ಸಮಗ್ರ ನ್ಯೂಸ್: ತಮಿಳುನಾಡಿನ ಹಿಂದಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಉದಯನಿಧಿ ಸ್ಟಾಲಿನ್ ಹೊಸ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದಾರೆ. ಮೊದಲ ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ(ಮೇ 12) ಶಾಸಕರಾಗಿ ಅವರು ಪ್ರಮಾಣವಚನ ಸ್ವೀಕರಸಿದ್ದರು. ಸದನದಲ್ಲಿ ಎರಡನೇ ದಿನ ವಿರೋಧ ಪಕ್ಷದ ನಾಯಕನಾಗಿ ಭಾಷಣ ಮಾಡಿದ್ದಾರೆ.
ಉದಯನಿಧಿ ಸ್ಟಾಲಿನ್ ತಮ್ಮ ಭಾಷಣದ ಕೊನೆಯಲ್ಲಿ ಆಡಿದ ಮಾತು ಈಗ ಮತ್ತೆ ವಿವಾದ ಹುಟ್ಟಾಕ್ಕಿದೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿರುವುದು ಬಹಳ ವೈರಲ್ ಆಗ್ತಿದೆ. 3 ವರ್ಷಗಳ ಹಿಂದೆ ಕೂಡ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಗೆ ಉದಯನಿಧಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೆದಿತ್ತು.
ಡಿಎಂಕೆ ಪಕ್ಷದ ವಿರುದ್ಧ ಗೆದ್ದು ಅಧಿಕಾರಕ್ಕೆ ಏರಿರುವ ನೂತನ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ತಮಿಳು ಏಳ್ಗೆ, ತಮಿಳುನಾಡ ಬಾಳ್ಗೆ, ಜನರನ್ನು ವಿಭಜಿಸುವ ಸನಾತನ ಧರ್ಮ ಕಂಡಿತ ನಿರ್ಮೂಲನೆ ಆಗಬೇಕು. ನಮಸ್ಕಾರ.. ಧನ್ಯವಾದ ಎಂದು ಹೇಳಿಕೆ ಉದಯನಿಧಿ ತಮ್ಮ ಭಾಷಣ ಮುಗಿಸಿದ್ದಾರೆ. ಕೂಡಲೇ ಸಿಎಂ ವಿಜಯ್ ಕೈಮುಗಿದು ಪ್ರತಿಕ್ರಿಯಿಸಿದ್ದಾರೆ. ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂದು ಅವರು ಹೇಳಿವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಜಯ್ ಕ್ರಿಶ್ಚಿಯನ್, ಬಿಜೆಪಿ ವಿರೋಧಿ ಎನ್ನುವ ಆರೋಪದ ನಡುವೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸನಾತನ ಧರ್ಮದ ಬಗ್ಗೆ ದ್ರಾವಿಡ ಡಿಎಂಕೆ ಪಕ್ಷ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳನ್ನು ಹೊರತುಪಡಿಸಿದ ಟಿವಿಕೆ ಪಕ್ಷ ಅಧಿಕಾರ ಹಿಡಿದಿದೆ. ಇದೆಲ್ಲದರ ನಡುವೆ ಉದಯನಿಧಿ ಹೇಳಿಕೆ ವೈರಲ್ ಆಗ್ತಿದೆ.








