರೆ ಕೆಲಸವು ಅರ್ಧಕ್ಕೆ ನಿಂತು ಹೋಗುತ್ತದೆ. ಗುರುಮಹಿಮೆಯನ್ನು ಅರಿತು ನಡೆಯಿರಿ. ಗುರುಚರಿತ್ರೆಯ 18ನೇ ಅಧ್ಯಾಯ ಓದಿರಿ. ಇಷ್ಟಾರ್ಥ ಪಡೆಯಿರಿ.

ಮೀನ:
ರಾಶ್ಯಾಧಿಪತಿಯು ಉಚ್ಚನಾಗಿ ಬರುತ್ತಾನೆ. ಆದರೆ ಶನಿಯ ಸಂಚಾರ ಲಗ್ನದ ಮೇಲೆ ಪ್ರಭಾವ ಬೀರುವುದರಿಂದ ಇನ್ನೂ ಮೂರೂವರೆ ವರ್ಷ ಕಾಲವು ಶನಿಯನ್ನು ಪೂಜಿಸಿ ದಾಟಬೇಕೇ ಹೊರತು ಈಜು ಬಂದರೂ ಸಮುದ್ರದಲ್ಲಿ ಈಜಿ ದಡವನ್ನು ದಾಟುತ್ತೇನೆಂದುಕೊಳ್ಳಬಾರದು. ಗುರುನರಸಿಂಹನನ್ನು ಪೂಜಿಸಿ. ಸಾಧ್ಯವಾದಲ್ಲಿ ಸಿಂಹಾದ್ರಿಯ ನರಸಿಂಹನನ್ನು ದರ್ಶಿಸಿ.

Leave a Comment

Your email address will not be published. Required fields are marked *