ಪಶ್ಚಿಮ ಬಂಗಾಳದ ಮೊದಲನೇ ಹಂತದ ಹಾಗೂ ತಮಿಳುನಾಡಿನ ವಿಧಾನಸಭೆಗೆ ಇಂದು ಚುನಾವಣೆ

ಸಮಗ್ರ ನ್ಯೂಸ್: ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯ ಹಂತ-1 ಗುರುವಾರ ನಡೆಯಲಿದೆ. ಅಂತೆಯೇ ತಮಿಳುನಾಡು ಚುನಾವಣೆ ಕೂಡ ಏಕಹಂತದಲ್ಲಿ ಇದೇ ದಿನ ಜರುಗಲಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಿಗೆ 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.

Ad Widget ... ..

ಡಿಎಂಕೆ-ಕಾಂಗ್ರೆಸ್‌ ಕೂಟ, ಅಣ್ಣಾಡಿಎಂಕೆ-ಬಿಜೆಪಿ ಕೂಟ ಹಾಗೂ ವಿಜಯ್‌ ಅವರ ಟಿವಿಕೆ ನಡುವೆ ತ್ರಿಕೋನ ಕದನ ಏರ್ಪಟ್ಟಿದೆ.

Ad Widget

ಇನ್ನು ಪ.ಬಂಗಾಳದ 294 ಸ್ಥಾನಗಳ ಪೈಕಿ 152 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದೆ. ಟಿಎಂಸಿ-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಆದರೆ ಇದೇ ವೇಳೆ ಕಾಂಗ್ರೆಸ್-ಎಡರಂಗ ಏನು ಕಮಾಲ್ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ, 1.75 ಕೋಟಿ ಮಹಿಳೆಯರು ಸೇರಿದಂತೆ 3.60 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತದಾನಕ್ಕೆ ಅರ್ಹರಾಗಿದ್ದಾರೆ.

ಬಂಗಾಳದ 2ನೇ ಹಂತದ ಚುನಾವಣೆ ಏ.29ಕ್ಕೆ ನಡೆಯಲಿದೆ. ತಮಿಳುನಾಡು, ಬಂಗಾಳ ಸೇರಿ ಚುನಾವಣೆ ನಡೆದಿರುವ 4 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ಮೇ 4ಕ್ಕೆ ನಡೆಯಲಿದೆ.

Leave a Comment

Your email address will not be published. Required fields are marked *